ಪ್ರತಿಷ್ಠಿತ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ
ಲೋಕದರ್ಶನ ವರದಿ
ಬಳ್ಳಾರಿ 20: ರಾಘವ ಕಲಾ ಮಂದಿರದಲ್ಲಿ ಶಿಕ್ಷಕರ ದಿನಾಚರಣೆ-2018 ಅಂಗವಾಗಿ ವಿವಿಧ ರಂಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಗಣ್ಯರಿಗೆ ಪ್ರತಿಷ್ಠಿತ ಪ್ರಶಸ್ತಿ ಪ್ರತಿಭಾ ಪುರಸ್ಕಾರ ಪ್ರಾದಾನೋತ್ಸವ ಕಾರ್ಯಕ್ರಮ ಜರುಗಿತು.
ಶಿಸ್ತು ಸಮಯ ಪ್ರಜ್ಞೆಗಳು ಸಾಧಕನಿಗೆ ಇರಬೇಕಾದ ಎರಡು ಪ್ರಮುಖ ಆಚರಣೆಗಳು. ಇವುಗಳಿಂದ ಸಾಧನೆಯ ಮೇರು ಶಿಖರಕ್ಕೆ ಸಾಧಕ ಏರಬಲ್ಲನು. ಸಾಧನೆ ನಿರಂತರ ಮಹಾ ಸುಗಮ ತಪಸ್ಸಿದ್ದಂತೆ ಎಂದು ಖ್ಯಾತ ವೈದ್ಯರಾದ ಡಾ|| ಟೇಕೂರು ರಾಮನಾಥರು ನುಡಿದರು. ಬಳ್ಳಾರಿ ಕಲ್ಚರಲ್ ಆಸೋಸಿಯೇಷನ್ ರಾಘವ ಕಲಾ ಮಂದಿರದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಅಂಗವಾಗಿ ವಿವಿಧ ರಂಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಗಣ್ಯರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ, ರಾಷ್ಟ್ರದ ಶ್ರೇಷ್ಠ ಶಿಕ್ಷಕರಾಗಿದ್ದ ಡಾ|| ಸವರ್ೆಪಲ್ಲಿ ರಾಧಕೃಷ್ಣ ಮತ್ತು ಎ.ಪಿ.ಜೆ. ಕಲಾಂರಂತೆ ಬಳ್ಳಾರಿ ಪರಿಸರದಲ್ಲಿ ಕೀತರ್ಿಯ ಶಿಖರವಾಗಿ ಮೆರೆದ ಕೀತರ್ಿ ಶ್ರೇಷ್ಠರಾದ ಬಹದ್ದೂರು ಶೇಷಗಿರಿರಾವ್ ಮತ್ತು ಡಾ|| ಶೇಷಾದ್ರಿಯವರು ಶ್ರೇಷ್ಠ ಶಿಕ್ಷಕರಾಗಿದ್ದರೆಂದು ಸ್ಮರಿಸಿದರು.
ಡಾ|| ಬಿ.ಕೆ. ಸುಂದರ್ ಮಾತನಾಡುತ್ತ ಡಾ|| ಬಿ.ಶೇಷಾದ್ರಿಯವರ ಕಲಿಕಾ ವಿಧಾನ, ವಿದ್ಯಾಥರ್ಿಗಳನ್ನು ಪ್ರೇರೇಪಿಸುತ್ತಿದ್ದ ರೀತಿಯಯನ್ನು ಕೊಂಡಾಡಿದರು. ರಾವ್ಬಹದ್ದೂರ್ ಶೇಷಗಿರಿರಾವ್ ರವರ ಮಗ ಎಂ.ಎಸ್.ಬಹದ್ದೂರ್ ಡಾ|| ಬಿ.ಶೇಷಾದ್ರಿಯವರ ಅಳಿಯಂದಿರಾದ ಡಿ.ಸೋಮನಾಥರು ಸಾಂದಭರ್ಿಕ ನುಡಿಗಳನ್ನು ಆಡಿದರು.
ಈ ಸಂದರ್ಭದಲ್ಲಿ 31 ಜನ ನಿವೃತ್ತ ಶಿಕ್ಷಕರು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಗೌರವಾನ್ವಿತರ ಪರವಾಗಿ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಡಿಪಾಟರ್್ಮೆಂಟ್ ಆಪ್ ಡೆವಲಪಮೆಂಟ್ ಸ್ಟಡೀಸ್ನ ಪ್ರೊಫೇಸರ್ ಡಾ|| ಹೆಚ್.ಡಿ. ಪ್ರಶಾಂತ್ ಮಾತನಾಡುತ್ತ, ಪ್ರಶಸ್ತಿ ಸನ್ಮಾನಗಳಿಗಾಗಿ ಜಾತಿ, ಜನಾಂಗ, ಪ್ರಾಂತ್ಯಗಳ ಲಾಭಿ ನಡೆಯುತ್ತಿರುವ ಈ ದಿನಗಳಲ್ಲಿ ಅಜರ್ಿ, ಮಜರ್ಿ, ವಸೂಲಿಗಳಿಲ್ಲದೇ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವ ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಆಸೋಸಿಯೇಷನ್ನ ಕಾರ್ಯ ಅತ್ಯಂತ ಶ್ಲಾಘನೀಯವೆಂದು ಕೊಂಡಾಡಿದರು.
ವೇದಿಕೆಯಲ್ಲಿ ಗಣ್ಯರ ಜೊತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಸಂಕ್ಷಿಪ್ತ ವರದಿ ಮಂಡಿಸಿ, ಸ್ವಾಗತವನ್ನು ಅಧ್ಯಕ್ಷರಾದ ಶೀಲಾಬ್ರಹ್ಮಯ್ಯ ಕೋರಿದರು. ವಿ.ರವಿಕುಮಾರ್ ವಂದನಾರ್ಪಣೆ ಮಾಡಿದರು. ನೃತ್ಯ ಶಿಕ್ಷಕಿ ಜಿ.ನಳಿನಿ ನಿರ್ವಹಣೆ ಮಾಡಿದರು.
ಸದರಿ ವಿಷಯವನ್ನು ತಮ್ಮ ಅಮೂಲ್ಯವಾದ ದಿನಪತ್ರಿಕೆಯಲ್ಲಿ ಪ್ರಕಟಿಸಲು ಈ ಮೂಲಕ ಕೋರಲಾಗಿದೆ.