ಬಸವ ಜಯಂತಿ ಅಂಗವಾಗಿ ರಥೋತ್ಸವ
ಲೋಕದರ್ಶನ ವರದಿ,
ಜಮಖಂಡಿ: 26: ಬಸವ ಜಯಂತಿ ಅಂಗವಾಗಿ ಓಲೇಮಠದ ಹೊರ ಆವರಣದಲ್ಲಿ 19 ಅಡಿ ಎತ್ತರದ ರಥ ವಚನ ಪಲ್ಲಕ್ಕಿ ಉತ್ಸವದೊಂದಿಗೆ ಭಕ್ತರ ಹಷರ್ೋದ್ಘಾರದ ಮಧ್ಯೆ ಭವ್ಯ ವಚನ ರಥೋತ್ಸವ ಜರುಗಿತು.
ವಚನ ರಥೋತ್ಸವಕ್ಕೆ ರಬಕವಿ ಮರೆಗುದ್ದಿಯ ಗುರುಮಹಾಂತ ಶ್ರೀಗಳು, ಚಿಮ್ಮಡ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು, ಸೋಲಾಪುರ ಕಿರೀಟ ಮಠದ ಸ್ವಾಮಿನಾಥನ ಕಿರೀಟೇಶ್ವರ ಶ್ರೀಗಳು ಸಾನಿಧ್ಯದಲ್ಲಿ, ಓಲೇಮಠದ ಡಾ.ಅಭಿನವಕುಮಾರ ಚೆನ್ನಬಸವ ಶ್ರೀಗಳು ನೇತೃತ್ವದಲ್ಲಿ ವಿವಿಧ ವಾದ್ಯ ಮೇಳದೊಂದಿಗೆ ಭವ್ಯ ರಥೋತ್ಸವ ಜರುಗಿತು.
ಭಕ್ತರು ಜಯ ಘೋಷ ಹಾಕುತ್ತ ರಥವನ್ನು ಎಳೆದರು. ರಸ್ತೆಯದುದ್ದಕ್ಕೂ ಮಹಿಳೆಯರು ರಂಗೋಲಿ ಚಿತ್ರಬಿಡಿಸಿ ಹೂವಿನ ಮಳೆಗೈದು, ಖಾರೀಕು, ಬೆತ್ತಾಸುಗಳನ್ನು ರಥದಮೇಲೆ ಹಾರಿಸಿ ಭಕ್ತಿ ಪರಕಾಷ್ಟೆ ಮೆರೆದರು.
ಅಪ್ಪಾಸಾಬ ದೇವರವರ, ಸದಾಶಿವ ಕವಟಗಿ, ಆರ್.ಎಸ್. ಅಕ್ಕಿ, ಎಂ.ಕೆ. ಹಿಟ್ಟಿನಮಠ, ಶಿವಲಿಂಗಯ್ಯ ಮಠಪತಿ, ಅಶೋಕ ಅಥಣಿ, ಶಿವಯ್ಯ ನಾಗರಾಳಮಠ, ಮಲ್ಲಿಕಾಜರ್ುನ ಹೋಳಗಿ, ರಮೇಶ ವಾಜಂತ್ರಿ, ಬಸವರಾಜ ಬಳಗಾರ, ಸಿದ್ದಯ್ಯ ಕಲಕತ್ತಿಮಠ, ಶ್ರೀಶೈಲ ದೇಸಾಯಿ, ರಾಚಯ್ಯ ಮಠಪತಿ, ಬಸಯ್ಯ ಹಿರೇಮಠ, ಸಗರೆಪ್ಪ ಅತ್ತೆಪ್ಪನವರ, ಬಸವರಾಜ ಹಾಲಳ್ಳಿ, ಪ್ರಶಾಂತ ಚರಕಿ, ಸಂಜು ಗೌಡನವರ, ಸುನೀಲ ಹಿರೇಮಠ, ಮಂಜು ಗೌಡನವರ, ಸಂಗಮೇಶ ಕೋಲಾರಮಠ, ರಾಚಯ್ಯ ನಾಗರಾಳಮಠ, ವಿರುಪಾಕ್ಷಯ್ಯ ಹಿರೇಮಠ, ನವೀನ ಭೂಸನ್ನವರ, ಕಲ್ಮೇಶ ಕೊಣ್ಣುರ, ಪ್ರಜ್ವಲ ಮಣ್ಣೂರ, ಗುರು ದೊಡಮನಿ, ಲಕ್ಷ್ಮಣ ನಾಯ್ಕರ ಇತರರು ಪಾಲ್ಗೊಂಡಿದ್ದರು