ಜನಪ್ರೀಯವಾಗುತ್ತಿರುವ ಜೆಎಸ್ಡಬ್ಲ್ಯೂ ಸಿಮೆಂಟ್: ನಾವರ್ೆಕರ್

ಜನಪ್ರೀಯವಾಗುತ್ತಿರುವ ಜೆಎಸ್ಡಬ್ಲ್ಯೂ ಸಿಮೆಂಟ್: ನಾವರ್ೆಕರ್

ಬಳ್ಳಾರಿ 10: ಜೆಎಸ್ಡಬ್ಲೂ ಸಿಮೆಂಟ್ ಗಣನೀಯ ಪ್ರಮಾಣದಲ್ಲಿ ಪ್ರಗತಿ ಹೊಂದುತ್ತಿದ್ದು. 2018-19ನೇ ತ್ರೈಮಾಸಿಕದಲ್ಲಿ ದೇಶದಲ್ಲಿ ಸಿಮೆಂಟ್ ಉದ್ದೆಮದ ಪ್ರಗತಿ ಶೇ.10ರಷ್ಟು ಇದ್ದರೆ ಜೆಎಸ್ಡಬ್ಲೂ ಸಿಮೆಂಟ್ನ ಪ್ರಮಾಣ ಶೇ.22ರಷ್ಟಿದೆ. ಒಟ್ಟಾರೆ ಪ್ರಗತಿ ಶೇ.63ರಷ್ಟು ಇದೆ ಎಂದು ಜೆಎಸ್ಡಬ್ಲೂ ಸಿಮೆಂಟ್ನ ಮುಖ್ಯ ಕಾರ್ಯನಿವರ್ಾಹರ ಅಧಿಕಾರಿ ನಿಲೇಶ್ ನಾವರ್ೆಕರ್ ತಿಳಿಸಿದರು.

ಅವರು ಸೋಮುವಾರ ಜಿಲ್ಲೆಯ ತೊರಣಗಲ್ಲಿನ ಜಿಂದಾಲ್ ಸಿಮೆಂಟ್ ಕಾಖರ್ಾನೆಯ ಉತ್ಪಧನಾ ವಿಧಾನವನ್ನು ಮಾದ್ಯಮಗಳಿಗೆ ಪರಿಚಯಿಸಿ ವಿವರಣೆ ನೀಡಿದರು. ಭಾರತದ ಪ್ರಮೂಖ ಗ್ರೀನ್ ಸಿಮೆಂಟ್ ತಯಾರಿಕಾ ಕಂಪನಿಯಲ್ಲಿ ಒಂದಾಗಿರುವ ಮತ್ತು 13 ಬಿಲಿಯನ್ ಅಮೇರಿಕನ್ ಡಾಲರ್ ನ ಜೆಎಸ್ ಡಬ್ಲೂ ಗ್ರುಪ್ ನ ಅಂಗಸಂಸ್ಥೆಯಾಗಿರುವ ಜೆಎಸ್ಡಬ್ಲೂ ಸಿಮೆಂಟ್ ಘಟಕ ದಕ್ಷಿಣ ಮತ್ತು ಪಶ್ಚಿಮ ಭಾರತದಲ್ಲಿ ತನ್ನ ಅತ್ಯಮುಲ್ಯವಾದ ಅಸ್ಥಿತ್ವವನ್ನು ಕಾರ್ಯಗೊಳಿಸುವಲ್ಲಿ ಯಶಸ್ವಿಯಾಗಿದೆ. 

