ಅಂಗನವಾಡಿ ಕಾರ್ಯಕತರ್ೆಯರಿಂದ ಹೆಚ್ಚಿನ ಸಂಬಳಕ್ಕಾಗಿ ಪ್ರತಿಭಟನೆ
ಲೋಕದರ್ಶನ ವರದಿ
ಬಳ್ಳಾರಿ 11: ಕೇಂದ್ರ- ರಾಜ್ಯ ಸಕರ್ಾರ ಅಂಗನವಾಡಿ ಕಾರ್ಯಕತರ್ೆ, ಸಹಾಯಕಿಯರಿಗೆ ಯಾವುದೇ ಪರಿಗಣನೆ ನೀಡದೆ ವರ್ಷ, ಎರಡು ವರ್ಷಕ್ಕೊಮ್ಮೆ ಕೇವಲ ರೂ 500/- ಹೆಚ್ಚಳ ಘೋಷಿಸುತ್ತಿರುವ ಪರಿಣಾಮ ಉನ್ನತ ಶ್ರೇಣಿಯ ಕಾರ್ಯಕರ್ತರಿಗೆ ಕನಿಷ್ಟ ವೇತನ ಸವಲತ್ತುಗಳಿಂದ ವಂಚಿತರಾಗಿದ್ದು ಕೂಲಿ ಕಾಮರ್ಿಕರಿಗಿಂತ ಕಡೆಯಾಗಿರುವುದು ನೋವಿನ ಸಂಗತಿ. ಮೋದಿ ಸಕರ್ಾರ ವೇತನ ಹೆಚ್ಚಳ ವಿವೃತ್ತಿ ವೇತನ ಯಾವುದೇರೀತಿಯ ಕಲ್ಲಾಣ ಯೋಜನೆಗಳನ್ನು ಮಂಜುರು ಮಾಡಿಲ್ಲ ಸ್ಥಳೀಯ ಫಲಾನುಭವಿಗಳು ಜನಪ್ರತಿನಿಧಿಗಳು ಎಂಬ ನೆಪದಲ್ಲಿ ಕಾರ್ಯಕತರ್ೆಯರ ಮೇಲೆ ಹಲ್ಲೆ ಕಿರುಕುಳ ಇತ್ತದಿ ನಡೆಯುತ್ತಲೇ ಇವೆ. ಎಂದು ಆಗ್ರಹಿಸಿ ಮುಖ್ಯ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆಯನ್ನು ನಡೆಸಿದರು.
ಕೇಂದ್ರ ಸಕರ್ಾರದಿಂದ ಕನಿಷ್ಠ ವೇತನ ರೂ 18,000/-, ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಸಿ, ಡಿ ಗ್ರೂಪ್ ನೌಕರರನ್ನಾಗಿ ಮಾಡಬೇಕು, ನಿವೃತ್ತಿವೇತನ ಮಂಜೂರು, ಗೌರವಧನ ಹೆಚ್ಚಳ, ಇ.ಎಸ್.ಐ ಭವಿಷ್ಯ ನಿಧಿ, ಸೇವಾ ಭದ್ರತೆ, ಗ್ರಾಚ್ಯುಟಿ ಜಾರಿಗೊಳಿಸಬೇಕು. ಎಂದು ಅಂಗನವಾಡಿ ಕಾರ್ಯಕತರ್ೆಯರು ಸಹಾಯಕಿಯರು ಪ್ರತಿಭಟನೆ ಮೂಲಕ ಮನವಿ ಮಾಡಿಕೊಂಡರು.
ಅಂಗನವಾಡಿ ಕಾರ್ಯಕತರ್ೆಯರ ಮತ್ತು ಸಹಾಯಕಿಯರ ಪೆಡರೇಷನ್ ತಾಲೂಕು ಸಮಿತಿ ಪದಾಧಿಕಾರಿಗಳಾದ ಎಐಟಿಯುಸಿ ಪ್ರಧಾನ ಕಾರ್ಯದಶರ್ಿ ಗುಡಿಹಳ್ಳಿ ಹಾಲೇಶ್, ಈ ಸಂದರ್ಭದಲ್ಲಿ ಎಐಎಸ್ಫ್ ರಾಜ್ಯ ಸಂಚಾಲಕ ಹೆಚ್.ಎಂ.ಸಂತೋಷ್, ಖಜಾಂಚಿ ಸೀಮಾ, ಕಾರ್ಯದಶರ್ಿ ಜಯಲಕ್ಷ್ಮಿ, ಯು. ಮಂಜುಳ ರುಕ್ಮಿಣಿ ಬಾಯಿ, ದೀಪಾ ಹನುಮಕ್ಕ, ಲಕ್ಷ್ಮಿದೇವಿ ಮುಂತಾದ ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.