ಪುಲೆ, ಬೋಸ್, ವಿವೇಕಾನಂದರ ಜನ್ಮದಿನಾಚರಣೆ
ಬಳ್ಳಾರಿ 25:ಸಾಮಾಜಿಕ ಮತ್ತು ಶೈಕ್ಷಣಿಕ ವಿಷಯಗಳಿಗೆ ಮಹತ್ವ ನೀಡಿದ ಸಾವಿತ್ರಿಬಾಯಿ ಪುಲೆ, ಪರಿಶ್ರಮದ ಮೂಲಕ ಅಕ್ಷರ ಜ್ಞಾನ ಕಲಿತು ಹಿಂದೂ ಧರ್ಮದ ಕುರಿತು ವಿಶ್ವಕ್ಕೆ ಸಾರಿದ ವಿವೇಕಾನಂದರು, ವಿದೇಶದಲ್ಲಿ ಸೈನ್ಯ ಕಟ್ಟಿ ಭಾರತ ಸ್ವಾತಂತ್ರ್ಯಕ್ಕೆ ಹೋರಾಡಿದ ಸುಭಾಷ್ ಚಂದ್ರ ಬೋಸ್ ರವರನ್ನು ಆದರ್ಶವಾಗಿಟ್ಟುಕೊಂಡು ವೈಜ್ಞಾನಿಕ ಚಿಂತನೆ ನಡೆಸಬೇಕೆಂದು ಸಾಹಿತಿ ಡಾ. ಸಿದ್ದನಗೌಡ ಪಾಟೀಲ್ ತಿಳಿಸಿದರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸಕರ್ಾರಿ ಪ್ರಥಮ ದಜರ್ೆ ಕಾಲೇಜ್ (ಸ್ವಾಯತ್ತ) ನಲ್ಲಿ ಅಖಿಲ ಭಾರತ ವಿದ್ಯಾಥರ್ಿ ಫೆಡರೇಷನ್, ಅಖಿಲ ಭಾರತ ಯುವಜನ ಫೆಡರೇಷನ್, ಎಸ್ ಎಸ್ ಎ ಸಕರ್ಾರಿ ಪ್ರಥಮದಜರ್ೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಸಾವಿತ್ರಿಬಾಯಿ ಪುಲೆ, ನೇತಾಜಿ ಸುಭಾಷ್ ಚಂದ್ರ ಬೋಸ್, ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇವರೆಲ್ಲರೂ ನಮಗೆ ಆದರ್ಶ ವ್ಯಕ್ತಿಗಳು. ಇವರ ವಿಚಾರಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು.
ಅಕ್ಷರದ ಅವ್ವ ಸಾವಿತ್ರಿ ಬಾಯಿ ಪುಲೆ ಯವರು ಪ್ರಪ್ರಥಮ ಮಹಿಳಾ ವಿಮೋಚಕಿ, ಪ್ರಪ್ರಥಮವಾಗಿ ಮಹಿಳೆಯರಿಗೆ ಗೋಸ್ಕರ ಶಿಕ್ಷಣವನ್ನು ನೀಡಿದರು. ಅನಾಥ ಮಕ್ಕಳ ಶಾಲೆ ತೆರೆದರು. ಶಿಕ್ಷಣ ನೀಡಿದ್ದಕ್ಕಾಗಿ ಕೆಲವರು ಸಗಣಿ ಎರಚಿದರು ಸಹ ಎದೆಗುಂದದೆ ಮಹಿಳೆಯರಿಗೆ, ದಲಿತರಿಗೆ ಶಿಕ್ಷಣ ನೀಡಿದರು. ಕಲ್ಕತ್ತಾದಿಂದ ಮೈಸೂರು ವರೆಗೆ ಕಾಲ್ನಡಿಗೆಯಲ್ಲಿ ಬಂದು