ಜನಸೇವೆಯೇ ಜನಾರ್ಧನನ ಸೇವೆ
-ಡಾ. ಹೇಮಾವತಿ ಸೊನ್ನೊಳ್ಳಿ , ಬೆಳಗಾವಿ
ದಾನೇಶ ಪಿ.ಯು.ಸಿ ಪಾಸಾಗಿದ್ದ ಅವನಿಗೆ ಮುಂದಿನ ಶಿಕ್ಷಣದ ಸಲುವಾಗಿ ಪಿ.ಯು ಕಚೇರಿಯಿಂದ ಟಿ ಸಿ ಬೇಕಾಗಿತ್ತು. ಎಷ್ಟು ಸಾರಿ ತಾನು ಕಲಿತ ಪಿ.ಯೂ ಕಾಲೇಜಿಗೆ ಓಡಾಡಿದರೂ ಟಿ.ಸಿ ಯನ್ನು ಕೊಡದೆ ಆಗ ಬಾ ಈಗ ಬಾ ಎಂದೇ ಸತಾಯಿಸುತಿದ್ದರು ಏನಾದರೊಂದು ನೆಪ ಒಡ್ಡಿ ಅವನನ್ನು ಮರಳಿ ಮರಳಿ ಕಳುಹಿಸುತಿದ್ದರು. ದಾನೇಶ ತನ್ನ ತಂದೆ ತಾಯಿಯರನ್ನು ಟಿ ಸಿ ಯನ್ನು ತರಲು ಕಳುಹಿಸಿದನು. ಅವರಿಗೂ ಜಗ್ಗದೆ ಬಗ್ಗದೆ ಕೊಡಲೇ ಇಲ್ಲಾ ದಾನೇಶ ಗೊತ್ತಿದ್ದ ಮುಖಂಡರೊಬ್ಬರನ್ನು ಕರೆದುಕೊಂಡು ಹೋದನು ಅವಕ್ಕೂ ಅವರು ಬಗ್ಗಲಿಲ್ಲ ಹೇಗೆ ದಾನೇಶ ಕಚೇರಿಯಿಂದ ಮನೆಗೆ ಮನೆಯಿಂದ ಕಚೇರಿ ಅಲೆದಾಡಿ ಅಲೆದಾಡಿ ಏನು ಮಾಡಬೇಕೇಂದು ತಿಳಿಯದ ಅವನು ಅದನ್ನು ಕೈಬಿಟ್ಟು ಮುಂದಿನ ಶಿಕ್ಷಣದ ವಿಚಾರವನ್ನು ಬಿಟ್ಟು ತನಗಾವ ಕೆಲಸ ಸಿಗುತ್ತದೆಯೋ ಅದನ್ನು ಮಾಡುತ್ತಾ ಹೊಟ್ಟೆ ಹೊರೆದುಕೊಳ್ಳತೊಡಗಿದ.
ಉಳವಪ್ಪನವರಿಗೆ ಶಹರದಲ್ಲಿ ಮನೆ ಕಟ್ಟುವ ಸಲುವಾಗಿ ಪರವಾನಿಗೆ ಪತ್ರವೊಂದು ಬೇಕಾಗಿತ್ತು. ಮಗಳ ಮದುವೆ ಮಾಡಿ ಕೊಟ್ಟಿದ್ದರು ಅವಳು ದೂರದ ಬೇರೆ ಊರಿನಲ್ಲಿ ಇರುತ್ತಿದ್ದಳು ಇದ್ದೊಬ್ಬ ಹೊರದೇಶದಲ್ಲಿ ಉದ್ದೋಗ ಮಾಡುತ್ತಿದ್ದ ಹೀಗಾಗಿ ಉಳವಪ್ಪನವರೇ ಕಚೇರಿ ಕೆಲಸಾಕ್ಕಾಗಿ ಓಡಾಡಬೇಕಾಗಿತ್ತು ಮೊದಲೇ ವಯಸ್ಸಾಗಿತ್ತು ಅಸ್ತಮಾ ಸಮಸ್ಯೆ ಅವರನ್ನು ಕಡುತ್ತಿರುವುದರಿಂದ ಸ್ವಲ್ಪ ನಡೆದರೂ ಏದುರುಸಿರು ಬಿಡುತಿದ್ದರು ಆ ಮಾಹಿತಿ ಬೇಕು ಈ ಮಾಹಿತಿ ಬೇಕು ಎಂದು ಹಲವಾರು ಸಲ ಬಾರಿ ಓಡಾಡಿಸಿದರು ತಮ್ಮಲ್ಲಿದ್ದ ಅದಕ್ಕೆ ಸಂಬಂಧಪಟ್ಟ ಮಹಿತಿಗಲನ್ನು ಸ್ವಲ್ಪ ಹುಡುಕಾಡಿ ಕೂಡದೇ ಏ ನೀವೇ ತೆಗೆದುಕೊಂಡು ಬರಬೇಕು ಎಂದು ಅನೇಕ ಬಾರಿ ಓಡಾಡಿಸಿದರು ತುಂಬಾ ಪ್ರಯಾಸಪಟ್ಟು ಎಲ್ಲವನ್ನೂ ಹೊಂದಿಸಿ ಕಚೇರಿಗೆ ಕೊಡುವವರೆಗೆ ಸಾಕಾಗಿ ಹೋಯ್ತು ಅವರಿಗೆ ಯಾರಿಗೆ ಬೇಕಪ್ಪಾ ಈ ಮನೆ ಎನಿಸತೊಡಗಿತು ಮನೆ ಕಟ್ಟಿ ನೋಡು ಎಂದ ಎಂಬ ಮಾತುಗಳು ನಿಜವೇನಿಸತೊಡಗಿದವು ಇನ್ನಾದರೂ ಪರವಾನಿಗೆ ಪತ್ರ ಕೊಡುತ್ತಾರೆ ಎಂದು ಆಶೆಯಿಂದ ಕಚೇರಿಗೆ ಹೋದರೆ ಅವರಿಲ್ಲ ಇವರಿಲ್ಲ ಅವರು ಬರಬೇಕು ಇವರು ಬರಬೇಕು ಎಂದು ಯಾವುದಾದರೊಂದು ನೆಪಹೇಳಿ ನಾಳೆ ನಾಡಿದ್ದು ಬನ್ನಿ ಎಂದು ಓಡಾಡಿಸತೊಡಗಿದರು ತುಂಬಾ ಸಹನಶೀಲತೆಯುಳ್ಳ ಉಳವಪ್ಪನವರು ಇಷ್ಟು ಕಚೇರಿ ಸಿಬ್ಬಂದಿ ಕಾಡಿಸಿದರೂ ಪಿಟ್ಟೆನ್ನದೆ ಸಹಿಸಿಕೊಂಡರು ಇನ್ನೇನು ಈ ದಿನವಾದರೂ ತನ್ನ ಕೆಲಸ ಆಗುತ್ತದೆ ಎಂದು ಅಪಾರ ನಂಬಿಕೆಯಿಟ್ಟು ಕಚೇರಿ ಒಳಗೆ ಕಾಲಿಟ್ಟರೆ ಸಂಬಂಧಿಸಿದ ಸಿಬ್ಬಂದಿ ವರ್ಗದವ ನಾಳೆ ಬನ್ನಿ ಎಂದ ಸಿಟ್ಟನ್ನೇ ಅರಿಯದ ಉಳವಪ್ಪನವರಿಗೆ ಕೇಳಿ ಎಲ್ಲಿಲ್ಲದ ಸಿಟ್ಟು ಬಂದು ಹಿಗ್ಗಾ ಮುಗ್ಗಾ ಸಿಬ್ಬಂದಿಯವರನ್ನು ತರಾಟೆಗೆ ತೆಗೆದುಕೊಳ್ಳತೊಡಗಿದರು ಆವಾಗ ಸಿಬ್ಬಂದಿ ವರ್ಗದವರು ಎಚ್ಚೆತ್ತುಕೊಂಡು ಅವರನ್ನು ಸಮಾಧಾನ ಪಡಿಸುತ್ತಾ ಪರವಾನಿಗೆ ಪತ್ರ ಕೊಟ್ಟು ಕಳುಹಿಸಿದರು.
