ವಿಚಾರ ಸಂಕಿರಣ ಕಾರ್ಯಕ್ರಮ

ವಿಚಾರ ಸಂಕಿರಣ ಕಾರ್ಯಕ್ರಮ

ಬಳ್ಳಾರಿ 17: ಬ್ಯಾಂಕ್ ರಾಷ್ಟ್ರೀಕರಣದ 50ನೇ ವಷರ್ಾಚಣೆಯ ನಿಮಿತ್ತ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ ಆಫ್ ಇಂಡಿಯಾ ಕನರ್ಾಟಕದ ಪರವಾಗಿ ಬಳ್ಳಾರಿ ಜಿಲ್ಲಾ ಸಮಿತಿಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ದಿನಾಂಖ 16.12.2018ರಂದು ಬಳ್ಳಾರಿ ನಗರದ ಹೊಯ್ಸಳ ಹೋಟೆಲ್ನ ಸಭಾಂಗಣದಲ್ಲಿ ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿ ಭಾರತೀಯ ಜೀವ ವಿಮಾ ನಿಗಮದ ನಿವೃತ್ತರ ಸಂಘಟನೆಯ ಹಾಗೂ ಸಮಾಜ ಕಾರ್ಯಕರ್ತರಾದ ಕಾಂ|| ಟಿ.ಜಿ.ವಿಠಲ್ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಜಯ್ ಮಲ್ಯಾ, ನೀರವ್ ಮೋದಿ, ಚೋಕ್ಸಿ ರವರುಗಳು ಬ್ಯಂಕುಗಳಿಗೆ ಸುಮಾರು 25000 ಕೋಟಿ ರೂಪಾಯಿಗಳನ್ನು ವಂಚಿಸಿ ವಿದೇಶಗಳಿಗೆ ಪರಾರಿಯಾಗಿದ್ದು, ಸದರಿ ನಷ್ಟವನ್ನು ದೇಶದ ಜನತೆಯ ಮೇಲೆ ಹೇರಿದೆ. ಆದರೆ ಸಕರ್ಾರ ದೇಶದ ಅನ್ನದಾತರ ಸಾಲ ಮನ್ನಾ ಮಾಡುವುದಿಲ್ಲವೆಂದು ತಿಳಿಸಿದರು.

ಮುಖ್ಯ ಅತಿಥಿಗಳಾದ ಬಿಇಎಫ್ಐ ಕನರ್ಾಟಕದ ಪ್ರಧಾನ ಕಾರ್ಯದಶರ್ಿಗಳಾದ ಕಾಂ|| ಎಂ.ರತ್ನಾಕರ ಶೆಣೈರವರು ಮಾತನಾಡುತ್ತಾ, ರಾಷ್ಟ್ರೀಕರಣದ ಈ 50 ವರ್ಷಗಳ ಕಾಲಾವಧಿಯಲ್ಲಿ ಸಮರಶೀಲ ಧೀಮಂತ ಪರಂಪರೆ ಹೊಂದಿರುವುದಾಗಿಯೂ, ರಾಷ್ಟ್ರೀಕರಣದ ಉದ್ದೇಶ ಈಡೇರದೇ ಕಾಪರ್ೊರೇಟ್ಗಳಿಗೆ, ವಿದೇಶಿ ಬಂಡವಾಳದಾರರಿಗೆ ಒಪ್ಪಿಸುವ ಅವಸರದ ಪ್ರಯತ್ನದಲ್ಲಿರುವುದಾಗಿ ತಿಳಿಸಿದರು.


ಸುದ್ದಿ ಓದಿ