ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ದಿನಾಚರಣೆ

ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ದಿನಾಚರಣೆ

ಬಳ್ಳಾರಿ 17:ಕಾರ್ಯಕ್ರಮವನ್ನು ಕುಮಾರಿ ಶ್ವೇತಾ, ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ವೇದಿಕೆಯಲ್ಲಿ ಆಸೀನರಾದ ಕಾರ್ಯಕ್ರಮದ ಕೇಂದ್ರಬಿಂದು ಶ್ರೀ.ಜೆ.ಸಿ. ರಾಜಶೇಖರ್, ರಾಮಕೃಷ್ಣ ಆಶ್ರಮದ ಕಾರ್ಯದಶರ್ಿ ಜಗನ್ನಾಥ, ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ವೈ.ತಿಮ್ಮಾರೆಡ್ಡಿ, ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಗೋವಿಂದರಾಜ್, ಎನ್.ಎಸ್.ಎಸ್. ಅಧಿಕಾರಿಯಾದ ಯು.ಸೋಮಶೇಖರ್, ವಿದ್ಯಾಥರ್ಿ ಕಾರ್ಯದಶರ್ಿ ಕುಮಾರಿ ವೇದಶ್ರೀ ಇವರುಗಳು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸಿ ಕೃತಜ್ಞತೆಯನ್ನು ಸಲ್ಲಿಸಿದರು. ವಿದ್ಯಾಥರ್ಿಗಳನ್ನು ಕುರಿತು ಜೆ.ಸಿ.ರಾಜಶೇಖರ್ ಇವರು ಇಂದು ಭಾವನೆಯುಳ್ಳ ಹೃದಯ, ಯೋಚಿಸಬಲ್ಲ ಮೆದುಳು, ಶಕ್ತಿಶಾಲಿ ತೋಳುಗಳುಳ್ಳ ಯುವಕರು ಈ ದೇಶಕ್ಕೆ ಅತ್ಯವಶ್ಯ. ಹಿಂದಿನ ಸಾಧಕರೆಲ್ಲ ಈ ರೀತಿಯ ಗುಣಗಳನ್ನು ಅಳವಡಿಸಿಕೊಂಡ ಸಾಧನೆ ಮಾಡಿದವರಾಗಿದ್ದಾರೆ. ಸ್ವಾಮಿ ವಿವೇಕಾನಂದರು ಹೇಳಿದ "ನನಗೆ ಒಂದು ಸಹಸ್ರ ಉಕ್ಕಿನ ನರಗಳುಳ್ಳ, ದೇಶಕ್ಕಾಗಿ ಜೀವಿಸುವ ಶ್ರದ್ದೆಯುಳ್ಳ, ಕನಸುಗಳುಳ್ಳ ಯುವಕರನ್ನು ನನಗೆ ಕೊಡಿ ನಾನು ಈ ದೇಶದ ಚಿತ್ರಣವನ್ನೇ ಬದಲಿಸಬಲ್ಲೆ ಎಂಬ ಮಾತನ್ನು ಜೆ.ಸಿ.ರಾಜಶೇಖರ ಅವರು ಹೇಳಿ ವಿದ್ಯಾಥರ್ಿನಿಯರ ನರನಾಡಿಯಲ್ಲಿ ಶಕ್ತಿಯನ್ನು ತುಂಬಿದರು. ಹಾಗೆಯೇ ವಿವೇಕಾನಂದರ ನಂಬಿಕೆಗಳಾದ ಆತ್ಮಸ್ಥೈರ್ಯ, ಇಚ್ಚಾಶಕ್ತಿ, ಏಕಾಗ್ರತೆ ತೊಡಗಿಸಿಕೊಳ್ಳುವಿಕೆ, ಸೇವೆ ಮತ್ತು ತ್ಯಾಗದ ಗುಣಗಳನ್ನು ತಾವೆಲ್ಲರೂ ಮೈಗೂಡಿಸಿಕೊಂಡು ಈ ನಮ್ಮ ದೇಶ ಯುವಕರಿಂದ ಕೂಡಿದೆ.