ಜಮಖಂಡಿ

ವಿದ್ಯಾರ್ಥಿನಿಯರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ವಿದ್ಯಾರ್ಥಿನಿಯರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಲೋಕದರ್ಶನ ವರದಿ,

ಜಮಖಂಡಿ : ಶ್ರದ್ಧಾ, ಭಕ್ತಿಯಿಂದ ವಿದ್ಯಾಭ್ಯಾಸ ಮಾಡಿದರೆ ಮಾತ್ರ ವಿದ್ಯಾರ್ಥಿಗಳು ಉನ್ನತ ಹುದ್ದೆಯನ್ನು ಅಲಂಕರಿಸಲು ಸಾಧ್ಯ ಎಂದು ರಾಜೇಂದ್ರ ಗುಡಗುಂಟಿ ಹೇಳಿದರು.

ನಗರದ ಮಾಹಾವೀರ ಕಾಲೋನಿಯಲ್ಲಿ ನಡೆದ ರನ್ನ ಕೋಚಿಂಗ್ ಅಕಾಡೆಮಿ, ರನ್ನ ವಿದ್ಯಾರ್ಥಿನಿಯರ ವಸತಿ ನಿಲಯ ಸಹಯೋಗದಲ್ಲಿ 2022-23ನೇ ಸಾಲಿನ ದ್ವಿತೀಯ ಪಿ,ಯು,ಸಿ,ಯಲ್ಲಿ ಶೇ.90ರಷ್ಟು ಅಂಕ ಪಡೆದ ವಿದ್ಯಾರ್ಥಿನಿಯರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಾಲಾ, ಕಾಲೇಜಿನಲ್ಲಿ ಮಕ್ಕಳು ವಿದ್ಯೆಯ ಕಡೆಗೆ ಹೆಚ್ಚು ಗಮನಹರಿಸಿ ಅಭ್ಯಾಸವನ್ನು ಮಾಡಿದರೆ ಮಾತ್ರ ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ಹೆತ್ತ ತಂದೆ, ತಾಯಿ, ಊರು, ಜಿಲ್ಲೆಗೆ ಅಷ್ಟೇ ಅಲ್ಲದೆ ಕಲಿತ ಶಾಲೆಯ ಕೀರ್ತಿಯನ್ನು ತರುವಂತ ಮಕ್ಕಳು ತಾವುಗಳು ಆಗಬೇಕೆಂದರು.

ಪಾರ್ವತಿ ಗುಡಗುಂಟಿ ಮಾತನಾಡಿ,ಲಿಂದಿನ ದಿನಮಾನದಲ್ಲಿ ಮಹಿಳೆಯರು ಪುರುಷರ ಸಮವಾಗಿದ್ದಾರೆ. ಒಳ್ಳೆಯ ಸಂಸ್ಕಾರ, ಸಂಸ್ಕ್ರತಿಯನ್ನು ಜೀವದಲ್ಲಿ ಅಳವಡಿಸಿಕೊಳ್ಳುವ ಮಹಿಳೆಯರು ಆದರೆ ಮಾತ್ರ ದೇಶ ಸುಧಾರಣೆ ಆಗುತ್ತದೆ. ಮಹಿಳೆಯರು ಶಿಕ್ಷಣವನ್ನು ಕಲಿಯಬೇಕೆಂಬ ಹಂಬಲ ಇದ್ದರು ಸಹ ಅವಕಾಶಗಳು ಕೆಲವರಿಗೆ ದೊರೆಯದ ಕಾರಣ ಶಿಕ್ಷಣದಿಂದ ವಂಚಿತರಾಗುತ್ತಾರೆ. ಧೈರ್ಯದಿಂದ ಮುಂದೆ ಸಾಗಿ, ಶಿಕ್ಷಣದ ಬಗ್ಗೆ ಕೊಚಿಂಗ್ ತರಬೇತಿಯನ್ನು ಕೇಂದ್ರಗಳಲ್ಲಿ ಶಿಕ್ಷಣ ಪಡೆದುಕೊಂಡರೆ ಸಾಧನೆಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಪ್ರೋ, ಎಸ್,ಎಸ್, ಕಲಶೆಟ್ಟಿ ಕೊಚಿಂಗ್ ತರಬೇತಿ ಕೇಂದ್ರಗಳ ಕುರಿತು ವಿದ್ಯಾರ್ಥಿನಿಯರಿಗೆ ಸಲಹೆ, ಸೂಚನೆಯೊಂದಿಗೆ ನೀಡುವ ಜೊತೆಗೆ ಉಪನ್ಯಾಸವನ್ನು ನೀಡಿದರು. ರನ್ನ ಕೊಚಿಂಗ್ ಅಕಾಡೆಮಿ, ರನ್ನ ವಿದ್ಯಾರ್ಥಿನಿಯರ ವಸತಿ ನಿಲಯದ ಅಧ್ಯಕ್ಷ ಮಹಾವೀರ ಶಹಪೂರ ಪ್ರಾಸ್ತಾವಿಕ ಮಾತನಾಡಿದರು,

ಅಭಯ ದೇವದೇಸಾಯಿ, ಶಿಕ್ಷಕ ಹೊಸಮಠ ವೇದಿಕೆಯಲ್ಲಿ ಉಪಸ್ಥಿತರಿದರು. ಜಯಪಾಲ ನಡುವಿನಮನಿ ಸ್ವಾಗತಿಸಿದರು, ಪ್ರೋ,ವಾಯ್, ವಾಯ್, ಕೊಕ್ಕನ್ನವರ ನಿರೂಪಿಸಿ,ವಂದಿಸಿದರು.

ಪಿ.ಯು.ಸಿ. ಹೆಚ್ಚು ಅಂಕಗಳನ್ನು ಪಡೆದ ಜಮಖಂಡಿ ಮತ್ತು ರಬಕವಿ,ಬನಹಟ್ಟಿ ತಾಲೂಕಿನ 200ಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರವನ್ನು ನೀಡಿ,ಗೌರವಿಸಿದರು.



ಸುದ್ದಿ ಓದಿ