ಆಲಮೇಲದಲ್ಲಿ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ
ಆಲಮೇಲ : ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಡಿ.30ರಂದು ನಡೆದ ಪ್ರತಿಭಾ ಕಾರಂಜಿಯಲ್ಲಿ ತಾಲೂಕಿನ ವಿವಿಧ ವಿದ್ಯಾರ್ಥಿಗಳ ಮಕ್ಕಳ ಪ್ರತಿಭೆಯನ್ನು ಗುರ್ತಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಆರೀಫ್ ಬಿರಾದಾರ ಮತ್ತು ಶಿಕ್ಷಣ ಸಂಯೋಜಕರಾದ ಎಮ್. ಪಿ. ಬಿಸ್ಸೆ , ಪ್ರತಿಭೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಾದ 1. ನೇಹಾ ಲಾಳಸಂಗಿ (ಜನಪದ ಗೀತೆ- ಪ್ರಥಮ) 2. ಗಾಯಿತ್ರಿ ಪಾಟೀಲ (ಧಾರ್ಮಿಕ ಪಠಣ - ಪ್ರಥಮ) 3. ಕಾವೇರಿ ದುದುಣಗಿ ( ಕಥೆ ಹೇಳುವುದು- ಪ್ರಥಮ) 4. ಸಂಪ್ರಿತಾ ಕಗ್ಗೋಡ (ಕವನ ವಾಚನ- ಪ್ರಥಮ ) ಪ್ರಶಸ್ತಿ ಪತ್ರವನ್ನು ನೀಡಿ, ಜಿಲ್ಲಾಮಟ್ಟಕ್ಕೆ ಆಯ್ಕೆ ಮಾಡಿ ಪ್ರೋತ್ಸಾಹಿಸಿದರು. ಬಳಿಕ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಗುಂದಗಿ, ಮುಖ್ಯ ಶಿಕ್ಷಕ ಜಿ.ಕೆ.ಅಂಬೂರೆ ಹರ್ಷ ವ್ಯಕ್ತಪಡಿಸಿದರು.