ನಮ್ಮದಾವುದು
-ಅನಿತಾ ಮಾಲಗತ್ತಿ
ಸದಾಶಿವನಗರ, ಬೆಳಗಾವಿ
ಒಂದೂರಿನಲ್ಲಿ ಒಬ್ಬ ರೈತನಿದ್ದ. ತುಂಡು ಭೂಮಿಯನ್ನು ಹೊಂದಿದ್ದ ರೈತ ಕಡುಬಡವನಾಗಿದ್ದು ತುಸು ಸೋಮಾರಿಯೂ ಆಗಿದ್ದ. ಬಡತನದಿಂದ ಬೇಸತ್ತ ಅವನು ಒಂದು ನಸುಕಿನಲ್ಲಿ ಮನೆ ತೊರೆದು ಎತ್ತರವಾದ ಗುಡ್ಡ ಏರಿದ. ಅಲ್ಲೊಂದು ಕಲ್ಲು ಬಂಡೆ ಮೇಲೆ ಕುಳಿತು ದೇವರನ್ನು ಪ್ರಾಥರ್ಿಸತೊಡಗಿದ. ಅವನ ನಿಶ್ಚಲ ಮನಸ್ಸಿನ ತಪಸ್ಸಿಗೆ ದೇವರು ಮೆಚ್ಚಿದ. ಪ್ರತ್ಯಕ್ಷನಾಗಿ "ಭಕ್ತ ನಿನಗೇನು ಬೇಕು"ಕೇಳಿದ.
ಕೈ ಮುಗಿಯುತ್ತಿದ್ದ ರೈತ ತುಸು ಗೋಣು ಕೆಳಗೆ ಮಾಡಿದಾಗ ತನ್ನ ಕೈಗಳು ಕಂಡವು. ಇದ್ದಕ್ಕಿದ್ದಂತೆ ದೇವರೇ "ನನಗೆ ಹತ್ತು ಕೈಗಳು ಬೇಕು" ಎಂದ.
ದೇವರು ತಥಾಸ್ತು ಎನ್ನುತ್ತಿದ್ದಂತೆ ಎರಡೂ ಕಡೆ ಐದೈದು ಕೈಗಳು ಬೆಳೆದು ರೈತ ಸಂತೋಷಗೊಂಡ. ಇನ್ನು ಮುಂದೆ ನಾನು ಬಹಳಷ್ಟು ದುಡಿಯುವೆ ಎಂದು ಅವನು ಹುಲ್ಲು ಕಿತ್ತುವಾಗ, ತೆನೆ ಕತ್ತರಿಸಲು ಹತ್ತೂ ಕೈಗಳು ಸಹಾಯ ಮಾಡಿದವು. ಊಟವನ್ನು ಕೆಲವೇ ನಿಮಿಷಗಳಲ್ಲಿ ಮುಗಿಸಿಬಿಡುತ್ತಿದ್ದ. ಒಂದು ಸಣ್ಣ ಪಾಪುವನ್ನು ಆಡಿಸುತ್ತಾ ಒಂದು ಕೈಯಿಂದ ಪ್ರೀತಿಯಿಂದ ಚಿವುಟಿದ. ಐದೂ ಕೈಗಳು ಸಹಕರಿಸಿದವು. ಹೆಂಡತಿಗೆ ಒಂದು ಏಟು ಹಾಕಿದರೂ ಅವು ಐದು ಕೈಗಳಿಂದಲೂ ಹೊಡೆತ ಬೀಳುತ್ತಿದ್ದವು. ಸಾಕಾಗಿ ಗಿಡದ ನೆರಳಿಗೆ ಕುಳಿತು ಗದ್ದದ ಕೆಳಗೆ ಕೈ ಹಚ್ಚಿದ ಎಲ್ಲಾ ಕೈಗಳೂ ಸಹಕರಿಸಿ ಹಲ್ಲು ನೋವು ಬಂತು. ಮಲಗುವಾಗ ದಿಂಬಿಗೆ ಕೈ ಹಚ್ಚಿದ. ಸಹಕಾರದಿಂದ ನಿದ್ರೆ ಹಾಳಾಯಿತು.
ಮತ್ತೆ ಅದೇ ಬಂಡೆಯ ಮೇಲೆ ಹೋಗಿ ಕುಳಿತು ತಪಸ್ಸು ಮಾಡತೊಡಗಿದ. ದೇವರು ನಗುತ್ತಲೇ ಪ್ರತ್ಯಕ್ಷನಾದ. ರೈತ "ದೇವರೇ ಈ ಕೈಗಳಿಂದ ನನಗೆ ಸಹಾಯಕ್ಕಿಂತ ಅಡಚಣೆಯೇ ಆಗಿದೆ. ಹಾಗಾಗಿ ಈ ಕೈಗಳನ್ನು ತೆಗೆದುಕೋ ನನ್ನ ಹೊಲ ನೂರ್ಮಡಿಯಾಗಲಿ ಸಾಕು" ಎಂದ. ತಥಾಸ್ತು ಎಂದ ದೇವರು ಅದೃಷ್ಯನಾದ. ಹೊಲ ನೂರ್ಮಡಿ ಆಯ್ತು. ಬೇಕಾದಷ್ಟು ಒಳ್ಳೆಯದಾಗಬಹುದೆಂದುಕೊಂಡ. ದಿನಕ್ಕೊಂದಾವತರ್ಿ ಹೊಲ ಸುತ್ತಿ ಬರುವುದರಲ್ಲೇ ಸುಸ್ತಾದ. ಒಬ್ಬನೇ ಕೆಲಸ ನಿಭಾಯಿಸುವುದೂ ಕಷ್ಟವಾಯಿತು. ಕೆಲವೇ ದಿನಗಳಲಿ ಸುಸ್ತಾದ.
