ರಂಗೋಲಿ ಸಾಂಪ್ರದಾಯಕ ಕಲೆ ಯೋಗಾ, ಏಕಾಗ್ರತೆಯನ್ನು ಹೊಂದಿದೆ: ತಿಮ್ಮಾರೆಡ್ಡಿ
ಲೋಕದರ್ಶನ ವರದಿ
ಬಳ್ಳಾರಿ 21:ಮೈತ್ರಿ ಮಹಿಳಾ ಮಂಡಳಿ ವತಿಯಿಂದ ತ್ರಿಮಸ್ಥ ಬ್ರಾಹ್ಮಣ ಸಮಾಜದ ಮಹಿಳೆ0ುರಿಗಾಗಿ ನಗರದ ಕಪ್ಪಗಲ್ ರಸ್ತೆ0ುಲ್ಲಿರುವ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಎರ್ಪಡಿಸಲಾದ ರಂಗೋಲಿ ಸ್ಪಧರ್ೆ0ುನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಭಾರತಿ ತಿಮ್ಮಾರೆಡ್ಡಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಈ ರಂಗೋಲಿ ಕಲೆ ಬಹಳ ಹಿಂದಿನಿಂದಲೂ ನಮ್ಮ ಸಾಂಪ್ರದಾಯ ಪ್ರಕಾರ ಏರ್ಪಡಿಸಿದ್ದು, ಈ ಸಂಸ್ಕೃತಿಯನ್ನು ಬೆಳೆಸಬೇಕೆಂದು, ಇಂದಿನ ಯುವ ಪೀಳಿಗೆ ಇದನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಈ ಕಲೆಯನ್ನು ಯೋಗಾ ಮತ್ತು ಏಕಾಗ್ರತೆಯನ್ನು ಬೆಳೆಸುವ ವ್ಯಾಯಾಮಗಳನ್ನು ಹೊಂದಿರುತ್ತದೆ. ಹಾಗೂ ಆರೋಗ್ಯದ ದೃಷ್ಟಿಯಿಂದ ಈ ಕಲೆಯನ್ನು ಮುಂದುವರೆಸಿಕೊಂಡು ಹೋಗಬೇಕೆಂದು ತಿಳಿಸಿದರು. ತೀಪರ್ುಗಾರರಾಗಿ ಆಗಮಿಸಿದ ಶ್ರೀ ತಾರಾಬಾಯಿ ರಾಘವೇಂದ್ರ ಅವರು ಮಾತನಾಡುತ್ತಾ, ರಂಗೋಲಿ ಹಾಕುವುದು ಬಹಳ ಸೂಕ್ಷ್ಮದಿಂದ ಕೂಡಿರುವುದರಿಂದ ಇದರಲ್ಲಿ ಅಧಿಕ ಮಹಿಳೆಯರು ಪಾಲ್ಗೊಂಡು ಇನ್ನೂ ಸೂಕ್ಷ್ಮತೆಯನ್ನು ಬೆಳೆಸಿಕೊಂಡು ಬರಲು ತಿಳಿಸಿದರು. ಕಾರ್ಯದಶರ್ಿಗಳಾದ ಶ್ರೀಮತಿ ರೂಪಾ ರಾಘವೇಂದ್ರ ಅವರು ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸೌಮ್ಯ ಗುರುರಾಜ್ ಅವರು ಎಲ್ಲಾ ಅತಿಥಿಗಳನ್ನು ಪರಿಚಯಿಸಿದರು. ಮೈತ್ರಿ ಮಹಿಳಾ ಮಂಡಳಿಯವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ರಂಗೋಲಿ ಸ್ಪಧರ್ೆಯಲ್ಲಿ ಪ್ರಥಮ ಬಹುಮಾನ ಐಶ್ವ0ರ್ು (ಬ್ರಾಹ್ಮಣ ಒಕ್ಕೂಟ ವತಿಯಿಂದ), ದ್ವಿತೀ0ು ಬಹುಮಾನ ಶ್ರೀಮತಿ ಗಾಯಿತ್ರಿ (ಯೋಗೀಶ್ವರ ಯಜ್ಞವಲ್ಕ್ಯ ಸಂಘ ಮತ್ತು ವಿಠ್ಠಲ ಕೃಷ್ಣ ದೇವಸ್ಥಾನ ಕಮಿಟಿ ವತಿಯಿಂದ), ತೃತೀ0ು ಬಹುಮಾನ ಶ್ರೀಮತಿ ಅನುರಾಧ ಪುರಾಣಿಕ ಸಮಾಧಾನಕರ ಬಹುಮಾನ ಶ್ರೀಮತಿ ವರಲಕ್ಷ್ಮಿ ಕುಮಾರಿ ಪ್ರಶಾಂತಿ ಶಮರ್ಾ (ಶ್ರೀ ಮಧ್ವ ಸಂಘ ವತಿಯಿಂದ) ಬಹುಮಾನಗಳನ್ನು ಪಡೆದರು. ಸ್ಪಧರ್ೆಯಲ್ಲಿ ಶ್ರೀಮತಿ ಶ್ರೀ ಲತಾ ರಾವ್, ಶ್ರೀಮತಿ ರಮಾದೇವಿ, ತೀಪರ್ುಗಾರರಾಗಿದ್ದರು. ಈ ರಂಗೋಲಿ ಸ್ಪಧರ್ೆಯಲ್ಲಿ ಒಟ್ಟು 26 ಸ್ಪಧರ್ಾಳುಗಳು ಭಾಗವಹಿಸಿದರು. ಸಂಜೆ ಸ್ಪಧರ್ಿಗಳಿಗೆ ಲಘು ಉಪಹಾರವನ್ನು ಬ್ರಾಹ್ಮಣ ಸಂಘರ್ಷ ಸಮಿತಿ, ಬಳ್ಳಾರಿ ಅವರು ಏರ್ಪಡಿಸಿದ್ದರು.