ಈ ನಮ್ಮ ದೇಶ ಜಗತ್ತಿಗೆ ಮಾದರಿಯಾಗಬೇಕೆಂದು ಹೇಳಿದರು. ಜೆ.ಸಿ.ರಾಜಶೇಖರ ಇವರು ನಮ್ಮ ಶಿಕ್ಷಣ ಸಮಾಜವನ್ನು ವ್ಯಕ್ತಿತ್ವವನ್ನು ಕಟ್ಟುವಂತಹ ಶಿಕ್ಷಣವಾಗಬೇಕು. ವಿದೇಶಗಳಲ್ಲಿ ಒಬ್ಬ ದಜರ್ಿ ಹೊಲಿದ ಸೂಟು ಬೂಟಿನಿಂದ ವ್ಯಕ್ತಿತ್ವ ನಿಮರ್ಾಣವಾದರೆ, ನಮ್ಮ ದೇಶದಲ್ಲಿ ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳಿಂದ ವ್ಯಕ್ತಿತ್ವವು ನಿಮರ್ಾಣವಾಗುತ್ತದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಡಾ.ಎಸ್.ವೈ.ತಿಮ್ಮಾರೆಡ್ಡಿಯವರು ಸ್ವಾಮಿ ವಿವೇಕಾನಂದರ ಜೀವನದ ಮೌಲ್ಯಗಳು ನಿಮ್ಮ ಉಸಿರಾಗಲಿ, ಹೀಗಿನ ವಿದ್ಯಾಥರ್ಿಗಳಿಗೆ ಸಾಕಷ್ಟು ಅವಕಾಶಗಳಿವೆ ಆದರೆ ಅದರ ಸದ್ಬಳಕೆ ಆಗುತ್ತಿಲ್ಲ. ಭವಿಷ್ಯತ್ತಿನ ತಾಯಂದಿರಾದ ನೀವು ಒಳ್ಳೆಯ ಪ್ರಜೆಗಳಾಗಿ, ಒಳ್ಳೆಯ ಪ್ರಜೆಗೆ ಜನ್ಮಕೊಡಿ ಏಕೆಂದರೆ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಒಬ್ಬ ಯುವತಿ ನೂರು ಯುವಕರಿಗೆ ಸಮಾನ ಎಂದು ಹೇಳಿದರು. ಕಾರ್ಯಕ್ರಮದ ಆರಂಭದಲ್ಲಿ ಎನ್.ಎಸ್.ಎಸ್.ಅಧಿಕಾರಿ ಯು.ಸೋಮಶೇಖರ್ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಸ್ವಾಮಿ ವಿವೇಕಾನಂದರು ಯುವಕರ ಪ್ರತಿನಿಧಿ ಅವರ 156ನೆಯ ಜನ್ಮದಿನವನ್ನು ರಾಷ್ಟ್ರೀಯ ಯುವಕರ ದಿನವೆಂದು ಆಚರಿಸುತ್ತಿದ್ದೇವೆ ಎಂದು ಹೇಳಿದರು. ಕುಮಾರಿ ಶಾರದ ಕಾರ್ಯಕ್ರವನ್ನು ನಿರೂಪಿಸಿದರೆ, ಕುಮಾರಿ ತೇಜಸ್ವಿನಿ ಸ್ವಾಗತವನ್ನು ಹೇಳಿದರು, ಕುಮಾರಿ ಪಾರ್ವತಿ ವಂದನೆಗಳನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಮಸ್ತ ಭೋದಕ-ಭೋದಕೇತರ ಸಿಬ್ಬಂದಿಯವರು ಭಾಗಿಯಾಗಿದ್ದರು. ಸಮಸ್ತ ಕಾಲೇಜಿನ ವಿದ್ಯಾಥರ್ಿನಿಯರು ಅತಿ ಉತ್ಸಾಹದಿಂದ ಶ್ರದ್ದೆಯಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


ಸುದ್ದಿ ಓದಿ