ಸಾಲ ಸೌಲಭ್ಯ ಮಾಹಿತಿಯ ಕುರಿತು ಕಾರ್ಯಕ್ರಮ
ಬಳ್ಳಾರಿ15: ಕೇಂದ್ರ ಹಣಕಾಸು ಸಚಿವ ಕಾಯರ್ಾಲಯದ ಆದೇಶದ ಮೇರೆಗೆ ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮಿದಾರರಿಗೆ (ಎಂ.ಎಸ್.ಎಂ.ಇ) ಮತ್ತು ಬ್ಯಾಂಕಿನಿಂದ ವಿವಿಧ ಯೋಜನೆಯಡಿಯಲ್ಲಿ ದೊರೆಯಲಿರುವ ಸಾಲ ಸೌಲಭ್ಯಗಳ ಕುರಿತ ಮಾಹಿತಿಯನ್ನು ನೀಡಲು ಪ್ರತಿ ಮಂಗಳವಾರ ಹಾಗೂ ಶುಕ್ರವಾರರಂದು ಜಿಲ್ಲೆಯ ವಿವಿಧ ಕ್ಲಸ್ಟರ್ಗಳಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ ಅವರು ತಿಳಿಸಿದ್ದಾರೆ.
ನ.16ರಂದು ಬೆಳಗ್ಗೆ 10.30ಕ್ಕೆ ನಲ್ಲ ಚೆರವು ಪ್ರದೇಶದಲ್ಲಿರುವ ಜಿಲ್ಲಾ ಕ್ರೀಡಾಂಗಣದ ಈಜುಕೊಳ ಸಭಾಂಗಣದಲ್ಲಿ ಉದ್ಘಾಟಕ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಬೆ.11 ರಿಂದ ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮಿ, ಸ್ಟ್ಯಾಂಡ್ ಅಪ್ ಇಂಡಿಯಾ, ಸ್ಟ್ರಾಟರ್್ ಅಪ್ ಇಂಡಿಯಾ, ಪ್ರಧಾನ ಮಂತ್ರಿ ಜನ್ ಧನ್ ಯೋಜನೆ, ಜೀವನ್ ಜ್ಯೋತಿ ಭೀಮಾ ಯೋಜನೆ, ಸುರಕ್ಷ ಭೀಮಾ ಯೋಜನೆ, ಠಿಛಟಠಚಿಟಿಟಿ59ಟಟಿಣಣಜ ಠಿಠಡಿಣಚಿಟ ಹಾಗೂ ಇತರೆ ಯೋಜನೆಯ ಕುರಿತು ಮಾಹಿತಿ ನೀಡಲಿದ್ದಾರೆ. ನಂತರ ಉದ್ಯಮಿಗಳಿಂದ, ಸಾರ್ವಜನಿಕರಿಂದ ಅಜರ್ಿ ಸ್ವೀಕರಿಸಲಿದ್ದಾರೆ.
ಅದೇ ರೀತಿ ನ.20, ನ.30 ರಂದು ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಇದೇ ರೀತಿಯ ಶಿಬಿರ ನಡೆಯಲಿದೆ. ನ.23 ರಂದು ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ಹೊಸಪೇಟೆಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ. ನ.27 ರಂದು ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ಸಂಡೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.
ಈ ಶಿಬಿರಕ್ಕೆ ಎಲ್ಲಾ ಬ್ಯಾಂಕಿನ ವ್ಯವಸ್ಥಾಪಕರು, ಸಂಯೋಜಕರು ಹಾಗೂ ಸಂಬಂಧಪಟ್ಟ ಸಕರ್ಾರಿ ಅಧಿಕಾರಿಗಳು ಹಾಜರಾಬೇಕು ಎಂದು ತಿಳಿಸಿದ್ದಾರೆ.