ಸ್ಪಧರ್ಾತ್ಮಕ ಪರೀಕ್ಷೆ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮ

ಸ್ಪಧರ್ಾತ್ಮಕ ಪರೀಕ್ಷೆ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮ

ಲೋಕದರ್ಶನ ವರದಿ

ಬಳ್ಳಾರಿ 09: ಸಿರುಗುಪ್ಪ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ವಿದ್ಯಾಥರ್ಿ ನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಂತಿಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ಆಸಕ್ತ ವಿದ್ಯಾಥರ್ಿಗಳಿಗೆ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಳ್ಳಾರಿ ಹಾಗೂ ಸಿರುಗುಪ್ಪ ತಾಲ್ಲೂಕು ಸಹಯೋಗದೊಂದಿಗೆ ಐಎಎಸ್, ಐ.ಪಿ.ಎಸ್., ಕೆ.ಎ.ಎಸ್ ಮತ್ತು ಬ್ಯಾಂಕಿಂಗ್ ಇತ್ಯಾದಿ ಸ್ಪಧರ್ಾತ್ಮಕ ಪರೀಕ್ಷೆಗಳಿಗಾಗಿ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿಗಳಾದ ಚೆನ್ನಪ್ಪ ಜ್ಯೋತಿ ಬೆಳಗಿಸುವುದರ ಮೂಲಕ ಮಾತನಾಡುತ್ತಾ, ನೈಸಗರ್ಿಕ ಸಂಪನ್ಮೂಲಗಳು ಖಾಲಿಯಾಗುತ್ತಿದ್ದು, ನಿರುದ್ಯೋಗ ದೇಶದಲ್ಲಿ ಪೆಡಂಭೂತವಾಗಿದೆ, ಹಣದ ಅವಶ್ಯಕತೆ ಹೆಚ್ಚಾಗಿದೆ, ನಮ್ಮ ನಮ್ಮ ವೃತ್ತಿಗಳನ್ನು ನಾವು ಬಿಟ್ಟು ಬಿಟ್ಟಿದ್ದೇವೆ. ಕ್ಷೌರಿಕ, ಕಮ್ಮಾರ, ವ್ಯವಸಾಯ ತೋಟಗಾರಿಕೆ ಗ್ರಾಮೀಣ ಪ್ರದೇಶಗಳಲ್ಲಿ ಮಾಡುವ ಸಣ್ಣ ಸಣ್ಣ ಕೆಲಸಗಳನ್ನು ಮರೆತು ನಾವು ಸಮಯವನ್ನು ವ್ಯಥೆ ಮಾಡುತ್ತಿದ್ದೇವೆ ಎಂದರು ಸ್ಪಧರ್ಾತ್ಮಕ ಪರೀಕ್ಷೆಗಳಲ್ಲಿ ಮುಂದೆ ಬರಬೇಕೆಂದು ತಿಳಿಸಿದರು. ಕೋಟಿಗೊಬ್ಬ ಶರಣ, ಲಕ್ಷಕ್ಕೊಬ್ಬ ಜಂಗಮ, ಸಾವಿರಕ್ಕೊಬ್ಬ ಭಕ್ತ ಎಂಬ ನಾಣ್ಣುಡಿಯಂತೆ ಎಲ್ಲರೂ ಸಕರ್ಾರಿ ಅಧಿಕಾರಿಗಳಾಗಿ ಬರಬೇಕೆಂಬ ಆಸೆ ಇರುತ್ತದೆ. ಆದರೆ ಸಕರ್ಾರದ ಎಲ್ಲಾ ಸೌಲಭ್ಯಗಳನ್ನು ಉಪಯೋಗಿಸಿಕೊಂಡು, ವಿದ್ಯೆಯಲ್ಲಿ ಉತ್ತೀರ್ಣರಾಗಿ ಕೌಶಲ್ಯವನ್ನು ಬೆಳಗಿಸಿಕೊಳ್ಳಬೇಕೆಂದು, ರಾಜ್ಯಕ್ಕೆ, ದೇಶಕ್ಕೆ ಮಾದರಿಯಾಗಬೇಕೆಂದು ತಿಳಿಸಿದರು.. ಪರೀಕ್ಷೆಗಳಲ್ಲಿ ದುಂಡಾಗಿ ಬರೆಯುವುದನ್ನು ಮಾತ್ರ ಅಭ್ಯಾಸ ಮಾಡಿಕೊಳ್ಳಬೇಕೆಂದು, ಇದರಿಂದ ನಿಮ್ಮ ಬುದ್ಧಿವಂತಿಕೆಯನ್ನು ತೋರಿಸಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸುರೇಶ್ಬಾಬು ಅವರು, ತಾವು ಎಷ್ಟು ಕಷ್ಟ ಪಟ್ಟು ಓದಿದರೆ ಅಷ್ಟೇ ಲಾಭ ಸಿಗುತ್ತದೆ ಎಂದು, ಬಡತನ ಶಾಪವಾಗಬಾರದು, ತಾವುಗಳು ಪ್ರಯತ್ನ ಪಟ್ಟಲ್ಲಿ ಇಂತಹ ಸ್ಪಧರ್ಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ತಮ್ಮ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಪಿ.ಶುಭ ಜಿಲ್ಲಾ ಅಧಿಕಾರಿಗಳು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಬಳ್ಳಾರಿ, ಅಮಿತ್ ಬಿದರಿ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯವರು ಮಾತನಾಡಿದರು. ಬಳ್ಳಾರಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಆರ್.ಹೆಚ್.ಲೋಕೇಶ್ ಸ್ವಾಗತಿಸಿದರು. ಸಿರುಗುಪ್ಪ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶ್ಯಾಮಪ್ಪ ವಂದಿಸಿದರು. ನಿಲಯ ಮೇಲ್ವಿಚಾರಕ ಮಲ್ಲಿಕಾಜರ್ುನ ನಿರೂಪಿಸಿದರು.


ಸುದ್ದಿ ಓದಿ