ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತ್ಯೋತ್ಸವ
ಲೋಕದರ್ಶನ ವರದಿ,
ಜಮಖಂಡಿ: 1: ರಾಜಕಾರಿಗಳು ಅಧಿಕಾರಿಕ್ಕೆ ಬಂದರೆ ಸಾಕು ಕೋಟಿಯಷ್ಟು ಹಣ ಗಲಿಸುವ ಜೊತೆಗೆ ತಮ್ಮ ಕಾರ್ಯಕರ್ತರನ್ನು ಮರೆಯುತ್ತಾರೆ. ಸಿಎಂ, ಸಿದ್ದರಾಮಯ್ಯ ಹಾಗೆ ಅಲ್ಲ. ಅವರು ಆಧುನಿಕ ಕನಕದಾಸರಾಗಿದ್ದಾರೆ. ರಾಜ್ಯದ ಸರ್ವ ಜನಾಂಗದ ಒಳಿತಕ್ಕಾಗಿ ಹಗಲಿರುಳು ಶ್ರಮಿಸುತಿದ್ದಾರೆಂದು ಭೂಸೇನಾ ನಿಗಮದ ಮಾಜಿ ಅಧ್ಯಕ್ಷ ಶ್ರೀಶೈಲ ದಳವಾಯಿ ಹೇಳಿದರು.
ನಗರದ ಭಕ್ತ ಕನಕದಾಸ ಶಾಲೆಯ ಆವರಣದಲ್ಲಿ ತಾಲೂಕಾಡಳಿತ, ತಾಪಂ, ನಗರಸಭೆ, ಶ್ರೀ ಭಕ್ತ ಕನಕದಾಸ ವಿದ್ಯಾವರ್ಧಕ ಸಂಘ, ತಾಲೂಕಾ ಕುರುಬರ ಸಂಘ ಸಹಯೋಗದಲ್ಲಿ ನಡೆದ ಸಂತ ಶ್ರೇಷ್ಠ ಭಕ್ತ ಕನಕದಾಸರ 536ನೇ ಜಯಂತ್ಯೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಭಾರಿ ಮುಖ್ಯಮಂತ್ರಿಯಾದರೂ ಅವರ ಖಾತೆಯಲ್ಲಿ ಹಣ ಇಲ್ಲ ಅವರು ಅಹಿಂದ ಜನರ ಅಭಿವೃದ್ದಿಗಾಗಿ ಕಾರ್ಯ ಮಾಡುತಿದ್ದಾರೆ. ಜಾತಿ ಗಣತಿ ವರದಿಯಿಂದ ರಾಜ್ಯದಲ್ಲಿ ಯಾವ ಸಮಾಜದವರು ಎಷ್ಟು ಇದ್ದಾರೆ, ಅವರ ಶೈಕ್ಷಣಿಕ, ಆರ್ಥಿಕವಾಗಿ ಹೇಗೆ ಇದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಹಿಂದುಳಿದವರ ಅಭಿವೃದ್ದಿಗೆ ಇದು ಪೂರಕವಾಗಿದೆ ಆದರೆ ಕೆಲವರು ಇದನ್ನು ವಿರೋಧ ಮಾಡುತಿರುವದು ಸರಿಯಲ್ಲ ಎಂದರು.
ಮತ ಹಾಕುವುದು ಎಲ್ಲರ ಹಕ್ಕಾಗಿದೆ, ಗೌಪ್ಯತೆ ಇರುತ್ತದೆ ಆದರೆ ಕೆಲ ಪಕ್ಷದ ರಾಜಕಾರಣಿಗಳು ನೀವು ನಮ್ಮಗೆ ಮತ ನೀಡಿಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ. ಅಂತಹ ರಾಜಕೀಯ ನಾಯಕನಿಗೆ ನಮ್ಮನಿಂದ ಧಿಕ್ಕಾರ ಇರಲ್ಲಿ. ನಮ್ಮ ಸಮಾಜ ಬಾಂಧವರು ಇನ್ನುಮುಂದೆ ಎಚ್ಚರಿಕೆಯಿಂದ ಇರಬೇಕು ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಮಾತನಾಡಿ, ಮುಖ್ಯಮಂತ್ರಿ ಅಹಿಂದ ನಾಯಕ, ತುಳಿತಕ್ಕೆ ಒಳಗಾದವರನ್ನು ಅಭಿವೃದ್ದಿ ಮಾಡುವದಕ್ಕಾಗಿ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದಾರೆ, ಸಮಾಜಕ್ಕೆ ಕೊಡುಗೆ ನೀಡಿದ ನಾಯಕರನ್ನು ಮಹಾತ್ಮರನ್ನು ಸದಾಕಾಲ ಸಮಾಜ ಸ್ಮರಿಸಬೇಕು, ದ್ವೇಷದಿಂದ ಏನೆನು ಗೆಲ್ಲುವದಕ್ಕೆ ಆಗಲ್ಲ ಪ್ರೀತಿಯಿಂದ ಗೆಲ್ಲುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು.
