ರೈಲ್ವೇ ಕ್ರೀಯಾ ಸಮಿತಿಯಿಂದ ರೈಲು ಚಾಲನೆ ಕುರಿತು ಸಚಿವರಿಗೆ ಮನವಿ

ರೈಲ್ವೇ ಕ್ರೀಯಾ ಸಮಿತಿಯಿಂದ ರೈಲು ಚಾಲನೆ ಕುರಿತು ಸಚಿವರಿಗೆ ಮನವಿ

ಬಳ್ಳಾರಿ 14;ಬಳ್ಳಾರಿ ಭಾಗದ ರೈಲ್ವೆ ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ರೈಲ್ವೆ ಸಚಿವರ ಭೇಟಿಯಾದ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ.ಮಹೇಶ್ವರ ಸ್ವಾಮಿ ನಿಯೋಗದೊಂದಿಗೆ ನವ ದೆಹಲಿಯಲ್ಲಿ ರೈಲ್ವೆ ಕ್ರಿಯಾ ಸಮಿತಿ ನಿಯೋಗ ಕೇಂದ್ರ ರೈಲ್ವೆ ಸಚಿವ ಪಿಯೂಸ್ ಗೋಯಲ್ ಅವರೊಂದಿಗೆ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಸೇರಿದಂತೆ ಹಲವಾರು ಗಣ್ಯರು ಚಚರ್ಿಸಿ ಮನವಿ ಪತ್ರ ಅಪರ್ಿಸಿದರು.  ಭೇಟಿ ಮಾಡಿ ಈ ಸಾಲಿನ ವರ್ಷದಲ್ಲಿ ಗದಗದಿಂದ ಬೆಂಗಳೂರಿಗೆ ಇಂಟರ್ ಸಿಟಿ ರೈಲುನ್ನು ಆರಂಭಿಸಲು ಕೋರಿದರು. ನಂತರ ಬಹುದಿನದ ಬೇಡಿಕೆಯಾದ ಕೊಪ್ಪಳ ದಿಂದ ಬಳ್ಳಾರಿ - ಗುಂತಕಲ್ ಮಾರ್ಗವಾಗಿ ಬೆಂಗಳೂರಿಗೆ ಹಗಲಿನ ಇಂಟರ್ ಸಿಟಿ ರೈಲ್ವನ್ನು 

ಈ ಸಾಲಿನ ವರ್ಷದಲ್ಲಿ ಪ್ರಾರಂಭಿಸಬೇಕೆಂಬ ಪ್ರಧಾನ ಬೇಡಿಕೆಯನ್ನು ಈ ರೈಲುನ್ನು ಕೊಪ್ಪಳ ದಿಂದ ಆರಂಭಿಸಲು ಸಾಧ್ಯವಾಗದಿದ್ದಲ್ಲಿ ಜಂಕ್ಷನ್ ಸ್ಥಳವಾದ ಗದಗ ದಿಂದ ಆರಂಭಿಸುವಂತೆ ಕೋರಲಾಯಿತು.  ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಸಮಸ್ಯೆ ಇದ್ದಲ್ಲಿ ಈ ರೈಲುನ್ನು ಮೈಸೂರಿನವರೆಗೆ ವಿಸ್ತರಿಸುವಂತೆ ನಿಯೋಗ ವಿನಂತಿಸಿತು. ಈ ಇಂಟರ್ ಸಿಟಿ ರೈಲು ಬೇಡಿಕೆಯನ್ನು ಈ ಸಾಲಿನ ವರ್ಷದಲ್ಲಿ ಆದ್ಯತೆ ಮೇರೆಗೆ ಪ್ರಾರಂಭಿಸುವುದಾಗಿ ರೈಲ್ವೆ ಮಂತ್ರಿಗಳ ನಿಯೋಗಕ್ಕೆ ಭರವಸೆ ನೀಡಿದರು. ಈಗಾಗಲೇ  ಹೊಸಪೇಟೆಯಿಂದ ಹರಿಹರದವರೆಗೆ  ಬ್ರಾಡ್ಗೇಜ್  ರೈಲ್ವೆ ಮಾರ್ಗವಿದ್ದರೂ ಕೇವಲ ಕೊಟ್ಟೂರಿನಿಂದ ಹರಿಹರದ ವರೆಗೆ ಮಾತ್ರ ರೈಲು (ರೈಲು ಸಂಖ್ಯೆ 56529 / 56530) ಸಂಚಾರವಾಗುತ್ತಿದೆ. ಕೂಡಲೇ 

ಈ ಸಾಲಿನ ವರ್ಷದಲ್ಲಿ ಹೊಸಪೇಟೆಯಿಂದ ಹರಿಹರದವರೆಗೆ ರೈಲಿನ ಸಂಚರ ಆರಂಭಿಸಲು ರೈಲ್ವೆ ಮಂತ್ರಿಗಳನ್ನು ನಿಯೋಗ ಒತ್ತಾಯಿಸಿತು. ಇದಕ್ಕೆ ಮಂತ್ರಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ ಈ ಸಾಲಿನ ವರ್ಷದಲ್ಲಿ ರೈಲುನ್ನು ಪ್ರಾರಂಭಿಸುವ ಭರವಸೆಯನ್ನು ನಿಯೋಗಕ್ಕೆ ನೀಡಿದರು. ಪ್ರವಾಸಿಗರ ಸೌಲಭ್ಯಕ್ಕಾಗಿ ಮೈಸೂರು, ಹಾಸನ, ಚಿತ್ರದುರ್ಗ, ಹೊಸಪೇಟೆ, ಗದಗ, ಬಾಗಲಕೋಟೆ, ಬಿಜಾಪುರ ಇವುಗಳೆಲ್ಲಾು ಪ್ರಸಿದ್ಧ ಪ್ರವಾಸಿ ತಾಣಗಳಾಗಿದ್ದು, ಈ ಮಾರ್ಗಗಳ ಮೂಲಕ ಜನತೆ ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ಮೈಸೂರು ದಿಂದ  ಚಿತ್ರದುರ್ಗ, ಬಳ್ಳಾರಿ, ಗದಗ, ಬಿಜಾಪುರ ಮಾರ್ಗವಾಗಿ ಸೊಲ್ಲಾಪುರದವರೆಗೆ ನೂತನ ಪ್ರವಾಸಿ ರೈಲುನ್ನು ಈ ವರ್ಷದಿಂದ ಆರಂಭಿಸುವಂತೆ ರೈಲ್ವೆ ಮಂತ್ರಿಗಳನ್ನು ವಿನಂತಿಸಲಾಯಿತು.


ಸುದ್ದಿ ಓದಿ