ಜಮಖಂಡಿ

ಚಿನ್ನಾಭರಣಗಳನ್ನು ಕದಿಯುತ್ತಿದ್ದ ಆರು ಜನ ಮಹಿಳೆರ ಬಂಧನ

ಚಿನ್ನಾಭರಣಗಳನ್ನು ಕದಿಯುತ್ತಿದ್ದ  ಆರು ಜನ ಮಹಿಳೆರ ಬಂಧನ

ಲೋಕದರ್ಶನ ವರದಿ,

ಜಮಖಂಡಿ : 21: ಮಹಿಳೆಯರ ಕೊರಳಿನಲ್ಲಿರುವ ಚಿನ್ನಾಭರಣಗಳನ್ನು ಕದ್ದಿಯುತ್ತಿದ್ದ ಆರು ಜನ ಮಹಿಳೆಯರನ್ನು ಶಹರ ಠಾಣಿಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ತಾಲೂಕಿನ ಕಡಪಟ್ಟಿ ದೊಡ್ಡ ಬಸವೇಶ್ವರ ಜಾತ್ರೆಯ ಪಲಕ್ಕಿ ಉತ್ಸವ ಪ್ರತಿ ವರ್ಷದಂತೆ ವಿಜೃಂಭನೆಯಿಂದ ನಡೆಯುವ ಕಾಲಕ್ಕೆ. ಜಾತ್ರೆಗೆ ಬಂದ ಮಹಿಳೆಯರ ಕೊರಳಿನಲ್ಲಿರುವ ಚಿನ್ನಾಭರಣಗಳನ್ನು ಕದ್ದಿಯುತ್ತಿದ್ದ ಸೊಲ್ಲಾಪೂರ ಮೂಲದ ಮಾಹಾದೇವಿ ವಿಲಾಸ ಜಾಧವ, ಸರಸ್ವತಿ ಸಂಜಯ ಗಾಯಕವಾಡ, ಉಷಾ ಕಿರಣ ಗಾಯಕವಾಡ, ಚಂದ್ರವ್ವ ಕಾಶಿನಾಥ ಗಾಯಕವಾಡ, ಕೇಶರ ಆನಂದ ಜಾಧವ, ಅರುಣಾ ಅಶೋಕ ಜಾಧವ ಆರು ಜನ ಮಹಿಳೆಯರು ಸೇರಿಕೊಂಡು ಜಾತ್ರೆಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದು. ಅವರನ್ನು ವಿಚಾರಣೆ ನಡೆಸಿ. ಜಾತ್ರೆಗೆ ಬಂದ ಮಹಿಳೆಯರ ಮೈ ಮೇಲಿನ ಆಭರಣಗಳನ್ನು ಕಳ್ಳತನ ಮಾಡಲು ಬಂದಿರುವುದಾಗಿ ಹೇಳಿದ್ದು. ಅವರಿಂದ ಅಂದಾಜು 2 ಲಕ್ಷ ರೂ, ಕಿಮತ್ತಿನ ಒಟ್ಟು 5 ತೋಲೆ ಬಂಗಾರದ ತಾಳ ಸರ ಹಾಗೂ ಬಂಗಾರದ ಅವಲಕ್ಕಿ ಸರವನ್ನು ಶಹರ ಪೋಲಿಸರು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆಂದು ಡಿಎಸ್ಪಿ ಶಾಂತವೀರ ಈ, ತಿಳಿಸಿದ್ದಾರೆ. 

ಜಿಲ್ಲಾ ಎಸ್ಪಿ ಅಮರನಾಥ ರೆಡ್ಡಿ, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ ಮಾರ್ಗದರ್ಶನದಲ್ಲಿ ಮೂರು ತನಿಖಾ ತಂಡಗಳನ್ನು ರಚಿಸಿ.ಶಹರ ಠಾಣೆಯ ಪಿಎಸ್ಐಗಳಾದ ಎನ್, ಆರ್, ಚಿಲಾರೆ, ಕೆ ಟಿ ಮಾನೆ, ಗ್ರಾಮೀಣ ಠಾಣಿಯ ಪಿಎಸ್ಐ ಮಹೇಶ ಸಂಖ, ಎಎಸ್ಐಗಳಾದ ಎಚ್.ಎಸ್.ಮಂಡಗಾರ, ವಾಯ್, ಬಿ, ಸೋಸರವಾಡ ಸಿಬ್ಬಂದಿಗಳಾದ ಬಿ, ಎಂ, ಜಂಬಗಿ, ಎಸ್, ಎಚ್, ಕೋಟಿ, ಪಿ, ಎಚ್, ಘಾಟಗೆ, ಎಸ್,ಬಿ, ಹನಗಂಡಿ, ಮಹಿಳಾ ಸಿಬ್ಬಂದಗಳಾದ ಎಸ್,ಜಿ, ದೇಸಾಯಿ, ಎಸ್, ಎಲ್, ಪವಾರ, ಬಾಹುಬಲ ಕುಸನಾಳೆ ತನಿಖಾ ತಂಡದಲ್ಲಿ ಭಾಗವಹಿಸಿದ್ದು. ಇವರ ಕಾರ್ಯ ವೈಖರಿಯನ್ನು ಜಿಲ್ಲಾ ಎಸ್ಪಿ ಅಮರನಾಥ ರಡ್ಡಿ ಶ್ಲಾಘಿಸಿದ್ದಾರೆ.



 

ಸುದ್ದಿ ಓದಿ