ಕಥೆ

ಸಕರ್ಾರಿ ಶಾಲೆ

ಸಕರ್ಾರಿ ಶಾಲೆ

-ಅನಿತಾ ಮಾಲಗತ್ತಿ

ಸದಾಶಿವನಗರ, ಬೆಳಗಾವಿ

ತಲೆ ತುಂಬಾ ಎಣ್ಣೆ ಹಾಕಿ ಬಿಗಿಯಾಗಿ ಕಟ್ಟಿದ ಜಡೆ, ಎತ್ತರವಾಗಿ ಉಟ್ಟ ಸೀರೆ, ಅಡಿಕೆ-ಎಲೆ ಹಾಕಿ ತಿಂದು ಜೀಣರ್ಿಸಿದ ಕುರುಹು ಸೂಚಿಸುತ್ತಿರುವ ಕೆಂಪು ಹಲ್ಲುಗಳು. ಎರಡೇ ಗಾಜಿನ ಬಳೆ, ಕರಿಮಣಿಸರ, ಕೊರಳಲ್ಲಿ ವಸ್ತ್ರದಲ್ಲಿ ಕಟ್ಟಿಕೊಂಡ ಲಿಂಗ. ದಟ್ಟ ಹಣೆಯಲ್ಲಿ ಮೂರು ಗೆರೆ ವಿಭೂತಿ ಮಧ್ಯ ನಾಕಾಣೆ ಗಾತ್ರದ ಕುಂಕುಮ. ಬಾಯ್ತುಂಬಾ ನಗುವೇ ಅವಳ ಆಭರಣ. ಓಣಿಯಲ್ಲಿ ಅವಳು ಎಂಟ್ರಿ ಆಗಿದೆ ಎಂದು ಹೇಳುವುದೇ ಬೇಡ. ಅಂಥ ಗಂಟೆ ಮೊಳಗುವಂಥ ಕಂಚಿನ ಕಂಠ, ಅವಳೇ ಕೆಂಪಿ.

ಹೆಸರಿಗೆ ತಕ್ಕಂಥ ಬಣ್ಣ ಎತ್ತರ ನಿಲುವು ಹೊಂದಿದ್ದ ಕೆಂಪಿಗೆ ಎಲ್ಲ ಕೊಟ್ಟ ದೇವರು ಕಡು ಬಡತನದಲ್ಲಿ ಬಿಟ್ಟು ಬಿಟ್ಟಿದ್ದ. ಆದರೆ ಒಮ್ಮೆಯೂ ತನ್ನ ಹಣೆಬರಹ ಹಳಿದು ಕೊಳ್ಳದ ಕೆಂಪಿ, ಗಂಡನನ್ನೂ ಸಾಕುತ್ತಾಳೆ. ಮೂರು ಮಕ್ಕಳನ್ನು ಸಕರ್ಾರಿ ಶಾಲೆಯಲ್ಲಿ ಓದಿಸುತ್ತಿದ್ದ ಕೆಂಪಿಗೆ ಇದ್ದಕ್ಕಿದ್ದಂತೆ ನಾಲ್ಕನೇ ಹಾಗೂ ಸಣ್ಣ ಮಗನನ್ನು ಮಾತ್ರ ಖಾಸಗಿ ಶಾಲೆಯಲ್ಲಿ ಕಲಿಸುವ ಹುಚ್ಚು ಹಿಡಿದುಬಿಟ್ಟಿತ್ತು. 

ಕೆಂಪಿ ಯಾರೊಂದಿಗೂ ಜಗಳ ಕಾಯುವವಳಲ್ಲ. ಮಾತಿಗಿಂತ ಹೆಚ್ಚಿಗೆಯೇ ಕೆಲಸ ಮಾಡುವವಳು. ಗಿರಣಿ ಹೋಗುವುದಾದರೆ, ಮೆಣಸಿನಕಾಯಿ ಬಿಡಿಸುವುದೆಂದರೆ, ಸಂಡಿಗೆ ಹಪ್ಪಳ ಮಾಡುವಾಗ ಹೀಗೆ ಯಾವುದೇ ಕೆಲಸವಿರಲಿ ನಕಾರವಿಲ್ಲದೇ ಪಾಲ್ಗೊಳ್ಳುತ್ತಿದ್ದಳು. 

