ಭ್ರಷ್ಟಾಚಾರ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ಭ್ರಷ್ಟಾಚಾರ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ಬಳ್ಳಾರಿ20: ಹೈ.ಕ ಪ್ರದೇಶಕ್ಕೆ ಸೇರಿದ ಕಲ್ಬುಗರ್ಿ ವಿಭಾಗದಲ್ಲಿ ಸಕರ್ಾರಿ ಸೇವೆಯಲ್ಲಿರುವ ಕೆಳದಜರ್ೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿತ ಅಲ್ಪ ಸಂಖ್ಯಾತ, ಅಂಗವಿಕಲ ನೌಕರರು ಖಾಯಂ ಮಾಡಿಲ್ಲ. ಅಲ್ಲದೇ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಕೆಳದಜರ್ೆ ಸೇವಾ ನೌಕರರಾದ ಅಂಗನವಾಡಿ ಕಾರ್ಯಕರ್ತರನ್ನು ಮೆಲ್ವಿಚಾರಕರನ್ನಾಗಿ ಬಡ್ತಿ ನೇಮಕಾತಿ ಮಾಡುವಲ್ಲಿ ಹಿಂದಿನಿಂದಲೂ ಅನ್ಯಾಯ. ತಾರತಮ್ಯವೆಸಗಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ಕೊಳಗಲ್ಲು ಅಜರ್ುನ್ ಹೆಗಡೆ ಹೇಳಿದರು.

 ಅಂಗನವಾಡಿ ಮೇಲ್ವಿಚಾರಕರ ನೇಮಕಾತಿಯಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ಸಿ.ಬಿ.ಐ ತನಿಖೆ ನಡೆಯಬೇಕು ಎಂದು ಕನರ್ಾಟಕ ದಲಿತ ಸಂಘರ್ಷ ಸಮಿತಿ (ಎನ್.ಮೂತರ್ಿ) ಸ್ಥಾಪಿತ ಜಿಲ್ಲಾಧಿಕಾರಿ ಘಟಕದ ಪದಾಧಿಕಾರಿಗಳು ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಬಳಿ ಪ್ರತಿಭಟನಾ ಧರಣಿ ನಡೆಸಿದರು. 

      ಅಲ್ಲದೇ ಮುಂಬಡ್ತಿ ಮಾಡಿರುವುದಿಲ್ಲ. ಕನರ್ಾಟಕ 371ಜೆ ನಿಯಾಮವಳಿ ಮೆಲ್ವಿಚಾರಕರನ್ನಾಗಿ ಕೂಡಲೇ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು. ಜೊತೆಗೆ ಹೈ.ಕ ಪ್ರದೇಶದ 371ಜೆ ಪ್ರಕಾರ ಮಿಸಲಾತಿ ಅನ್ವಯ ಬಡ್ತಿನೀಡಿ ಬ್ಯಾಕ್ಲಾಗ್ ಹುದ್ದೆಗೆ ನೇಮಕ ಮಾಡಬೇಕು. ಜೊತೆಗೆ ಅಂಗನವಾಡಿ ಕಾರ್ಯಕರ್ತರಿಗೆ ಮಾಸಿಕ ವೇನತ 20 ಸಾವಿರ ರೂಗಳಿಗೆ ಹೆಚ್ಚಿಸಬೇಕು. 

ಈ ಬಾರಿ ಅದಿವೇಶನದಲ್ಲಿ ನ್ಯಾಯಮೂತರ್ಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಯತಾವತ್ತಾಗಿ ಅಂಗಿಕರಿಸಿ ಕೇಂದ್ರ ಸಕರ್ಾರಕ್ಕೆ ಶಿಪಾರಸ್ಸು ಮಾಡಬೇಕು. 2015-16 ನೇಮಕಾತಿಯಲ್ಲಿ ಅವ್ಯೆವಹಾರ ನಡೆದಿದ್ದು ಅಂಗನವಾಡಿ ಕಾರ್ಯಕತರ್ೆಯರ ಸೇವಾ ಅವದಿ ಪರಿಗಣಿಸುವುದಿಲ್ಲ. ಅಲ್ಲದೇ ಉತ್ತಮ ಅಂಕ ಪಡೆದವರಿಗೆ ನೇಮಕಲಾತಿ ಮಾಡುವುದಿಲ್ಲ. ಅದಕ್ಕಾಗಿ ಉನ್ನತ ಮಟ್ಟದ ತನಿಖೆಯನ್ನು ನಡೆಸಲು ಸಿ.ಬಿ.ಐ ಗೆ ವಹಿಸಬೇಕೆಂದು ಒತ್ತಾಯಿಸಿದರು. ನಂತರ ತಮ್ಮ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು. ಈ ಪ್ರತಿಭಟನಾ ಧರಣಿಯಲ್ಲಿ ಸಂಚಾಲಕ ದಾನಪ್ಪ ಗುತ್ತೆದಾರ್, ಪ್ರಧಾನ ಕಾರ್ಯದಶರ್ಿ ಶ್ರೀನಿವಾಸ ಬಂಡಾರಿ, ಕಾಮರ್ಿಕ ಘಟಕದ ವಿಭಾಗಿಯ ಅಧ್ಯಕ್ಷ ಕೊಂಡಯ್ಯ, ಮುಖಂಡರುಗಳಾದ ಈಶ್ವರ, ಅಂಬಣ್ಣ, ಹೆಚ್,ಶಂಕರಪ್ಪ, ಮುಕ್ಕಣ್ಣ, ಕುರುವಳ್ಳಿ, ಹುಸೇನಪ್ಪ, ಕೆ.ಪಂಪಾಪತಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.


ಸುದ್ದಿ ಓದಿ