ಟ್ಯಾಲೆಂಟ್ರಾನಿಕ್ಸ್ ಕಾರ್ಯಕ್ರಮ
ಬಳ್ಳಾರಿ 04: ನಗರದ ಪ್ರತಿಷ್ಠಿತ ರಾವ್ ಬಹದ್ದೂರ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದವರಿಂದ ವಿದ್ಯಾಥರ್ಿ ಪ್ರತಿಭಾನ್ವೇಷಣೆಯ "ಟ್ಯಾಲೆಂಟ್ರಾನಿಕ್ಸ್" ಕಾರ್ಯಕ್ರಮವು ಜರುಗಿತು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ, ತಾಂತ್ರಿಕ ವಿದ್ಯಾಥರ್ಿಗಳಲ್ಲಿ, ಅಡಗಿರುವ ವಿವಿಧ ಪ್ರತಿಭೆಗಳನ್ನು ಹೊರತರುವುದು ಹಾಗೂ ಹೊಸ ಅವಿಷ್ಕಾರಗಳನ್ನು ಪ್ರೋತ್ಸಾಹಿಸುವುದು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆಡಳಿತ ಮಂಡಳಿಯ ಅಧ್ಯಕ್ಷರಾದ ಜೆ.ಎಸ್ ಬಸವರಾಜ್ರವರು, ವಿದ್ಯಾಥರ್ಿಗಳ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಈ ರೀತಿಯ ಪ್ರತಿಭಾನ್ವೇಷಣೆಯ ಕಾರ್ಯಕ್ರಮಗಳು ಮುಖ್ಯ ಪಾತ್ರವನ್ನು ವಹಿಸುತ್ತವೆ, ಇನ್ನು ಹೆಚ್ಚಿನ ಈ ರೀತಿಯ ಕಾರ್ಯಕ್ರಮಗಳು ಜರುಗಬೇಕೆಂದು ಅಭಿಪ್ರಾಯಿಸಿದರು ಆಡಳಿತ ಮಂಡಳಿಯ ಸದಸ್ಯರಾದ ಅರವಟಿಗಿ ಫ್ರಭು, ಮತ್ತು ಕೆ.ಎಮ್. ಶಿವಮೂತರ್ಿಯವರು ಕಾರ್ಯಕ್ರಮವನ್ನು ಆಯೋಜನೆಗಾಗಿ ಅಭಿನಂದಿಸಿದರು. ಈ ಕಾರ್ಯಕ್ರಮದಲ್ಲಿ "ಟ್ಯಾಲೆಂಟ್ರಾನಿಕ್ಸ ಟೈಮ್ಸ್ ನ್ಯೂಸ್ ಲೆಟರನ್ನು ಬಿಡುಗಡೆಗೊಳಿಸಲಾಯಿತು. ಸಭೆಯನ್ನುದ್ದೇಶಿಸಿ ಪ್ರಾಂಶುಪಾಲರು ಸಕಲರಿಗೂ ಶುಭಕೋರಿ, ವಿದ್ಯಾಥರ್ಿಗಳು ಸ್ಪಧರ್ಾತ್ಮಕ ಮನೋಭಾವದಿಂದ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಉತ್ತಮ ಪ್ರತಿಫಲವನ್ನು ನೀರಿಕ್ಷಿಸುವುದರೊಂದಿಗೆ ಜ್ಞಾನದ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು, ವಿವಿಧ ಸ್ಪಧರ್ೆಯ ಪ್ರತಿಭಾನ್ವಿತ ವಿಜೇತರಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಿದರು. ಎಲೆಕ್ಟ್ರಾನಿಕ್ಸ ಮತ್ತು ಕಮ್ಯುನಿಕೆಷನ್ ವಿಭಾಗದ ಮುಖ್ಯಸ್ಥರಾದ ಡಾ|| ಸವಿತ ಸೊನೊಳಿ ಅವರು ಈ ಕಾರ್ಯಕ್ರಮದಲ್ಲಿ ಮಾತನಾಡುತ್ತ ಟೆಕ್ನಿಕಲ್ ಪೇಪರ್ ಪ್ರಜೆಂಟೇಷನ್, ಮಿನಿ ಪ್ರಾಜೆಕ್ಟ್, ಎಲೆಕ್ಟ್ರಾನಿಕ್ ಸರ್ಕ್ಯೂಟ್ ರಿಗಿಂಗ್, ಪೋಟೋಗ್ರಫಿ, ಸಿಂಗಿಂಗ್, ಚಚರ್ಾಗೋಷ್ಟಿ ಸ್ಪಧರ್ೆ, ಸೈಕಲಿಂಗ್, ಪ್ರೋಗಾಮಿಂಗ್ ಮತ್ತು ವಿವಿಧ ವಿಭಾಗದ ವಿದ್ಯಾಥರ್ಿಗಳನ್ನು ಪಾಲ್ಗೋಳ್ಳುವಂತೆ ಪ್ರೋತ್ಸಾಯಿಸಿ, ಕ್ರಿಯಾಶಿಲತೆಯನ್ನು ಪೋಷಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವೆಂದರು. ್ತ ಉಪ ಪ್ರಾಂಶುಪಾಲರು ಹಾಗೂ ಸಿಎಸ್ಇ ವಿಭಾಗದ ಮುಖ್ಯಸ್ಥರಾದ ಡಾ|| ಟಿ. ಹನುಮಂತರೆಡ್ಡಿ, ವಿವಿಧ ವಿಭಾಗದ ಸಿಬ್ಬಂದಿವರ್ಗದವರು ಮತ್ತು ವಿದ್ಯಾಥರ್ಿಗಳು ಭಾಗವಹಿಸಿದ್ದರು. ಉಪನ್ಯಾಸಕರಾದ ಕುಮುದಾ ಬಿ, ಶ್ರೀಮತಿ ವಾಣಿ ಹೆಚ್, ಪ್ರಶಾಂತ ಕೇಣಿ, ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೆಷನ್ ವಿಭಾಗದ ಎಲ್ಲಾ ಭೋದಕ ಮತ್ತು ಭೋದಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾಥರ್ಿಗಳು ಒಂದು ವಾರದಿಂದ ಈ ಕಾರ್ಯಕ್ರದಲ್ಲಿ ಸಕ್ರೀಯವಾಗಿ ಪಾಲ್ಗೋಂಡರು.