ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶ ಹಾಕಿದ್ರೆ ಕ್ರಮ: ಡಿಸಿ
ಬಳ್ಳಾರಿ09: ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ನ.10ರಂದು ಬೆಳಗ್ಗೆ 11ಕ್ಕೆ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಆಚರಿಸಲಾಗುತ್ತಿದ್ದು,ಜಯಂತಿ ಹಿನ್ನೆಲೆ ಯಾವುದೇ ರೀತಿಯ ಮೆರವಣಿಗೆ ನಡೆಸದಿರಲು ಸೂಚಿಸಲಾಗಿದೆ ಮತ್ತು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ.
ಸಕರ್ಾರದ ನಿದರ್ೇಶನದಂತೆ ಟಿಪ್ಪು ಸುಲ್ತಾನ್ ಜಯಂತಿಯ ವೇದಿಕೆ ಕಾರ್ಯಕ್ರಮವನ್ನು ಒಳಾಂಗಣದಲ್ಲೇ ಏರ್ಪಡಿಸಲಾಗುತ್ತಿದೆ.
ಯಾವುದೇ ಬ್ಯಾನರ್, ಬಂಟಿಂಗ್ಗಳನ್ನು ಪ್ರದಶರ್ಿಸಲು ಅವಕಾಶವಿಲ್ಲ ಕೇವಲ ಪಾಲಿಕೆ, ನಗರಸಭೆ, ಗುರುತಿಸಿರುವ ನಾಮಫಲಕಗಳಲ್ಲಿ ಮಾತ್ರ ಅನುಮತಿಯನ್ನು ಪಡೆದು ಪ್ರದಶರ್ಿಸಬಹುದು. ಯಾವುದೇ ಬೈಕ್ ರ್ಯಾಲಿ, ಜಾಥಾ ಮಾಡುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.
ಶಾಂತಿಯುತವಾಗಿ ಕಾರ್ಯಕ್ರಮವನ್ನು ಆಯೋಜಿಸುವುದು ಮತ್ತು ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಘಟನೆಯಾಗಲಿ, ಪ್ರಚೋದನಕಾರಿ ಸಂದೇಶವಾಗಲಿ ಹಬ್ಬಿಸುವಂತಿಲ್ಲ ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಯಂತಿಯನ್ನು ಅಚ್ಚುಕಟ್ಟಾಗಿ ಶಾಂತಿಯುತವಾಗಿ ಏರ್ಪಡಿಸಲು ಎಲ್ಲ ಸಿದ್ಧತೆಗಳು ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಜಯಂತಿಯ ಆಚರಣೆ ಅಂಗವಾಗಿ ಸನುದಾಯದವರು ಉಚಿತ ಕಣ್ಣಿನ ತಪಾಸಣೆ, ಉಚಿತ ವೈದ್ಯಕೀಯ ಚಿಕಿತ್ಸೆ, ರಕ್ತದಾನ ಶಿಬಿರ ಹಾಗೂ ಅನ್ನದಾನದ ವ್ಯವಸ್ಥೆಯನ್ನು ಸ್ವಯಂ ಪ್ರೇರಣೆಯಿಂದ ಮಾಡಲಿದ್ದಾರೆ ಎಂದು ವಿವರಿಸಿರುವ ಅವರು, ಹಜರತ್ ಟಿಪ್ಪುಸುಲ್ತಾನ್ ಜಯಂತಿಯನ್ನು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಯಾವುದೇ ಮೆರವಣಿಗೆ ನಡೆಸದೇ ಒಳಾಂಗಣದಲ್ಲಿ ಅಥವಾ ತಮ್ಮ ಕಛೇರಿಯಲ್ಲಿ ಆಚರಣೆ ಮಾಡಲು ಎಲ್ಲಾ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.