ವಿದ್ಯಾಥರ್ಿಗಳು ವಿಷಯ ಗ್ರಹಿಕೆಯಲ್ಲಿ ಆಸಕ್ತಿ ವಹಿಸಲಿ

ವಿದ್ಯಾಥರ್ಿಗಳು ವಿಷಯ ಗ್ರಹಿಕೆಯಲ್ಲಿ ಆಸಕ್ತಿ ವಹಿಸಲಿ

ಲೋಕದರ್ಶನ ವರದಿ

ಬಳ್ಳಾರಿ 24:ಸೊನ್ನಲಾಪುರದ ಅಮುಗೆಯ ದೇವಯ್ಯನವರ ಪತ್ನಿ ರಾಯಮ್ಮನವರು ನಿಭರ್ಿಡೆಯ ವಚನಕಾತರ್ಿ. ಯಾರ ಹಂಗೂ ಇಲ್ಲದೆ, ಯಾರ ಆಶ್ರಯವೂ ಇಲ್ಲದೆ ತನಗೆ ತಾನೇ ಬೆಳೆಯಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ ಧೀರ ಮಹಿಳೆ. ಶಿವಯೋಗಿ ಸಿದ್ದರಾಮನಿಗೆ ಸವಾಲು ಹಾಕಿ ಊರು ಬಿಟ್ಟ ದಂಪತಿಗಳ ಸಾಮಗ್ರಿಗಳನ್ನು ಮಲ್ಲಿಕಾಜರ್ುನನೇ ಹೊರಬೇಕಾಯಿತು ಎಂದು ರೇಡಿಯೋ ಪಾಕರ್ಿನ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕಿಯರಾದ ಕೆ.ಹೇಮಲತಾ ನುಡಿದರು. 

ಕೌಲ್ಬಜಾರಿನ ಸಂತಜೋಸೆಫರ ಪ್ರೇಮಾಶ್ರಮದಲ್ಲಿ ಜರುಗಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ 225ನೇ ಮಹಾಮನೆ, ಲಿಂಗೈಕ್ಯ ಸಂಗನಕಲ್ಲು ದೊಡ್ಡ ಶರಣಪ್ಪ ಹಂಪಮ್ಮ ದೊಡ್ಡ ದತ್ತಿ ಕಾರ್ಯಕ್ರಮದಲ್ಲಿ ಅಮುಗೆ ದೇವಮ್ಮನ ವಚನ `` ಎನ್ನ ಕಣ್ಣೊಳಗಣ ಕಟ್ಟಿಗೆಯ ನಾನೇ ಮುರಿಯಬೇಕು'' ಎಂಬ ವಿಷಯ ಕುರಿತು ಮಾತನಾಡುತ್ತಾ ಶರಣರು ಎಂದೂ ಪರಾವಲಂಬಿಗಳಾಗಬಾರದು. ಅಂತೆಯೇ ವಿದ್ಯಾಥರ್ಿಗಳು ಕೃಪಾಂಕಗಳಿಗೆ ಒಳಗಾಗದೆ ವಿಷಯ ಗ್ರಹಿಕೆಯಲ್ಲಿ ಆಸಕ್ತಿ ವಹಿಸಿ  ಜ್ಞಾನವನ್ನು ತಮ್ಮದಾಗಿಸಿಕೊಂಡಾಗಲೇ ಜೀವನ ಸಾರ್ಥಕವಾಗುವುದು ಎಂದು ವಿದ್ಯಾಥರ್ಿಗಳಿಗೆ ಪರೀಕ್ಷಾ ಪೂರ್ವ ತರಬೇತಿಯನ್ನು ಕುರಿತು ಮಾತನಾಡಿದರು. 

ಪ್ರೇಮಾಶ್ರಮದ ಹಿರಿಯ ಸಿಸ್ಟರ್ ಫಾತಿಮಾ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ದತ್ತಿ ದಾಸೋಹಿಗಳಾದ ಎಸ್.ಚೆನ್ನನಗೌಡ ಪತ್ನಿ ಮಹಾದೇವಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಿ.ಆರ್.ಪಿ. ಎರ್ರಿಸ್ವಾಮಿಯವರು ವಿದ್ಯಾಥರ್ಿಗಳಿಗೆ ಅಭಿನಯ ಗೀತೆಯನ್ನು ಹೇಳಿಕೊಟ್ಟರು. ಪ್ರೇಮಾಶ್ರಮದ 10ನೇ ತರಗತಿ ವಿದ್ಯಾಥರ್ಿಗಳಿಗೆ ಪದ್ಯ ಕಂಠಪಾಠ ಹೇಳಿಸಿ ಬಹುಮಾನ ವಿತರಣೆ ಮಾಡಲಾಯಿತು. 

ಪ್ರಾರ್ಥನೆಯನ್ನು ಪ್ರೇಮಾಶ್ರಮದ ವಿದ್ಯಾಥರ್ಿಗಳು ನೆರವೇರಿಸಿದರು. ಕುಮಾರಿ ಶ್ರಾವಣಿ ಸ್ವಾಗತ ಕೋರಿದಳು. ರಮ್ಯ ವಂದನಾರ್ಪಣೆ ಮಾಡಿದಳು. ದತ್ತಿದಾಸೋಹಿಗಳನ್ನು ಪರಿಚಯಿಸಿ ಉಪನ್ಯಾಸಕ್ಕೆ ಚಾಲನೆಯನ್ನು ಅಧ್ಯಕ್ಷರಾದ ಕೆ.ಬಿ.ಸಿದ್ದಲಿಂಗಪ್ಪ ಅವರು ಮಾಡಿದರು. ಕಾರ್ಯಕ್ರಮ ನಿರ್ವಹಣೆಯನ್ನು ಕುಮಾರಿ ಪೂಜಾ ನೆರವೇರಿಸಿದರು. ವೇದಿಕೆಯ ಅತಿಥಿಗಳನ್ನು ಸನ್ಮಾನಿಸಿ ಎಲ್ಲ ವಿದ್ಯಾಥರ್ಿಗಳಿಗೆ ಪೆನ್ನು, ಪೆನ್ಸಿಲ್ ಲೇಖನಿಗಳನ್ನು ನೀಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. 


ಸುದ್ದಿ ಓದಿ