ಅರಣ್ಯ ಇಲಾಖೆ ಅಳವಡಿಸಿದ ಬೋನಿಗೆ ಬಿದ್ದ ಐದನೇ ನರಭಕ್ಷಕ ಚಿರತೆ
ಲೋಕದರ್ಶನವರದಿ
ಬಳ್ಳಾರಿ16: ತಾಲೂಕು ಸಮಿಪದ ದೇವಲಾಪುರ ಗ್ರಾಮದ ರಾಜನಮಟ್ಟಿಯಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಐದನೇ ನರಭಕ್ಷಕ ಚಿರತೆ ಬೆಳಗಿನ ಜಾವ ಸೆರೆಯಾಗಿದೆ. ಗ್ರಾಮದ ರಾಜನಮಟ್ಟಿಯ ರುದ್ರಭೂಮಿಯಲ್ಲಿ ಇರಿಸಿದ್ದ ಬೋನಿಗೆ ಬೆಳಿಗ್ಗೆ 6:20ರ ಸುಮಾರಿಗೆ ಗಂಡು ಚಿರತೆ ಬೋನಿಗೆ ಬಿದ್ದಿರುವುದನ್ನು ನೋಡಿದ್ದಾರೆ.
2018ರ ಡಿ.11 ಮತ್ತು 25ರಂದು ನರಭಕ್ಷಕ ಚಿರತೆಗಳು ಇಬ್ಬರು ಮಕ್ಕಳನ್ನು ಬಲಿ ಪಡೆದಿದೆ. ಈ ಭಾಗದ ಜನರು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಚಿರತೆ ದಾಳಿಗೆ ಮಕ್ಕಳು ಸೇರಿದಂತೆ ಜನರು ಒಡಾಡಲು ಭಯ ಪಡುವ ಪರಿಸ್ಥಿತಿ ನಿಮರ್ಾಣವಾಗಿತ್ತು. ಹೆಚ್ಚಿದಂತೆ ಅಧಿಕಾರಿಗಳ ಕಾರ್ಯಚರಣೆ ಚುರುಕುಕೊಂಡು ಬೋನುಗಳನ್ನು ಅಳವಡಿಸಿದ್ದರು.
ಮೂರು ಡಿಜಿಟಲ್ ಲ್ಯಾಫ್ ಕ್ಯಾಮರ ನೀಗಾ ವಹಿಸಿದೆ. ಜನರ ಸಹಕಾರದೊಂದಿಗೆ ಕ್ಯಾಂಬಿಂಗ್ ಡ್ರೋನ್ ಕ್ಯಾಮಾರ ಚಿರತೆ ಚಲನ, ವಲನ ಸೇರಿದಂತೆ ನಿರಂತರವಾಗಿ ಕಾರ್ಯಚರಣೆ ನಡೆಸಿದ್ದರಿಂದ 2018ರ ಡಿ.21, 28, 30 ಹಾಗೂ 2019ರ ಜ.03 ರಂದು ಒಟ್ಟು ನಾಲ್ಕು ಚಿರತೆಗಳು ಸೆರೆ ಇಡಿಯಲಾಗಿತ್ತು.
ದೇವಲಾಪುರದ ಕಾನಮಟ್ಟಿ, ಕೆರೆಗುದ್ದ, ರಾಜನಮಟ್ಟಿ, ಸೋಮಲಾಪುರದ ಯರ್ರದಮಟ್ಟಿ, ದರೋಜಿ, ಮೆಟ್ರಿ, ಪ್ರದೇಶಗಳಲ್ಲಿ ಚಿರತೆಗಳು ಜನರ ಕಣ್ಣಿಗೆ ಬಿದ್ದಿರುವುದರಿಂದ ಹಾಗೂ ನಾಯಿ, ಮೇಕೆ, ಕಾಡುಬೆಕ್ಕು ಸೇರಿ ಇತರ ಪ್ರಾಣಿಗಳನ್ನು ತಿಂದು ಹಾಕಿದ ಚಿರತೆಗಳ ನೆರಗೆ ಕಾರ್ಯಚರಣೆ ಮುಂದುವರೆಸಿದ ಹಿನ್ನಲೆ ಜ.15ರಂದು ಬೆಳಗಿನ ಜಾವ ಚಿರತೆ ಬೋನಿನಲ್ಲಿ ಬಿದ್ದಿದೆ.
ಈ ಭಾಗದ ಜನರ ಆತಂಕ ಸ್ವಲ್ಪ ಮಟ್ಟದಲ್ಲಿ ದೂರವಾದರೂ ಇನ್ನೇರಡು ಚಿರತೆಗಳು ಇರಬಹುದೆಂಬ ಆತಂಕದಲ್ಲಿದ್ದಾರೆ.