ದೇಶ ಪರ್ಯಟನೆ ಮಾಡಿದ ಮಹಾನ್ ವ್ಯಕ್ತಿ ವಿವೇಕಾನಂದರು. ಏಳೀ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಯುವಕರನ್ನು ಬಡಿದೆಬ್ಬಿಸಿದರು. ಜಪಾನಿನಲ್ಲಿ ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದ ವ್ಯಕ್ತಿ ಸುಭಾಷ್ ಚಂದ್ರ ಬೋಸ್ ನಮಗೆಲ್ಲಾ ಆದರ್ಶ ವ್ಯಕ್ತಿಗಳೆಂದು ತಿಳಿಸಿದರು. ಶಬರಿಮಲೆ, ಮೀಸಲಾತಿ, ಎಪಿಎಲ್ಎಂಸಿ ನೀತಿಯ ಬಗ್ಗೆ ವಿದ್ಯಾಥರ್ಿಗಳು ಕೇಳಿದ ಪ್ರಶ್ನೆಗಳಿಗೆ ಸವಿಸ್ತಾರವಾಗಿ ಉತ್ತರಿಸಿದರು. ವಿದ್ಯಾಥರ್ಿಗಳು ಮೌಢ್ಯತೆಯನ್ನು ಬಿಟ್ಟು ವೈಜ್ಞಾನಿಕವಾಗಿ ಚಿಂತನೆಯನ್ನು ಅಳವಡಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಪ್ರಾಂಶುಪಾಲ ಅಬ್ದುಲ್ ಮುತಲಿಬ್ ಮಾತನಾಡಿ, ಧರ್ಮ ವಿಚಾರ ಕ್ರಾಂತಿ ಸಂವಿಧಾನ ಮೂಢನಂಬಿಕೆ ಬಗ್ಗೆ ತಿಳಿದರು. ಎಐವೈಎಫ್ ರಾಜ್ಯ ಸಂಚಾಲಕರಾದ ಸಂತೋಷ್ ಪ್ರಾಸ್ತಾವಿಕ ನುಡಿಗಳಾಡಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಇಸ್ಮಾಯಿಲ್ ಮಕಾಂದರ್, ಪರೀಕ್ಷಾ ನಿಯಂತ್ರಕ ಶ್ರೀನಿವಾಸ್ ಮೂತರ್ಿ, ಎಐವೈಎಫ್ ಜಿಲ್ಲಾಧ್ಯಕ್ಷ ಕಟ್ಟೆ ಬಸಪ್ಪ, ಎಐಎಸ್ಎಫ್ ರಾಜ್ಯ ಪ್ರಧಾನ ಕಾರ್ಯದಶರ್ಿ ರಮೇಶ್ ನಾಯಕ, ರಾಜ್ಯ ಸಹ ಕಾರ್ಯದಶರ್ಿ ಕೊಟ್ರೇಶ್, ಎಐಎಸ್ಎಫ್ ರಾಜ್ಯ ಖಜಾಂಚಿ ಮಂಜುನಾಥ, ಮಾದಿಹಳ್ಳಿ ಮಂಜುನಾಥ ರಾಜ್ಯ ಸಹಕಾರ್ಯದಶರ್ಿ, ಸಮಾಜಶಾಸ್ತ್ರ ಉಪನ್ಯಾಸಕ ಶರಣಪ್ಪ, ಪತ್ರಿಕೋದ್ಯಮ ಉಪನ್ಯಾಸಕ ಸುಂಕಣ್ಣ.ಟಿ ಹಡ್ಲಿಗಿ, ನಾಟಕ ವಿಭಾಗದ ಉಪನ್ಯಾಸಕ ಅಣ್ಣಾಜಿ ಕೃಷ್ಣಾರೆಡ್ಡಿ, ವೀಣಾ ನಾಯ್ಕ್ ನಿರೂಪಿಸಿದರು. ವಿದ್ಯಾಥರ್ಿಗಳು ಇದ್ದರು.