ವಿಜಯನಗರ

ಹೊಸಪೇಟೆಯಲ್ಲಿ ಅಖಿಲ ಭಾರತೀಯ ವೈಧ್ಯಕೀಯ ವಿಜ್ಞಾನ ಸಂಸ್ಥೆ ಸ್ಥಾಪನೆಗೆ ಮನವಿ

ಹೊಸಪೇಟೆಯಲ್ಲಿ ಅಖಿಲ ಭಾರತೀಯ ವೈಧ್ಯಕೀಯ ವಿಜ್ಞಾನ ಸಂಸ್ಥೆ ಸ್ಥಾಪನೆಗೆ ಮನವಿ


ಹೊಸಪೇಟೆಯಲ್ಲಿ ಅಖಿಲ ಭಾರತೀಯ ವೈಧ್ಯಕೀಯ ವಿಜ್ಞಾನ ಸಂಸ್ಥೆ ಸ್ಥಾಪನೆಗೆ ಮನವಿ 

ವಿಜಯನಗರ 23: ಜಿಲ್ಲಾ ಕೇಂದ್ರವಾಗಿರುವ ಹೊಸಪೇಟೆಯಲ್ಲಿ (ಂಋಒಖ) ಅಖಿಲ ಭಾರತೀಯ ವೈಧ್ಯಕೀಯ ವಿಜ್ಞಾನ ಸಂಸ್ಥೆ ಸ್ಥಾಪನೆಗೆ ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕೆಂದು ಆಗ್ರಹಿಸಿ, ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡುರಾವ್ ಅವರಿಗೆ ವಿಜಯನಗರ ನಾಗರೀಕ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಏಮ್ಸ್‌ ಸ್ಥಾಪನೆ ಹೋರಾಟ ಸಮಿತಿಯ ಸಂಚಾಲಕರಾದ ಪ್ರೋ. ಉಮಾಮೇಶ್ವರ್ ಮಾತನಾಡಿ ಏಮ್ಸ್‌ ಸಂಸ್ಥೆಯು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಧೀನದಲ್ಲಿರುವ ಸ್ವಾಯತ್ತ ಸಂಸ್ಥೆಯಾಗಿದ್ದು, ಅಂತರಾಷ್ಟ್ರೀಯ ಗುಣಮಟ್ಟಕ್ಕೆ ಸಮಾನವಾಗಿ ವೈಧ್ಯಕೀಯ ಶಿಕ್ಷಣ, ಸಂಶೋಧನೆ ಮತ್ತು ಉಚಿತ ಚಿಕಿತ್ಸೆ ನೀಡುವ ಪ್ರತಿಷ್ಠಿತ ರಾಷ್ಟ್ರೀಯ ಸಂಸ್ಥೆಯಾಗಿದೆ. ದೇಶದ ಎಲ್ಲಾ ರಾಜ್ಯಗಳಲ್ಲಿ ಏಮ್ಸ್‌ ಸಂಸ್ಥೆ ಸ್ಥಾಪನೆಯಾಗಿದ್ದು, ಜಿ.ಎಸ್‌.ಟಿ. ತೆರಿಗೆ ಪಾವತಿಯಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ಸಂಸ್ಥೆ ಸ್ಥಾಪನೆಯಾಗದಿರುವುದು ಅತ್ಯಂತ ಖಂಡನಿಯ. ಏಮ್ಸ್‌ ಸ್ಥಾಪನೆಯಿಂದ ಕೇವಲ ವಿಜಯನಗರ ಜಿಲ್ಲೆಯಲ್ಲಿ ಮಾತ್ರವಲ್ಲದೆ ಉತ್ತರ ಕರ್ನಾಟಕ ಭಾಗದ ಜನರಿಗೆ ಅತ್ಯುತ್ತಮ ವೈಧ್ಯಕೀಯ ಸೌಲಭ್ಯವನ್ನು ನೀಡಲು ಅನುಕೂಲವಾಗುತ್ತದೆ ಎಂದರು.  


