ಬಳ್ಳಾರಿ ಕೋಟೆಯಲ್ಲಿ ವೇಶ್ಯವಾಟಿಕೆ ಸಂಸದ ಬಿ.ಎಸ್.ಉಗ್ರಪ್ಪ ಆರೋಪ

ಬಳ್ಳಾರಿ ಕೋಟೆಯಲ್ಲಿ ವೇಶ್ಯವಾಟಿಕೆ ಸಂಸದ ಬಿ.ಎಸ್.ಉಗ್ರಪ್ಪ ಆರೋಪ

ಬಳ್ಳಾರಿ 10:ನಗರದ ಐತಿಹಾಸಿಕ ಕೋಟೆ ಪ್ರದೇಶದಲ್ಲಿ ಜೂಜಾಟ, ವೇಶ್ಯವಾಟಿಕೆ ಮೊದಲಾದ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಬಳ್ಳಾರಿ ಸಂಸದ ಬಿ.ಎಸ್.ಉಗ್ರಪ್ಪ ಆರೋಪಿಸಿ ಇವುಗಳ ನಿಯಂತ್ರಣಕ್ಕೆ ಏನೆಲ್ಲಾ ಕ್ರಮ ತೆಗೆದುಕೊಂಡಿದ್ದೀರಿ ಎಂದು ಎಎಸ್ಐನ ಅಧಿಕಾರಿಗಳಿಗೆ ಬೆವರಿಳಿಸಿದರು. ದೀಶಾ ಸಮಿತಿ ಸಭೆಯಲ್ಲಿ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದ ಅವರು ಕೋಟೆಯಲ್ಲಿ ಏನೆಲ್ಲಾ ಅನೈತಿಕ ಚಟುವಟಕೆಗಳು ನಡೆಯುತ್ತಿವೆ ಎಂಬ ಬಗ್ಗೆ ದೂರುಗಳಿವೆ ಎಂದರು. ಮುಂದಿನ ಪಿಳಿಗೆಗೆ ಸ್ಮಾರಕಗಳನ್ನು ಉಳಿಸಬೇಕು ಮತ್ತು ಇಲ್ಲಿಗೆ ಬರುವ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ವದಗಿಸಬೇಕು ಎಂದು ಸೂಚಿಸಿದರು. ಇಲ್ಲಿನ ಸ್ಮಾರಕಗಳನ್ನು ವಿಕ್ಷಿಸಲು ಹಣ ಪಡೆಯುವ ನೀವು ಅದನ್ನು ಕೇಂದ್ರ ಸರಕಾರಕ್ಕೆ ಕಳುಹಿಸುವುದು ಸರಿಯಲ್ಲ. ಅದನ್ನು ಇಲ್ಲಿನ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಲು ಬಳಕೆ ಮಾಡಬೇಕು. ಈ ಬಗ್ಗೆ ತಾವು ಸದನದಲ್ಲಿ ಚಚರ್ೆ ಮಾಡುವುದಾಗಿ ಹೇಳಿದರು. ಸಭೆಗೆ ಎಎಸ್ಐನ ಉಪನಿಧರ್ೇಶಕ ಕಾಳಿಮುತ್ತು ಅವರ ಅನುಮತಿ ಪಡೆಯದೇ ಸಭೆಗೆ ಗೈರು ಹಾಜರಾಗಿರುವುದರಿಂದ ಅವರಿಗೂ ಸಹ ಶೋಕಾಸ್ ನೋಟಿಸ್ ಜಾರಿ ಮಾಡಲು ಸೂಚಿಸಿದರು. ಜೊತೆಗೆ ಈ ದೀಶಾ ಸಭೆಗೆ ರೈಲ್ವೇ ಅಧಿಕಾರಿಗಳು ಸಹ ಬಂದಿರಲಿಲ್ಲ. ಅವರಿಗೂ ಸಹ ಮುಂದಿನ ಸಭೆಗೆ ಬರಲು ತಿಳಿಸಿ ಎಂದು ಆದೇಶ ಮಾಡಿದರು.


ಸುದ್ದಿ ಓದಿ