ನಿವೃತ ಪ್ರಾಚಾರ್ಯ ಡಾ.ಸಂಗಮೇಶ ಮಟೋಳಿ ಉಪನ್ಯಾಸ ನೀಡಿದರು.
ರುದ್ರಸ್ವಾಮಿ ಪೇಠದ ಕೃಷ್ಣಾನಂದ ಶ್ರೀಗಳು, ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಕರಿಸಿದ್ದೇಶ್ವರ ಗದ್ದುಗೆಯ ಪೂಜಾರಿಗಳು ಸಾನ್ನಿಧ್ಯವಹಿಸಿದ್ದರು.
ವೇದಿಕೆಯಲ್ಲಿ ಅಲ್ಪಸಂಖ್ಯಾತರ ಘಟಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಫೀಕ ಬಾರಿಗಡ್ಡಿ, ರವಿ ಬಬಲೇಶ್ವರ, ಹೆಸ್ಕಾಂ ಇಇ ಸಂತೋಷ ಪಾಟೀಲ, ಬಿಆರ್ಸಿಓ ರಮೇಶ ಅವಟಿ, ಭೀಮಶಿ ನಡುವಿನಮನಿ, ಅಜರ್ುನ ದಳವಾಯಿ, ಎನ್.ಬಿ.ಗಸ್ತಿ, ಎಲ್.ಎಸ್.ಜೋಗಿ, ಧರ್ಮಣ್ಣ ಪಡಸಲಗಿ, ನಾಗಪ್ಪ ಹೆಗಡೆ. ಹೂವಪ್ಪ ಉಷಾಕರ, ಕಾಸಪ್ಪ ಸನದಿ, ಸಂಜು ಕುರಣಿ, ಎಸ್.ಡಿ.ದಳವಾಯಿ, ಡಾ.ಪಾರ್ವತಿ ದೇಮನ್ನವರ, ಡಾ.ಜ್ಯೋತಿ ಜಡಿಪೂಜಾರಿ, ಡಾ.ವಿವೇಕಾನಂದ ದಳವಾಯಿ, ಸಚಿನ ಸನದಿ, ತಾಲೂಕಾ ಕುರುಬರ ಸಂಘದ ಅಧ್ಯಕ್ಷ ಮಲ್ಲು ಮೆಳಿ, ಸಿದ್ದಪ್ಪ ಎಣ್ಣಿ, ಈಶ್ವರ ವಾಳೆನ್ನವರ, ನಾಗಪ್ಪ ಸನದಿ, ಸುಮಿತ್ರಾ ಗುಳಬಾಳ ಇತರರು ಇದ್ದರು. ಸರಸ್ವತಿ ಸಬರದ ನಾಡಗೀತೆ ಹಾಡಿದರು, ತಹಸೀಲ್ದಾರ ಸದಾಶಿವ ಮಕ್ಕೋಜಿ ಸ್ವಾಗತಿಸಿ. ಪ್ರಾಸ್ತಾವಿಕ ಮಾತನಾಡಿದರು. ಮಂಜು ದನಗರ ನಿರೂಪಿಸಿದರು. ಪುಂಡಲಿಕ ಸಲಗರ ವಂದಿಸಿದರು.
ಭವ್ಯ ಮೆರವಣಿಗೆ:
ನಗರದ ಅಮೋಘ ಸಿದ್ದೇಶ್ವರ ದೇವಸ್ಥಾನ ಆವರಣದಿಂದ ಭಕ್ತ ಕನಕದಾಸ ಶಾಲೆಯವರೆಗೆ ನಗರದ ಪ್ರಮುಖ ಬೀದಿಗಳಲ್ಲಿ ಡೊಳ್ಳು ಸೇರಿದಂತೆ ವಿವಿಧ ವಾಧ್ಯ ಮೇಳಗಳೊಂದಿಗೆ 500ಕ್ಕೂ ಅಧಿಕ ಕುಂಭ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.