ಎಸ್.ಎನ್.ಪೇಟೆಯಲ್ಲಿ ವಿಶೇಷ ರಂಗೋಲಿ ಸ್ಪಧರ್ೆ
ಲೋಕದರ್ಶನ ವರದಿ
ಬಳ್ಳಾರಿ 12:ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಭಾನುವಾರ (ಜ.13) ನಗರದ ಸತ್ಯನಾರಾಯಣ ಪೇಟೆಯ ಎಂ.ಎಂ.ಟಿ.ಸಿ ಕಾಲೋನಿಯ ಪಾರ್ಕ ಬಳಿ 18ನೇ ವಾಡರ್ಿನ ಮಹಿಳೆಯರಿಗಾಗಿ ರಂಗೋಲಿ ಸ್ಪಧರ್ೆಯನ್ನು ಹಮ್ಮಿಕೊಳ್ಳಲಾಗಿದೆ. ಭಾರತೀಯ ಜನತಾಪಕ್ಷದ ಬಳ್ಳಾರಿ ನಗರ ಯುವಮೋರ್ಚ ಅಧ್ಯಕ್ಷ ಕೆ.ಎಸ್ ಅಶೋಕಕುಮಾರ ಮತ್ತಿತರ ಸ್ನೇಹಿತರು ಈ ಸ್ಪಧರ್ೆಯನ್ನು ಹಮ್ಮಿಕೊಂಡಿದ್ದು ಬೆಳಿಗ್ಗೆ 10 ಗಂಟೆಯಿಂದ ಸ್ಪಧರ್ೆ ನಡೆಯಲಿದ್ದು.
ಸ್ಪಧರ್ೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ಒಂದು ಪ್ರೀಡ್ಜ್, ಎರಡನೇ ಬಹುಮಾನ ವಾಸಿಂಗ್ ಮಷಿನ್, ಮೂರನೇ ಬಹುಮಾನ ರುಬ್ಬುವ ಗ್ರಂಡರ್, ನೀಡಲಾಗುವುದು. ಅಲ್ಲದೇ ಸ್ಪಧರ್ೆಯಲ್ಲಿ ಭಾಗವಹಿಸಿರುವ ಇತರರಿಗೂ ಕೂಡಾ ಸಮದಾನಕರ ಬಹುಮಾನ ನೀಡಲಾಗುವುದು. ಈ ಸ್ಪಧರ್ೆಯಲ್ಲಿ ತೀಪರ್ುಗಾರರ ನಿಧರ್ಾರವೇ ಅಂತಿಮ. ಸ್ಪಧರ್ೆಯಲ್ಲಿ ಭಾಗವಹಿಸಲು ಈಗಾಗಲೆ 122 ಮಹಿಳೆಯರು ತಮ್ಮ ಹೆಸರುಗಳನ್ನು ನೊಂದಣಿ ಮಾಡಿಕೊಂಡಿದ್ದಾರೆ.
ಸ್ಪಧರ್ಾ ಕಾರ್ಯಕ್ರಮದ ಸಾನಿದ್ಯವನ್ನು ಕಮ್ಮರಚೇಡು ಮಠದ ಶ್ರೀ ಕಲ್ಯಾಣಸ್ವಾಮಿಗಳು ವಹಿಸಲಿದ್ದು. ಮೊಲಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಕಾರ್ಯಕ್ರಮ ಉದ್ಘಾಟಿಸಲಿದ್ದು. ಇದರ ಅಧ್ಯಕ್ಷತೆಯನ್ನು ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ವಹಿಸಲಿದ್ದಾರೆ. ಅತಿಥಿಗಳಾಗಿ ಎ.ಎಸ್.ಪಿ ಬಿ.ಎಸ್.ಲಾವಣ್ಯ, ನಗರದ ಡಿವೈಎಸ್ಪಿ ಉಮೇಶ್ಈಶ್ವರ ನಾಯ್ಕ, ಗಾಂಧಿನಗರದ ಪಿಎಸ್,ಐ ನಾಗರಾಜ ಭಾಗವಹಿಸಲಿದ್ದಾರೆ. ವಿಶೇಷ ಅಹ್ವಾನಿತರಾಗಿ ಡಾ|| ಬಿ.ಕೆ.ಸುಂದರ್, ಬಿಜೆಪಿ ಮುಖಂಡ ವೀರಶೇಖರರೆಡ್ಡಿ, ಶ್ರೀನಿವಾಸ ಮೋತ್ಕರ್, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ, ಬಿಜೆಪಿ ಯುವಮೋರ್ಚ ಜಿಲ್ಲಾಧ್ಯಕ್ಷ ಪ್ರಕಾಶರೆಡ್ಡಿ, ಸಾವಿತ್ರಮ್ಮ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.
ಬಹುಮಾನ ವಿತರಣಾ ಕಾರ್ಯಕ್ರಮವು 12 ಗಂಟೆಗೆ ನಡೆಯಲಿದ್ದು. ಸಮಾರಂಭದಲ್ಲಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಜಿಲ್ಲಾ ಹೆಚ್ಚುವರಿ ಎಸ್ಪಿ ಲಾವಣ್ಯ, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಕೆ.ಎಸ್.ದಿವಾಕರ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆಂದು ತಿಳಿಸಿದರು.