ಸ್ನೇಹ ಸಮ್ಮೇಲನದ ಪೂರ್ವಭಾವಿ ಸಭೆ
ಲೋಕದರ್ಶನ ವರದಿ,
ಜಮಖಂಡಿ 4: ಕಲಿತ ಶಾಲೆಯ ಋಣವ ತೀರಿಸಲು ಸೇವಾ ಕಾರ್ಯಕ್ರಮಗಳ ಯೋಜನೆಯನ್ನು ರೂಪಿಸೋಣ. ಹೆಚ್ಚಿನ ಸಂಖ್ಯೆಯಲ್ಲಿ ಸಹಪಾಠಿಗಳೆಲ್ಲ ಸೇರಿ ಸ್ನೇಹ ಸಮ್ಮೇಲನ ಕಾರ್ಯಕ್ರಮ ಯಶಸ್ವಿಗೊಳಿಸೋಣ ಹಳೆಯ ವಿದ್ಯಾರ್ಥಿ ಬಳಗದ ಅಧ್ಯಕ್ಷ ವಿಜಯ ನಾವಲಗಿ ಹೇಳಿದರು.
ನಗರದ ಗಣಪತಿ ಮಂಗಲ ಕಾರ್ಯಾಲಯದಲ್ಲಿ ಜರುಗಿದ ಸರಕಾರಿ ಪಿ.ಬಿ.ಹೈಸ್ಕೂಲಿನ 1989-90 ನೇ ಸಾಲಿನ ಎಸ್,ಎಸ,ಎಲ್.ಸಿ ವಿದ್ಯಾರ್ಥಿ ಬಳಗವು ಹಮ್ಮಿಕೊಂಡ ಸ್ನೇಹ ಸಮ್ಮೇಲನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಾರ್ಯಕ್ರಮದ ಕುರಿತು ರೂಪರೇಷೆಗಳ ಕುರಿತು ಉಪಾಧ್ಯಕ್ಷ ನರಸಿಂಹ ನಾಯಕ ಮಾತನಾಡಿದರು. ಸರ್ವರ ಅಭಿಪ್ರಾಯಗಳನ್ನು ಕೇಳಿ ಸರ್ವಾನುಮತದಿಂದ ಅಂತಿಮಗೊಳಿಸಲಾಯಿತು.
ಜಗದ್ಗುರು ಪಂಚಾಚಾರ್ಯ ಕೋ ಅಪ್ ಲಿ. ಸೊಸೈಟಿಯ ನಿರ್ದೇಶಕ ಮಂಡಳಿಗೆ ಜರುಗಿದ ಚುನಾವಣೆಯಲ್ಲಿ ನೂತನ ನಿರ್ದೇಶಕರಾಗಿ ಆಯ್ಕೆಯಾದ ಸದಾಶಿವ ಮೆಟಗುಡಮಠ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ರಾಘವೇಂದ್ರ ಜೋಶಿ, ರಾಜು ಅಸ್ಕಿ. ರಿಝವಾನ ತುರಕನಕೇರಿ, ಉದಯ ಮುನ್ನೋಳ್ಳಿ, ರಾಜಶೇಖರ ಹೊಸಟ್ಟಿ, ಮಲ್ಲಿಕಾರ್ಜು ನ ಚೌಧರಿ, ವಿರೇಂದ್ರ ಅಂಬಲಿ ವಿಲಾಸ ಕೊಡಗಲಿ, ಭೀಮಪ್ಪಾ ಹಿಪ್ಪರಗಿ ಸುನೀಲ ಶಿಲ್ಪಿ,ಶಂಕರ ಸುತಾರ ಉಪಸ್ಥಿತರಿದ್ದರು. ಸುನೀಲ ಮುರುಗೋಡ ಸ್ವಾಗತಿಸಿದರು. ಗಿರೀಶ ಪಡಸಾಲಿ ವಂದಿಸಿದರು.