ಸಾಲಿಗೇರಿ ಸಾಹೇಬ್ರು, ಮುವತ್ತ್ಮೂರುಮಠ ಸರ್, ಬಾವಿಕಟ್ಟಿ ಮೆಡಮ್ಮ ಹೀಗೆ ಸಹಾಯ ಹರಿದು ಬಂದು ಕೆಂಪಿ ತಡಮಾಡದೇ ಫಾರ್ಮ ತಂದಳು. ಅವರಿವರ ಕಾಲು ಹಿಡಿದು ತುಂಬಿಸಿ ಯುನಿಫಾರ್ಮ, ಬೂಟು ತಂದು ಮೈಸೂರು ಸ್ಯಾಂಡಲ್ ಸೋಪಿನಿಂದ ಮಗ ನಿರ್ಜನನ್ನು (ನಿರಂಜನನ ಹೆಸರು ಕೆಂಪಿಯ ಬಾಯಲ್ಲಿ ನಿರ್ಜ ಆಗಿತ್ತು) ಸ್ವಚ್ಛವಾಗಿ ಮೂರು ಸಾರಿ ಜಳಕ ಮಾಡಿಸಿ ಕ್ರಾಫ್ ತೆಗೆದು, ಅಂಗೈಯಲ್ಲಿ ಪೌಡರ್ ಹಾಕಿಕೊಂಡು ಎರಡೂ ಕೈಯ್ಯಿಂದ ಟಫ್ ಅಂತ ಬಡಿದು ಹಚ್ಚಿಯೇ ಹಚ್ಚಿದಳು. ಕರ್ರಗೆ ಹಂಚಿನಂತೆ ಮಿರಿಮಿರಿ ಮಿಂಚುತ್ತಿದ್ದ ಅವನು ಬೆಳಗಾಗುವುದಾದರೂ ಹೇಗೆ?

"ಏನ್ಮಾಡ್ಲಿ ನಿಮ್ಮಪ್ಪನ ಬಣ್ಣ ಬಡ್ಕೋಂಡು ಹುಟ್ಟಿ ಬಂದಿ ಎನ್ನುತ್ತಾ, ನಾಳೆ ಆ ಸಾಲಿಗೇರಿ ಅವರ ಮನ್ಯಾಗ ಮಕ್ಳ ಹಚ್ಗೋತಾವಲ್ಲ ಅಂತ ಮಲಾಮ (ಫೇರ್ ಆಯಂಡ್ ಲವಲಿ) ತಂದು ಹಚ್ಚತೇನಿ ವಸಿ ಬೆಳ್ಳಗಾಗವಂತಿ" ಎಂದು ಕೊಳ್ಳುತ್ತಲೇ ದೃಷ್ಟಿ ತೆಗೆದಳು

ತಾನೇ ಮಗನ ಕೈ ಹಿಡಿದು ಅಡ್ಡ ಬಡ್ಡ ಕಾಲು ಹಾಕುತ್ತಾ ಶಾಲೆ ಕಡೆಗೆ ಹೆಮ್ಮೆಯಿಂದ ಕರೆದೊಯ್ದು ಕೂಡಿಸಿ ಬಂದಿದ್ದಳು. ತನಗೆ ನಿಲುಕಿದಷ್ಟು ಬುದ್ದಿ ಮಾತನ್ನು ನಿರ್ಜನಿಗೆ ಹೇಳಿಕೊಟ್ಟಿದ್ದಳು. ಒಂದು ತಾಸು ಎಲ್ಲಾ ಶಿಕ್ಷಕರನ್ನು ಮಾತನಾಡಿಸಿ ತನ್ನ ಮಗನ ಕಾಳಜಿ ತೆಗೆದುಕೊಳ್ಳಲು ಕೇಳಿಕೊಂಡಿದ್ದಳು. ಅದಾಗಿ ನಾಲ್ಕು ವರ್ಷಸಂದಿವೆ. ನಿರಂಜನನೂ ಚೆನ್ನಾಗಿಯೇ ಓದುವ ಹುಡುಗ. ಆದರೆ ಎಲ್ಲರ ಉಸಾಬರಿ ಬೇಕವನಿಗೆ. ಆಡುವಾಗ, ಊಟಕ್ಕೆ ಕುಳಿತಾಗ, ಶಾಲೆಯಿಂದ ವಿಹಾರಕ್ಕೆ ಹೋದಾಗ ಜಗಳ ತರುತ್ತಿದ್ದ. ದರಾಸತರ್ಿ ಕೆಂಪಿ ಅವರ ಕೈ ಕಾಲು ಹಿಡಿದು ಸಮಾಧಾನ ಮಾಡಿಬಿಡುತ್ತಿದ್ದಳು. ಆದರೆ...

ಈ ಸತರ್ಿ ನಿರ್ಜನ ನಾಲ್ಕನೇ ವರ್ಗದ ಗುರುಗಳಾದ ಕಡ್ಡಿಪೆಟ್ಟಿಗೆ ಅಡ್ಡ ಹೆಸರಿನ ಗುರುಗಳ ಕಡೆಯಿಂದ ಜಗಳ ತಂದಿದ್ದ.  ಕಡ್ಡಿಪೆಟ್ಟಿಗೆ ಗುರುಗಳು ಮಿರಿಮಿರಿ ಮಿಂಚುವ ಬಕ್ಕತಲೆ, ಕಪ್ಪಗೆ ಕುಳ್ಳ ದೇಹ ಇರುವ ಅವರು ಪ್ರಾರಂಭದಲಿ ತುಂಬಾ ಒಳ್ಳೆಯವರೇ ಆಗಿದ್ದರು. ಆದರೆ ಅವರ ಸಂಸಾರದ ಬಿರುಕು ವೃತ್ತಿಯ ಮೇಲೆ ಪ್ರಭಾವ ಬೀರುತ್ತಿತ್ತು. ವಿದ್ಯಾಥರ್ಿಗಳನ್ನು ಅಲಕ್ಷಿಸುವುದು, ಬಡಿಯುವುದು, ಸಿಟ್ಟು, ಅಸಹನೆಯಿಂದ ಹರಿಹಾಯುವುದು. ಮೊದಲೇ ಜಗಳಗಂಟ ನಿರಂಜನ ಜೋರಾಗಿಯೇ ಜಗಳ ಪ್ರಾರಂಭಿಸಿದ್ದ. ಕಾರಣ ಬಹಳಷ್ಟಿದ್ದವು. ಆದರೂ..

