ಜಿಲ್ಲಾ ಕೇಬಲ್ ಟಿ.ವಿ ಆಫರೇಟರ್ಗಳಿಂದ ಪ್ರತಿಭಟನೆ

ಜಿಲ್ಲಾ ಕೇಬಲ್ ಟಿ.ವಿ ಆಫರೇಟರ್ಗಳಿಂದ ಪ್ರತಿಭಟನೆ

ಬಳ್ಳಾರಿ 18:ಜಿಲ್ಲಾ ಕೇಬಲ್ ಟಿ.ವಿ ಆಫರೇಟರ್ಗಳು ಮಂಗಳವಾರ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿ ಟ್ರಾಯ್ ನ ಹೊಸ ನಿಯಮದಿಂದ ಗ್ರಾಹಕರಿಗೆ ನ.29 ರಿಂದ ಹೊಸ ನಿಯಮ ಜಾರಿಗೆ ತಂದಿರುವ ಹೊಸ ದರದ ನೀತಿಯಿಂದ ಪ್ರತೀ ತಿಂಗಳಿಗೆ 150 ರೂ ಯಿಂದ 200ರೂಗೆ ಪಾವತಿಸುತ್ತಿದ್ದ ಕೇಬಲ್ ಶುಲ್ಕವು ಹೊಸ ನಿಯಮದ ಅನುಸಾರವಾಗಿ ಈಗ ವಿಕ್ಷಿಸುತ್ತಿರುವ ಗ್ರಾಹಕರಿಗೆ ಡಿ.29ರ ನಂತರ ನಾಲ್ಕು ಪಟ್ಟು ಹೆಚ್ಚಿಗೆ ಶುಲ್ಕವನ್ನು ಗ್ರಾಹಕರು ಬರಿಸಬೇಕಾಗುತ್ತಿದೆ. ಹೊಸ ನಿಯಮದ ಪ್ರಕಾರ ತಿಂಗಳ ಮಾಸಿಕ ಶುಲ್ಕ 600 ರೂಯಿಂದ 800 ರೂಗಳಿಗೆ ತಲುಪುವ್ಯದರಿಂದ ಗ್ರಾಹಕರಿಗೆ ತುಂಬಾ ಹೊರೆಯಾಗುತ್ತಿದೆ. ಆಗ ಗ್ರಾಹಕರು ದುಬಾರಿ ಶುಲ್ಕ ಕಟ್ಟಲು ಸಾದ್ಯವಿಲ್ಲದೆ ಕೇಬಲ್ ಆಫರೇಟರ್ಗಳ ವೃತ್ತಿ ಸ್ಥಗಿತಗೊಳ್ಳುವ ಸಾದ್ಯತೆ ಇದೆ. ಜಿಲ್ಲೆ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕೇಬಲ್ ಆಫರೇಟರ್ಗಳು 8 ಸಾವಿರಕ್ಕೂ ಹೆಚ್ಚುಜನ ಈ ಉದ್ಯೋವನ್ನು ಅವಲಂಬಿಸಿದ್ದು ಸುಮಾರು 25 ವರ್ಷಗಳಿಂದ ಗ್ರಾಹಕರ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. 

ಕೇಂದ್ರ ಸರಕಾರದ ಈ ಹೊಸ ನಿಯಮ ಗ್ರಾಹಕರು ಮತ್ತು ನಿವರ್ಾಹಕರು ಮುಂದುವರಿಸಿಕೊಂಡು ಹೋಗಲು ಕಷ್ಟಕರವಾಗಿದೆ. ಈ ಹಿಂದೆ ಸರಕಾರವು ವಿವದ ಹಂತದಲ್ಲಿ ಹಂತ 1ರಿಂದ ಹಂತ 4ರವರೆಗೆ ವಿವಿದ ರೀತಿಯ ದರ ನಿಗದಿ ಪಡಿಸಿದ್ದು ಹೊಸ ನಿಯಮದಿಂದ ಹಳ್ಳಿಯಿಂದ ದೆಹಲಿಯವರೆಗೆ ಫೇ ಮತ್ತು ಉಚಿತ ಚನಾಲುಗಳ ದರವನ್ನು ಒಂದೇ ರೀತಿಯಾಗಿ ನಿಗದಿ ಪಡಿಸಿರುತ್ತಾರೆ. ಜಿಲ್ಲೆ ಎಲ್ಲರಿಗೂ ತಿಳಿದಿರುವಂತೆ ಬರಗಾಲ ಪೀಡಿತ ಪ್ರದೇಶವಾಗಿದ್ದು ಜನ ಸಾಮಾನ್ಯರು ಜೀವನ ನಡೆಸುವುದೇ ಕಷ್ಟಕರವಾಗಿದ್ದು ಗ್ರಾಮೀಣ ಪ್ರದೇಶದ ಬೀಕರ ಬರಗಾಲ ಈ ಹೊಸ ನೀತಿ, ನಿಯಮ ಪಾಲನೆಗೆ ಕಷ್ಟಕರವಾಗಿದೆ. ಗ್ರಾಮೀಣ ಪ್ರದೇಶದ ಜನತೆಗೆ ಮನೋರಂಜನೆ ಇಲ್ಲದಂತಾಗುತ್ತದೆ. 

ಆದ ಕಾರಣ ಈ ವಿಷಯಗಳನ್ನು ಸರಕಾರ ಘಮನದಲ್ಲಿಟ್ಟುಕೊಂಡು ಹೊಸ ಟ್ರಾಯ್ ನೀತಿಯನ್ನು ರದ್ದು ಪಡಿಸಿ ಈಗಿರುವ ಯಥಾಸ್ಥಿತಿ ದರವನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕಿನ ಆಗಲೂರು ಮಂಜುನಾಥರೆಡ್ಡಿ, ಉಮಾಶಂಕರಸ್ವಾಮಿ, ಶಾಂತನಗೌಡ, ಮಲ್ಲನಗೌಡ, ಪಿ.ನಾಗೇಶ, ಕೆ.ತಿಪ್ಪೆಸ್ವಾಮಿ, ಬಸವರಾಜ, ಚಂದ್ರಶೇಖರ್, ಕರಿಬಸಪ್ಪ, ಚೌಡಪ್ಪ, ಜೀವನಸಾಬ, ಎಸ್.ಮಲ್ಲಯ್ಯ ಸೇರಿದಂತೆ ನೂರಾರು ಜನ ಕೇಬಲ್ ಟಿ.ವಿ ಆಫರೇಟರ್ಗಳು ಪ್ರತಿಭಟನೆಯಲ್ಲಿ ಭಾಗವಹಸಿದ್ದರು. 


ಸುದ್ದಿ ಓದಿ