ಸಂಘಟಿತ ಹೋರಾಟ ಯಶಸ್ಸಿನ ರಹದಾರಿ: ಅಶೋಕ ಲಗಮಪ್ಪಗೋಳ
ಲೋಕದರ್ಶನ ವರದಿ
ಗೋಕಾಕ 02: ಎಲ್ಲ ಬಗೆಯ ತಾರತಮ್ಯ ವೈಷಮ್ಯಗಳನ್ನು ದೂರಮಾಡಿ ಸಂಘಟಿತರಾಗಿ ಹೋರಾಟ ಮಾಡಿದರೆ ಮಾತ್ರ ನಿಶ್ಚಿತ ಉದ್ದೇಶ ಈಡೇರಿಸಿಕೊಳ್ಳಬಹುದು ಎಂದು ಬಹುಜನ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಅಶೋಕ ಲಗಮಪ್ಪಗೋಳ ಅಭಿಪ್ರಾಯ ಪಟ್ಟರು.
ಮುಂಬರುವ ದಿನಗಳಲ್ಲಿ ಗೋಕಾಕ ನಗರದಲ್ಲಿ ಆಯೋಜಿಸಲಾಗುವ ಬಹುಜನ ಹಿತರಕ್ಷಣಾ ವೇದಿಕೆಯ ಬ್ರಹತ್ ಸಮಾವೇಶದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಶೋಕ ಲಗಮಪ್ಪಗೋಳ ರವರು ಧರ್ಮಾತೀತ, ಜಾತ್ಯಾತೀತ, ರಾಜಕೀಯೇತರ, ಧೋರಣೆಯ ಈ ವೇದಿಕೆಯು ಹಕ್ಕು ಹಿತಾಸಕ್ತಿ ಅಭಿವೃದ್ಧಿಯಿಂದ ವಂಚಿತವಾಗಿರುವ ಯಾವುದೇ ವ್ಯಕ್ತಿಯ ದ್ವನಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಉಪನ್ಯಾಸಕ ಎಸ. ಎಂ. ಪೀರಜಾದೆಯವರು ಸ್ವಾಗತಿಸಿ ವೇದಿಕೆಯ ಸಮಾವೇಶದ ರೂಪು ರೇಷೆಗಳನ್ನುಗಳನ್ನು ವಿವರಿಸಿ ಎಲ್ಲ ಪದಾಧಿಕಾರಿಗಳು ಕಾರ್ಯಕರ್ತರು ಹಿತೈಷಿಗಳು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಿದರು.
ಮುಖ್ಯ ಅತಿಥಿಗಳಾದ ಭಾಸ್ಕರ ಹಿರೇಮೇತ್ರಿ, ಎಂ .ಅಯ್.ಜೋತಾವರ್, ಶಿಕ್ಷಕ ಹನುಮಂತಗೊಳ ರವರು ವಿವಿಧ ಸಲಹೆ ಸೂಚನೆಗಳೊಂದಿಗೆ ಮಾರ್ಗದಶನ ಮಾಡಿದರು.
ಸಭೆಯಲ್ಲಿ ಪರಶುರಾಮ್ ಗೊಲ್ಲರ ವಿ. ಆರ್. ತಹಸೀಲ್ದಾರ್ ಸುಭಾಸ್ ಸಣ್ಣತಿಮ್ಮಪ್ಪಗೋಳ ಉದಯಕುಮಾರ್ ಪೂಜೇರಿ ಇತರರರು ಉಪಸ್ಥಿತರಿದ್ದರು.
ಸಂವಿಧಾನ ದಿನಾಚರಣೆ ನಿಮಿತ್ಯ ಸಂವಿಧಾನ ಪೂರ್ವ ಪೀಠಿಕೆಯನ್ನು ಬೋಧಿಸಲಾಯಿತು. ಮನೋಜ್ ಬಸ್ತವಾಡ್ಕರ್ ರವರು ವಂದನಾರ್ಪಣೆಗೈದರು