ಕೆಂಪಿ ಚಿಂತಾಕ್ರಾಂತಳಾಗಿ ಕುಳಿತಿದ್ದಳು. ಅವಳು ಯಾವ ಕೆಲಸಕ್ಕೂ ಹೋಗಿರಲಿಲ್ಲ. ತನಗೂ ಚೆನ್ನಾಗಿ ಮಾತನಾಡಲು ಬರುವುದಿಲ್ಲವೆಂದು ಮೂವತ್ತ್ಮೂರುಮಠ ಸರುನ್ನೂ ಕರೆದುಕೊಂಡು ಬಂದಿದ್ದಳು. ದೀರ್ಘ ಚಚರ್ೆಯ ನಂತರ ಮುಖ್ಯೋಪಾಧ್ಯಾಯರು ತಗ್ಗಿದ ಧ್ವನಿಯಲ್ಲಿ ಹೇಳಿದ್ದಷ್ಟು ಕಡ್ಡಿಪೆಟ್ಟಿಗೆ ಗುರುಗಳು ನಮ್ಮ ಛೇರಮನ್ನರಿಗೆ ತೀರ ಹತ್ತಿರದ ಸಂಬಂಧಿಕರು ಅವರ ಮೇಲೆ ನಾವು ಹೆಚ್ಚಿನ ಕ್ರಮ ತೆಗೆದುಕೊಳ್ಳಲಾಗದು. ಒಂದು ಕೆಲಸ ಮಾಡಿ ನೀವೇ ನಿಮ್ಮ ಮಗನನ್ನು ಬೇರೆ ಕಡೆಗೆ ಕರೆದುಕೊಂಡು ಹೋಗಿ ಎಂದು. ಜೊತೆಗೆ ಬಂದವರೂ ಒಪ್ಪಿಕೊಂಡಾಗ ಕೆಂಪಿ ಖಾಸಗಿ ಶಾಲೆ ಬಿಡಿಸಿ ಮಗನ್ನನು ಕರೆದುಕೊಂಡು ಶಾಲೆಯಿಂದ ಶಾಲೆಗೆ ತಿರುಗಿ ಕಂಗಾಲಾಗಿ ಹೋದಳು. ಮಧ್ಯದಲ್ಲಿ ಎಲ್ಲಿಯೂ ಪ್ರವೇಶ ಸಿಗದಾದಾಗ ಸಕರ್ಾರಿ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮುಂದುವರೆಸಲು ನಿರ್ಧರಿಸಿದ್ದಳು. 

ಕೆ.ಇ.ಎಸ್. ಸ್ಪಧರ್ಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣನಾದ ನಿರಂಜನ ಈಗ ಸಕರ್ಾರಿ ಅಧಿಕಾರಿ! ಅದೇ ಸೀರೆ, ವಿಭೂತಿ, ಕುಂಕುಮ, ಕೆಂಪು ಹಲ್ಲು, ನಗುವ ಮುಖದ ಕೆಂಪಿ ಈಗ ಕೆಲಸಕ್ಕೆ ಹೋಗುತ್ತಿಲ್ಲ; ಆದರೆ... 

ಕೆಂಪಿಯ ತಲೆಯಲ್ಲಿದ್ದ ಸಕರ್ಾರಿ ಶಾಲೆ ಬಗೆಗಿನ ಅಸಡ್ಡೆ, ಅನಾದರಗಳೆಲ್ಲ ಉಲ್ಟಾ ಆಗಿವೆ. ಸ್ವತಃ ಮಗನೊಂದಿಗೆ ಸಾಧ್ಯವಾದಷ್ಟು ಕಾರ್ಯಕ್ರಮಗಳಿಗೆ ತೆರಳಿ ತಪ್ಪದೇ ಈ ಘಟನೆಯನ್ನು ವಿವರಿಸಿ ಹೇಳುತ್ತಾಳೆ. ಸಕರ್ಾರಿ ಶಾಲೆಗೆ ಮಕ್ಕಳನ್ನು ಕಳುಹಿಸಲು ಪ್ರೋತ್ಸಾಹಿಸುತ್ತಾಳೆ, ಹುರುದುಂಬಿಸುತ್ತಾಳೆ.


ಸುದ್ದಿ ಓದಿ