ಜಮಖಂಡಿ

ಸಾಮಾಜಿಕ ಕಾರ್ಯದಲ್ಲಿ ಇಂದಿನ ಯುವತಿಯರ ಪಾತ್ರ ಹಿರಿದು: ಡಾ.ಮೀನಾಕ್ಷಿ

ಸಾಮಾಜಿಕ ಕಾರ್ಯದಲ್ಲಿ ಇಂದಿನ ಯುವತಿಯರ ಪಾತ್ರ ಹಿರಿದು:  ಡಾ.ಮೀನಾಕ್ಷಿ

ವಿಜಯಪುರ: ಮಹಿಳೆ ತಾನು ಅಬಲೆ ಎಂದು ತಿಳಿದು ಅವಕಾಶಗಳಿಂದ ದೂರ ಉಳಿದಾಗ ಪ್ರಗತಿ ಹೊಂದಲು ಸಾಧ್ಯವಿಲ್ಲ. ಕೇವಲ ಮನೆಯ ನಾಲ್ಕು ಗೋಡೆಗಳ ಮಧ್ಯ ಯಾಂತ್ರಿಕತೆಯಿಂದ ಕೂಡಿದ ಕೌಟುಂಬಿಕ ಜೀವನ ಸಾಗಿಸಿದರೆ ಅದರ ನಷ್ಟ ಅವಳಿಗೆ ಹೊರತು ಸಮಾಜಕ್ಕಲ್ಲ. ಇಂದಿನ 21ನೇ ಶತಮಾನದಲ್ಲಿ ಪುರುಷನ ಹೆಗಲಿಗೆ ಹೆಗಲು ಕೊಟ್ಟು ಸೇವೆ ಸಲ್ಲಿಸುವ ಶಕ್ತಿ ಮಹಿಳೆ ಹೊಂದಿದ್ದು ಇಂದಿನ ಯುವತಿಯರೆಲ್ಲ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಡಾ.ಮೀನಾಕ್ಷಿ.ಪಾಟೀಲ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು. 

ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಶಾರದಾ ಸಭಾಭವನದಲ್ಲಿ ನಡೆದ 2023-24 ನೇ ಸಾಲಿನ  ಎನ್.ಎಸ್.ಎಸ್ ದಿನಾಚರಣೆಯ ಮುಖ್ಯ ಅತಿಥಿಯಾಗಿ ಬಾಷಣ ಮಾಡುತ್ತ ತಮ್ಮ ಸ್ವಂತ ಅನುಭವ ಹಂಚಿಕೊಂಡರು.

ಕಾಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಸಿ.ಬಿ.ನಾಟಿಕಾರ ಅವರು ಎನ್.ಎಸ್.ಎಸ್. ಗೀತೆಯನ್ನು ಹಾಡುವದರ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ  ತುಂಬಿದರು. ವೇದಿಕೆಯ ಮೇಲೆ ಸಿಬ್ಬಂದಿ ಕಾರ್ಯದರ್ಶಿಗಳಾದ ಎಸ್.ಬಿ.ಸಾವಳಸಂಗ, ಪ್ರಕಾಶ.ಮೇತ್ರಿ, .ಎಂ.ಎಂ.ದಖನಿ,  ಎಸ್.ಸಿ.ತೋಳನೂರ,.ಆರ್.ಸಿ.ಹಿರೇಮಠ, ಉಪಸ್ಥಿತರಿದ್ದರು.

ಹಿರಿಯ ಉಪನ್ಯಾಸಕ ಎಂ.ಬಿ.ರಜಪೂತ ಎನ್.ಎಸ್.ಎಸ್ ಶಿಬಿರ ಗೀತೆಯನ್ನು ಸುಶ್ರಾವ್ಯವಾಗಿ ಹಾಡುವದರ ಮೂಲಕ ವಿದ್ಯಾಥರ್ಿನಿಯರ ಮೆಚ್ಚಿಗೆಗೆ ಪಾತ್ರರಾದರು. ಕುಮಾರಿ.ಅನಘಾ.ಅಯ್ಯರ ಪ್ರಾರ್ಥನೆಯನ್ನು ನೆರವೇರಿಸಿಕೊಟ್ಟರು, ಎನ್.ಎಸ್.ಎಸ್. ಘಟಕದ ಸಂಚಾಲಕರಾದ ಡಾ.ಮಹಾದೇವಿ.ಸುಂಗಾರೆ ಅವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿ ಎಲ್ಲರನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಶ್ರೀಮತಿ.ಎಸ್.ಸಿ.ಕರಣಿ ವಂದಿಸಿದರು. ಜೈರಾಬಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು

ಕಾಲೇಜಿನ ಎಲ್ಲ ಉಪನ್ಯಾಸಕರು,ಸಿಬ್ಬಂದಿ ವರ್ಗ ಹಾಗೂ ಎನ್.ಎಸ್.ಎಸ್ ಸ್ವಯಂಸೇವಕಿಯರು, ವಿದ್ಯಾರ್ಥಿನಿಯರು ಹಾಜರಿದ್ದು ಸಮಾರಂಭವನ್ನು ಯಶಸ್ವಿಗೊಳಿಸಿದರು 

ಸುದ್ದಿ ಓದಿ