ಇದೀಗ ಪಶ್ಚಿಮ ಭಾಗದಲ್ಲಿ ಸ್ಲಾಗ್ ಆಧಾರಿತ ಸಿಮೆಂಟ್ ಉತ್ಪನ್ನಗಳ ತಯಾರಿಕೆಯಲ್ಲಿ ಪ್ರಗತಿ ಸಾಧಿಸುವಲ್ಲಿ ದಾಪುಗಾಲು ಇಟ್ಟಿದೆ. ಕಂಪನಿಯ ಉದ್ದೆಮದ ಪ್ರಗತಿಗಿಂತ ಹೆಚ್ಚು ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿದೆ ಎಂದರು. ಪಶ್ಚಿಮ ಭಾರತದಲ್ಲಿ ಸಿಮೆಂಟ್ ಉದ್ದೆಮದ ಪ್ರಗತಿ ಶೇ.7 ರಷ್ಟಿದ್ದರೆ ಜೆಎಸ್ ಡಬ್ಲೂ ಪ್ರಗತಿ ಶೇ.55 ರಷ್ಟಿದೆ. ಪೂರ್ವ ಭಾರತದಲ್ಲಿ ಶೇ.33ರಷ್ಟಿದ್ದರೆ ಜೆಎಸ್ ಡಬ್ಲೂ ಪ್ರಗತಿ ಶೇ.62ರಷ್ಟು, ದಕ್ಷಣಿದಲ್ಲಿ ಶೇ.22 ರಷ್ಟಿದ್ದರೆ ಜೆಎಸ್ ಡಬ್ಲೂ ಪ್ರಗತಿ ಶೇ.20ರಷ್ಟಿದೆ ಎಂದರು. ಜೆಎಸ್ಡಬ್ಲೂ ಸಿಮೆಂಟ್ ಪೊರ್ಟಲ್ಯಾಂಡ್ ಸ್ಲ್ಯಾಗ್ ಸಿಮೆಂಟ್ (ಪಿಎಸ್ಸಿ) ಮತ್ತು ಕಾಕ್ರಿಲ್ ಹೆಚ್ಡಿ ಎಂಬ ಎರಡು ಶ್ರೇಣಿಯ ಗ್ರೀನ್ ಸಿಮೆಂಟ್ ಇಗ ಮಾರುಕಟ್ಟೆಗೆ ತಂದಿದೆ. 