ಮತ್ತೂ ಗುಡ್ಡ ಏರಿ ತಪಸ್ಸುಗೈದ. ಈಗ ತುಸು ಹುಷಾರಾಗಿದ್ದ. ಚೀಲದ ತುಂಬಾ ಕೇವಲ ಹಣವನ್ನು ಬೇಡಿಕೊಂಡ. ಇವನ ಮುಗ್ಧ ಭಕ್ತಿಗೆ ಮೆಚ್ಚಿ ಚೀಲದ ತುಂಬಾ ಹಣವನ್ನು ನೀಡಿದ.
ಈಗ ಸಂತೋಷದಿಂದ ದಿನ ನೂಕತೊಡಗಿದ. ಆದರೆ ದಿನ ದಿನಕ್ಕೆ ಹುಚ್ಚುಚ್ಚಾಗಿ ಹಣ ಖಚರ್ು ಮಾಡುವುದನ್ನು, ದಾನ ಧರ್ಮಗೈಯುಯವುದನ್ನು ಕಂಡ ನೆರೆಹೊರೆಯವರು ಮೂಕಜರ್ಿ ಹಾಕಿದ್ದ ಕಾರಣ ಆದಾಯ ತೆರಿಗೆ ಇಲಾಖೆಯವರು ಕೇಳುವ ಪ್ರಶ್ನೆಗಳಿಗೆ ತಬ್ಬಿಬ್ಬಾದ ರೈತ. ಸತ್ಯ ಹೇಳಿದರೆ ಹೊಡೆತ ಬಿದ್ದವು. ಜೈಲಿನಿಂದ ಹೊರಬಂದ ರೈತ ದೃಢ ನಿಧರ್ಾರದೊಂದಿಗೆ ಗುಡ್ಡ ಏರಿದ. ಈಗ ದೈನ್ಯತೆಯೊಂದಿಗೆ "ದೇವರೇ ನನಗೆ ಏನೂ ಬೇಡ. ನೀನು ಕೊಟ್ಟಿದ್ದೆಲ್ಲವನ್ನೂ ಹಿಂದಕ್ಕೆ ತೆಗೆದುಕೋ. ನನ್ನ ಹೊಲದಲ್ಲಿಯೇ ನಾನು ಚೆನ್ನಾಗಿ ದುಡಿದು ಸಂಪಾದಿಸುವ ವರ ನೀಡು" ಎಂದು ಬೇಡಿಕೊಂಡ.
"ಭಕ್ತ ಆನೆ ಭಾರ ಆನೆಗೆ, ಇರುವೆ ಭಾರ ಇರುವೆಗೆ ಅಂತ ನೀವೇ ಗಾದೆ ಮಾಡಿಕೊಂಡಿದ್ದೀರಿ. ಅರಸ ಆಳಾಗುವುದು ಎಷ್ಟು ಕಷ್ಟವೋ, ಆಳು ಅರಸನಾಗುವುದೂ ಅಷ್ಟೇ ಕಷ್ಟ. ನಿನಗೆ ಈಗ ತಿಳಿಯಿತೇ? ಆಯಿತು ಎಲ್ಲವೂ ಒಳ್ಳೆಯದಾಗುತ್ತದೆ" ಎಂದು ದೇವರು ಆದೃಶ್ಯನಾದ.
ಅಂದಿನಿಂದ ರೈತ ಮೈ ಮುರಿದು ದುಡಿದ. ತನ್ನ ಪುಟ್ಟ ಹೊಲದಲ್ಲಿ ಚೆನ್ನಾಗಿ ಬೆಳೆ ಬೆಳೆದು ಮಾರಿ ಬಂದ ಹಣದಲ್ಲಿ ಖಚರ್ಾಗಿ ಉಳಿದ ಹಣವನ್ನು ಕೂಡಿಟ್ಟು ಪಕ್ಕದ ಹೊಲವನ್ನು ಖರೀದಿಸಿದ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದ. ಮಕ್ಕಳೂ ಚೆನ್ನಾಗಿ ಓದಿ ಒಳ್ಳೆಯ ಕೆಲಸದಲ್ಲಿದ್ದಾರೆ. ಮತ್ತೆ ದುಡಿದ ಮತ್ತೆ ಗಳಿಸಿದ ಹೀಗೆಯೇ ನಿಧಾನವಾಗಿ ಬೆಳೆದ ಅವನು ಊರಗೌಡನಿಗೆ ಸರಿಸಮನಾಗಿ ಬೆಳೆದಿದ್ದಾನೆ, ಹಳ್ಳಿಯ ತುಂಬಾ ಹೆಸರು ಗಳಿಸಿದ್ದಾನೆ.
ನೀತಿ: ನಾವು ಕಷ್ಟಪಟ್ಟು ದುಡಿದದ್ದು ನಮ್ಮದಾಗುತ್ತದೆ.