ತೆಲುಗು ನಟ ದಿವಂಗತ ನಂದಮೂರಿ ತಾರಕ ರಾಮಾರಾವು 23ನೇ ಪುಣ್ಯಸ್ಮರಣೆ ಆಚರಣೆ
ಬಳ್ಳಾರಿ 19:ನಗರದಲ್ಲಿರುವ ರಾಘವ ಕಲಾಮಂದಿರದ ಸಂಗೀತ ಹಾಲ್ನಲ್ಲಿ ಎನ್.ಟಿ.ಆರ್. ಅಭಿಮಾನಿಗಳ ಸಂಘ,ಬಳ್ಳಾರಿ, ರಘುರಾಮ ಕಲಾಮಿತ್ರ ವೃಂದ, ಬಳ್ಳಾರಿ, ಕಲಾಪೋಷಕರ ಸಂಯುಕ್ತಾಧ್ವರ್ಯದಲ್ಲಿ ಕಲಾವಿದರ, ಕಲಾಭಿಮಾನಿಗಳ ನಡುವೆ ಹಿರಿಯ ತೆಲುಗು ನಟ ವಿಶ್ವವಿಖ್ಯಾತ, ನವರಸ ನಟನಾ ಸಾರ್ವಭೌಮ ಎಂದೇ ಪ್ರಸಿದ್ಧರಾದ ದಿವಂಗತ ನಂದಮೂರಿ ತಾರಕ ರಾಮಾರಾವು (ಎನ್.ಟಿ.ಆರ್) 23ನೇ ಪುಣ್ಯಸ್ಮರಣೆ ಆಚರಣೆ ನಡೆಯಿತು. ಈ ಕಾರ್ಯಕ್ರಮದಲಿ ಎನ್.ಟಿ.ಆರ್ ಭಾವಚಿತ್ರಕ್ಕೆ ಪುಷ್ಪಾಂಜಲಿ ಅಪರ್ಿಸಿದರು. ಕೆ.ಚನ್ನಪ್ಪ (ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷರು), ಕೆ.ಕೋಟೇಶ್ವರರಾವ್(ಹಿರಿಯ ವಕೀಲರು), ಮುಂತಾದವರು ಎನ್.ಟಿ.ಆರ್ ಬಗ್ಗೆ ಮಾತನಾಡುತ್ತಾ ಇವರು ಯುಗಪುರುಷ, ಅಂತಹ ನಟರು ಬಹಳ ವಿರಳ, ಶಿಸ್ತು, ಶ್ರದ್ಧೆ, ಇವುಗಳಿಂದ ಅವರು ಮಹಾನ್ ನಟರಾದರು ಕಲಾವಿದರ, ಕಲಾಭಿಮಾನಿಗಳ ಎಲ್ಲರ ಹೃದಯಗಳಲ್ಲಿ ನೆಲೆಸಿದ್ದಾನೆ, ಎನ್.ಟಿ.ಆರ್. ಎನ್ನುವ ತೆಲುಗು ಚಿತ್ರದಲ್ಲಿ ಅವರ ತೆರೆಯ ಹಿಂದಿನ ಜೀವನವನ್ನು ಚೆನ್ನಾಗಿ ತೋರಿಸಿದ್ದಾರೆ. ಇಂದಿನ ಪೀಳಿಗೆ ತಪ್ಪದೆ ನೋಡಬೇಕಾದ ಚಲನಚಿತ್ರ ಎಂದರು. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಯಾವುದೇ ಚಿತ್ರಗಳಾಗಲಿ, ಶ್ರೀರಾಮ, ಶ್ರೀಕೃಷ್ಣ, ರಾವಣ, ದುಯರ್ೋಧನ, ಅಂಗವಿಕಲ ಹೀಗೆ ಯಾವುದೇ ಪಾತ್ರ ಇರಲಿ ಲೀಲಾಜಾಲವಾಗಿ ಮಾಡುತ್ತಿದ್ದರು. ತೆಲುಗು ಚಲನಚಿತ್ರ ರಂಗದಲ್ಲಿ ಅವರು ರಾರಾಜ, ಹಾಗೆಯೇ ಸಿನಿಮಾ-ರಾಜಕೀಯ ಎರಡು ರಂಗಗಳಲ್ಲಿಯೂ ಅವರದೇ ಆದ ಪ್ರತ್ಯೇಕತೆ ತೋರಿಸಿದರು ಎಂದು ಹೇಳಿದರು. ಆನಂತರ ಎನ್.ಟಿ.ಆರ್. ಅಭಿಮಾನಿಗಳಾದ ರಾಜಸಿಂಹ ಅವರು ಮಾತನಾಡುತ್ತಾ ಎನ್.ಟಿ.ಆರ್. ಕಲಾವಿದರ ಸ್ಫೂತರ್ಿ ಎಷ್ಟೋಮಂದಿಗೆ ತನ್ನ ಕೈಲಾದ ಸಹಾಯವನ್ನು ಮಾಡಿದರು. ಅವರು ಒಂದು ವರ್ಷಕ್ಕೆ ಸುಮಾರು 10 ಚಿತ್ರಗಳನ್ನು ಮಾಡುತ್ತಿದ್ದರು ಅದರಿಂದ ಎಷ್ಟೋಮಂದಿ ಚಿತ್ರರಂಗದಲ್ಲಿ ಇರುವ ಅನೇಕ ಕುಟುಂಬಗಳಿಗೆ ಜೀವನಾಧಾರ ಆಗುತ್ತಿತ್ತು ಎನ್ನುತ್ತಾ ಅವರ ಜೀವನದಲ್ಲಿಯ ಅನೇಕ ವಿಷಯಗಳನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಕೆ.ಚನ್ನಪ್ಪ, ಕೆ.ಕೋಟೇಶ್ವರರಾವ್, ರಮೇಶಗೌಡ ಪಾಟೀಲ್, ಚಲ್ಲಾ ಅಮರೇಂದ್ರನಾಥ ಚೌದರಿ, ಪಿ.ಧನುಂಜಯ, ಕೆ.ಶ್ಯಾಮ್, ಜಿ.ಆರ್.ವೆಂಕಟೇಶುಲು, ಎನ್.ಟಿ.ಆರ್.ಬಸವರಾಜ್, ಚಂದ್ರಶೇಖರ್, ವಲೀಮಾಸ್ಟರ್, ರಾಜು, ಖಾಸಿಂಸಾಬ್, ವೀಣಾ ಆದೋನಿ, ಲಾಲ್ರೆಡ್ಡಿ, ನೇತಿ ರಘುರಾಮ, ಟಿ.ನಾಗಭೂಷಣಂ. ಇನ್ನಿತರರು ಪಾಲ್ಗೊಂಡಿದ್ದರು.