ಭಾರತ ಸಕರ್ಾರ ಹೊಸ ನಗರಾಭಿವೃದ್ದಿ ಯೋಜನಾ ಅಡಿ 500 ನರಗಳನ್ನು ಅಭಿವೃದ್ದಿ ಪಡಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಇದರಡಿ 100 ಸ್ಮಾಟರ್್ ಸಿಟಿ ನಿಮರ್ಾಣಕ್ಕೆ ಕ್ರಮಕೈಗೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಸಿಮೆಂಟ್ ಮತ್ತು ನಿಮರ್ಾಣ ಕ್ಷೇತ್ರಕ್ಕೆ ಹೆಚ್ಚು ಬೇಡಿಕೆ ಬರುತ್ತಿದೆ. ಈ ಅವಕಾಶವನ್ನು ಬಳಸಿಕೊಂಡು ಸ್ಮಾಟರ್್ ಸಿಟಿ ನಿಮರ್ಾಣ ಮಾಡಲಿಕ್ಕೆ ಜೆಎಸ್ ಡಬ್ಲೂ ಸಿಮೆಂಟ್ ನ ಕಾಖರ್ಾನೆ ಅದನ್ನು ತೊಡಗಿಸಿಕೊಳ್ಳುವತ್ತ ಹೆಜ್ಜೆ ಹಾಕಿದೆ. ಈ ನಿಟ್ಟಿನಲ್ಲಿ 2022ರ ವೇಳೆಗೆ ಸಿಮೆಂಟ್ ಉತ್ಪಾಧನಾ ಸಾಮಥ್ರ್ಯವನ್ನು ವಾಷರ್ಿಕ 20 ದಶಲಕ್ಷ ಟನ್ ಹೆಚ್ಚಳ ಮಾಡುವತ್ತ ಯೋಜನೆ ರೂಪಿಸಿದೆ ಎಂದರು. ಇದಕ್ಕೆ ಪೂರಕವಾಗಿ ಕಂಪನಿಯೂ ಐಪಿಓ ಅನ್ನು ಆರಂಭಿಸಲಿದೆ. ಈ ಸಾಮಾಥ್ರ್ಯ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕಂಪನಿಯೂ ಭಾರತದಲ್ಲಿ ಸಿಮೆಂಟ್ ಕ್ಷೇತ್ರವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವತ್ತ ಘಮನ ಹರಿಸಿದೆ. ಪರಿಸರ ಸ್ನೇಹಿ ಸಿಮೆಂಟ್: ಜಾಗತಿಕ ಮಟ್ಟ ಜೆಎಸ್ಡಬ್ಲ್ಯೂ ಸಿಮೆಂಟ್ ಪರಿಸರಸ್ನೇಹಿ ಅಥವಾಗ್ರೀನ್ ಸಿಮೆಂಟ್ ಉತ್ಪಾದನೆ ಉದ್ದೇಶದೊಂದಿಗೆ 2009 ರಲ್ಲಿ ಸಿಮೆಂಟ್ ವ್ಯವಹಾರವನ್ನು ಆರಂಭಿಸಿತು. ಗ್ರೀನ್ ಸಿಮೆಂಟ್ ಅಥವಾ ಪಿಎಸ್ಸಿ ಉತ್ಪಾದನೆ ಮಾಡುವ ಮೂಲಕ ಭಾರತವನ್ನು ಸಿಮೆಂಟ್ ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿ ಮಾಡುವಗುರಿಗೆ ಪೂರಕವಾಗಿ ಯೋಜನೆಗಳನ್ನು ರೂಪಿಸುವತ್ತದಾಪುಗಾಲು ಇಟ್ಟಿದೆ. ಕನರ್ಾಟಕದ ವಿಜಯನಗರ, ಆಂಧ್ರಪ್ರದೇಶದ ನಂದ್ಯಾಲ, ಪಶ್ಚಿಮ ಬಂಗಾಳದ ಸಾಲ್ಬೋನಿ, ಮಹಾರಾಷ್ಟ್ರದ ಡೊಲ್ವಿ ಸಿಮೆಂಟ್ ಉತ್ಪಾದನಾ ಘಟಕಗಳಲ್ಲಿ ಸ್ಟೀಲ್ ಉತ್ಪಾದನಾ ಘಟಕಗಳ ಸ್ಲ್ಯಾಗ್ಅನ್ನು ಬಳಸಿಕೊಂಡು ಗ್ರೀನ್ ಸಿಮೆಂಟ್ಅನ್ನು ಉತ್ಪಾದಿಸುತ್ತಿದೆ. ಇಂಧನ ಕ್ಷಮತೆಯನ್ನು ನಿರಂತರವಾಗಿ ಸುಧಾರಣೆ ಮಾಡಿಕೊಳ್ಳುತ್ತಾ, ಮಿಕ್ಸ್ಡಿಸೈನ್ ಉತ್ಪನ್ನಗಳನ್ನು ತಯಾರಿಸುತ್ತಿದೆ. ಈ ಎಲ್ಲಾ ಉಪಕ್ರಮಗಳ ಮೂಲಕ ಜೆಎಸ್ಡಬ್ಲ್ಯೂ ಸಿಮೆಂಟ್ ಪರಿಸರದ ಮೇಲಾಗಬಹುದಾದ ಹಾನಿಗಳ ಪ್ರಮಾಣವನ್ನು ಕಡಿಮೆ ಮಾಡುತ್ತಿದೆ. ಒಂದು ಟನ್ ಪಿಎಸ್ಸಿ ಉತ್ಪಾದನೆ ಮಾಡುವ ಸಂದರ್ಭದಲ್ಲಿ ಜೆಎಸ್ಡಬ್ಲ್ಯೂ ಸಿಮೆಂಟ್ ಕೇವಲ 0.49 ಟನ್ನಷ್ಟು ಸಿಒ2 ಅನ್ನು ಹೊರ ಹಾಕುತ್ತಿದೆ. ಇದುದೇಶದಇತರೆ ಸಿಮೆಂಟ್ ಉದ್ಯಮಗಳಿಗಿಂತ ಅತ್ಯಂತಕಡಿಮೆ ಪ್ರಮಾಣವಾಗಿದೆ. ಜೆಎಸ್ಡಬ್ಲ್ಯೂ ಸಿಮೆಂಟ್ನ ಕಾಯರ್ಾಚರಣೆಗಳು ಪರಿಸರ ಮೇಲಾಗುವ ದುಷ್ಪರಿಣಾಮಗಳನ್ನು ಗಣನೀಯ ಪ್ರಮಾಣದಲ್ಲಿಕಡಿಮೆ ಮಾಡುತ್ತಿದೆ ಎಂದು ತಿಳಿಸಿದರು. ಇನ್ನು ಮಾರುಕಟ್ಟೆ ವಿಸéರಣೆಯಾಗಿಲ್ಲ. ಸದ್ದೆದಲ್ಲೆ ಮಾರುಕಟ್ಟೆ ವಿಸ್ತಿರಣ ಕಾರ್ಯ ನಡೆಯುತ್ತಿದೆ. ಉತ್ತಮ ಪ್ರತಿಕ್ರೀಯೆ ನಡೆಯುತ್ತಿದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಕಾಖರ್ಾನೆಗೆ ಸಂಬಂಧಿಸಿದ ಹಲವಾರು ಅಧಿಕಾರಿಗಳು ಭಾಗವಹಿಸಿದ್ದರು. ಮನೋಜ, ಡಾ|| ಜೆ.ಕೋಲಿ, ಗುರುವಿಂದರ್ ಸಿಂಗ್, ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