ನಂತರ ವಿಜಯನಗರ ನಾಗರೀಕ ವೇದಿಕೆ ಅಧ್ಯಕ್ಷರಾದ ವೈ.ಯಮುನೇಶ್ ಮಾತನಾಡಿ ಏಮ್ಸ್‌ ಸ್ಥಾಪನೆ 15.11.1956ರ ಕಾಯ್ದೆ ಪ್ರಕಾರ ಆಸ್ಪತ್ರೆ ಸ್ಥಾಪನೆಯ ಸ್ಥಳ ಆಯ್ಕೆ ಬಗ್ಗೆ ಕೆಲವು ಮಾನದಂಡಗಳನ್ನು ಕೇಂದ್ರ ಸರ್ಕಾರವೇ ರೂಪಿಸಿದೆ. ಆರೋಗ್ಯ ಹಾಗೂ ವೈಧ್ಯಕೀಯ ಕ್ಷೇತ್ರದಲ್ಲಿ ಹಿಂದುಳಿದ ಸೌಲಭ್ಯ ವಂಚಿತ ಜಿಲ್ಲೆಯಲ್ಲಿ ಏಮ್ಸ್‌ ಸ್ಥಾಪನೆಗೆ ಆಧ್ಯತೆ ನೀಡುವುದು, ಬೌಗೋಳಿಕವಾಗಿ ರಾಜ್ಯದ ಕೇಂದ್ರ ಸ್ಥಳದಲ್ಲಿದ್ದು, ಜನಸಾಂದ್ರತೆ ಹಾಗೂ ತ್ವರಿತವಾಗಿ ಜನಸಂಖ್ಯೆ ಆಗುತ್ತಿರುವ ಪ್ರದೇಶದಲ್ಲಿ ಸ್ಥಂಸ್ಥೆ ಸ್ಥಾಪನೆಗೆ ಒತ್ತು ನೀಡುವುದು ಹಾಗೂ ದೇಶದ ವಿವಿಧ ಭಾಗಗಳಿಂದ ವೈಧ್ಯರು, ವಿದ್ಯಾರ್ಥಿಗಳು ಬಂದು ಹೋಗಲು ಅನುಕೂಲವಾಗುವಂತೆ ರಸ್ತೆ, ರೈಲು ವಿಮಾನಯಾನ ಸಾರಿಗೆ ಸಂಪರ್ಕ ವಿರುವ ಜಿಲ್ಲೆಯಲ್ಲಿ ಸಂಸ್ಥೆ ಸ್ಥಾಪನೆಗೆ ಅವಕಾಶ ಇರಬೇಕೆಂದು ಹೇಳಲಾಗಿದೆ. ಹೊಸಪೇಟೆ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಏಮ್ಸ್‌ ಸ್ಥಾಪನೆಗೆ ಅಗತ್ಯವಾದ ಜಮೀನು ಹಾಗೂ ನಿಗಧಿಪಡಿಸಿದ ಮಾನದಂಡಗಳು ಪೂರಕವಾಗಿರುವುದರಿಂದ, ವಿಜಯನಗರ ಜಿಲ್ಲಾ ಕೇಂದ್ರವಾದ ಹೊಸಪೇಟೆಯಲ್ಲಿ ಏಮ್ಸ್‌ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿದರು ಬೇಡಿಕೆಗೆ ಶಾಸಕರಾದ ಹೆಚ್‌.ಆರ್‌.ಗವಿಯಪ್ಪ ಧ್ವನಿಗೂಡಿಸಿದರು. ಮುಖಂಡರಾದ ಡಾ.ಲಕ್ಷ್ಮಣ್ ಕರಿಭೀಮಣ್ಣನವರ್, ತಿಪ್ಪೇಸ್ವಾಮಿ, ನಜೀರ್ ಸಾಬ್, ಮಲ್ಲಯ್ಯ, ಎಂ.ಎರಿ​‍್ರಸ್ವಾಮಿ, ರಾಮಾಲಿ, ಶಂಕರ​‍್ಪ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