ಜಮಖಂಡಿ

ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಮನವಿ

ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಮನವಿ

ಲೋಕದರ್ಶನ ವರದಿ,

ಜಮಖಂಡಿ 02: ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದ ಹೊರಗುತ್ತಿಗೆ ಸಿಬ್ಬಂದಿಗಳು ವಿವಿಧ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ತಾಲೂಕ ಸಮಿತಿ ಪ್ರತಿಭಟನೆಯನ್ನು ನಡೆಸಿದರು.

ನಗರದ ಸಮಾಜ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ಪ್ರತಭಟನಾಕಾರರು ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಡಿ ನಡೆಸುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ 15-20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಅಡುಗೆ ಸಹಾಯಕರು, ಕಾವಲುಗಾರರು, ಸ್ವಚ್ಛತಾಗಾರರು, ಜವಾನರು,  ಡಿ ಗ್ರೂಪ್ ನೌಕರರು ಕೆಲಸ ಮಾಡುತ್ತಿದ್ದಾರೆ. ಆದರೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಹೀಗಾಗಿ ಸಿ ಮತ್ತು ಡಿ ವರ್ಗದ ಹೊರ ಗುತ್ತಿಗೆ ಸಿಬ್ಬಂದಿಗೆ ನಿವೃತ್ತಿವರೆಗೆ ಸೇವಾ ಭದ್ರತೆ ಕೊಡಬೇಕು. ನೇರವಾಗಿ ಇಲಾಖೆಯಿಂದ ಮಾಸಿಕ ವೇತನ ಬ್ಯಾಂಕ್ ಖಾತೆಗೆ ಹಾಕಬೇಕು. 2023 ಏಪ್ರಿಲ್ 1ರ ಕಾರ್ಮಿಕ ಇಲಾಖೆ ಆದೇಶದಂತೆ ಕನಿಷ್ಠ ವೇತನ ನೀಡಬೇಕು ಎಂದರು.

ವಾರದ ರಜೆ, ಹಬ್ಬಳಗಳ ರಜೆ, ಇಎಸ್ಐ ಕಾರ್ಡ್ , ಪಿ.ಎಫ್.ಗೆ ಹಣ ತುಂಬಿದ ರಶೀದಿ ಕೊಡಬೇಕು. ಸಮಾಜ ಕಲ್ಯಾಣ ಇಲಾಖೆಯಲ್ಲಿ ನೌಕರರ ಸಂಖ್ಯೆ ಕಡಿಮೆ ಮಾಡಿರುವ ಆದೇಶ ವಾಪಸ್ ಪಡೆಯಬೇಕು. ಕೆಲಸದ ಭದ್ರತೆ ನೀಡಬೇಕು. ಬಾಕಿ ಇರುವ ಸಂಬಳ ತಕ್ಷಣ ಕೊಡಬೇಕು.  ಜನಪ್ರತಿನಿಧಿಗಳು ಹೊರುಗುತ್ತಿಗೆ ನೌಕರರಾಗಿ ಕೆಲಸಕ್ಕೆ ತೆಗೆದುಕೊಳ್ಳಲು ಶಿಫಾರಸು ಪತ್ರಗಳನ್ನು ಪರಿಗಣಿಸಬಾರದು. ಇದರಿಂದ ಹಾಲಿ ಹೊರಗುತ್ತಿಗೆ ನೌಕರರು ಕೆಲಸ ಕಳೆದುಕೊಳ್ಳುತ್ತಾರೆ.  ಅಧಿಕಾರಿಗಳ ಕಿರುಕುಳ ನಿಲ್ಲಬೇಕು ಎಂದು ಒತ್ತಾಯಿಸಿದರು.

ತಾಲೂಕಧ್ಯಕ್ಷ ಹಣಮಂತ ಹಬಗುಂಡಿ, ಉಪಾಧ್ಯಕ್ಷ ಸಚೀನ ಆಲಗೂರ, ಕಾರ್ಯದರ್ಶಿ ಸುನೀಲ ಬಂಗಾರಿ, ವಿನೋದ ಸುರಗೊಂಡ, ರಾಮ್ಮಣ್ಣ ಕನಾಳ, ಮಹಾದೇವಿ ಪಾಟೋಳಿ, ಮಹಾದೇವಿ ಹಿರೇಮಠ, ಮಂಗಲಾ ಪೋಳ, ಸರಸ್ವತಿ ಕದಂ,ಸುಂದ್ರವ್ವ ಕಾಂಬಳೆ, ಪ್ರೇಮಾ ಬಸರಿಗಿಡದ, ಕಲಾವತಿ ದೊಡಮನಿ, ಶಿಲ್ಪಾ ಲಾಂಡಗೆ, ಜಯಶ್ರೀ ತುಬಚಿ,ಸುಮಿತ್ರಾ ಬಂಡಿವಡ್ಡರ, ಲಕ್ಷ್ಮೀ ಮಾದರ, ರೇಖಾ ನಾಗನೂರ ಸೇರಿದಂತೆ ಅನೇಕರು ಇದ್ದರು. 



ಸುದ್ದಿ ಓದಿ