ಚೆನ್ನಮ್ಮನವರಿಗೆ ಯಾರೂ ಆಶ್ರಯದಾತರಿರಲಿಲ್ಲ. ಆಥರ್ಿಕ ಪರಿಸ್ಥಿತಿಯೂ ಚನ್ನಾಗಿರಲಿಲ್ಲ ರೋಗರುಜಿನಗಳ ತೊಂದರೆ ಕೂಡಾ ಚೆನ್ನಮ್ಮನವರಿಗೆ ಇತ್ತು ವೃದ್ದಾಪ್ಯ ವೇತನ ಬರುತ್ತಿತ್ತು ಆದರೆ ಇತ್ತೀಚೆಗೆ ಅವರ ವೃದ್ದಾಪ್ಯ ವೇತನ ಮೂರು ತಿಂಗಳಿನಿಂದ ಬಂದಿರಲಿಲ್ಲ ತಮಗೆ ಸಂಬಂಧಿಸಿದ ಕಚೇರಿಗೆ ಹೋಗಲು ಆಗುವುದಿಲ್ಲವೆಂದು ನೆರೆಹೊರೆಯವರಿಗೆ ಹೋಗಿ ಸ್ವಲ್ಪ ಕೇಳಿ ಕೇಳಿ ಎಂದು ಹೇಳಿದರು ಎಲ್ಲರೂ ತಮ್ಮ ತಮ್ಮ ಕೆಲಸದೊತ್ತಡದಲ್ಲಿ ಕೇಳಿ ಬರಲೇ ಇಲ್ಲಾ ಇನ್ನೇನು ಮಾಡುವುದು ಎಂದು ಚೆನ್ನಮ್ಮನವರೇ ಏಳುತ್ತಾ ಬೀಳುತ್ತಾ ಕಚೇರಿಯೆಡೆಗೆ ಹೋದರು ಸಂಬಂಧಪಟ್ಟ ಅಧಿಕಾರಿ ಎಲ್ಲಿರುವರೇಂದು ಚೆನ್ನಮ್ಮ ಕೇಳಿದರು ಅವ್ರು ಮೀಟಿಂಗಿಗೆ ಹೋಗಿದ್ದಾರೆ ಬರಲು ಎರಡು ತಾಸು ಆಗುತ್ತದೆ ಎಂದರು ಅವರು ಬರುವವರೆಗೆ ಕಾಯುತ್ತೇನೆ ಎಂದು ಚೆನ್ನಮ್ಮ ಕುಳಿತರು. ಶುಗರ ಸಮಸ್ಯೆ ಇತ್ತು ಹೊಟ್ಟೆ ಬೇರೆ ಹಸಿದಿತ್ತು ಸಂಬಂಧಪಟ್ಟ ಅಧಿಕಾರಿ ಬಂದೊಡನೆ ಏನಪ್ಪಾ ನನ್ನ ವೃದ್ದಾಪ್ಯ ವೇತನ ಬಂತಾ ಅಂತಾ ನಮ್ರತೆಯಿಂದ ಕೇಳಿದರು ಅಷ್ಟು ಕೇಳಿದ್ದೆ ತಡ ಆ ಅಧಿಕಾರಿ ಏನ ಬೇ ಮುದಕಿ ಅಂತಾ ಸಿಕ್ಕಾ ಪಟ್ಟೆ ಒದರಾಡತೊಡಗಿದ ನಮಗೆ ಏನು ಬೇರೆ ಕೆಲಸ ಇಲ್ಲೇನ? ನಿಮ್ದ ಒಂದ ಕೆಲಸ ಇರತೈತಿ? ನಾವ ಇಲ್ಲಿ ಸುಮ್ಮನ ಕುಂತಿರತೇವೇನ? ನಿಮ್ಮ ವೇತನ ನಾವೇನ ನಿಮ್ಮ ಪಗಾರ ಬಂದ್ರ ನುಂಗಿ ಹಾಕ್ತಿವೆನ? ಅಂತಾ ವಡಗುಟ್ಟತೊಡಗಿದ ಆವಾಗ ಏನೂ ತಿಳಿಯದೆ ಗರಬಡಿದವಳಂತಾದ ಚೆನ್ನಮ್ಮನವರು ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಮೇಲ್ಲನೆ ಮನೆ ಹಾದಿ ಹಿಡಿದರು.
ಇದೇಕೆ ಹೀಗೆ ಅಂತಾ? ಕಚೇರಿಗಳಿರುವುದೇ ಸಾರ್ವಜನಿಕರ ಸೇವೆಗೈಯ್ಯಲು, ಅವರ ಕುಂದುಕೊರತೆಗಳನ್ನು ಆಲಿಸಲು ಮತ್ತು ಅವರ ಸಮಸ್ಯೆಗಳನ್ನು ಬಗೆಹರಿಸಲು ಕಚೇರಿಗೆ ಬಂದ ಜನರ ಕೆಲಸಗಳನ್ನು ಶೀಘ್ರವಾಗಿ ತೊಂದರೆಯನ್ನು ಜನಸಾಮಾನ್ಯರಿಗೆ ನೀಡಬಾರದು ಬಂದ ಜನರ ಮೇಲೆ ರೇಗಾಡಬಾರದು ಅವರ ಕೆಲಸಗಳನ್ನು ತಡಮಾಡದೆ ಮತ್ತು ಅವರನ್ನು ಆಗಾಗ್ಗೆ ಓಡಾಡಿಸದೆ ಮಾಡಿಕೊಟ್ಟರೆ ಒಳ್ಳೆಯದು ಜನಸೇವಕರಾಗಿ ಜನಾನುರಾಗಿಗಳಾಗಿ ತಮ್ಮ ಕರ್ತವ್ಯಗಳನ್ನು ಪೂರೈಸುಬೇಕು ಬರುವ ಸಂಬಳಕ್ಕೆ ಮಾತ್ರ ಹೊಣೆಗಾರ ಕರ್ತವ್ಯಗಳನ್ನು ಎಸಗುವಾಗ ನಾನು ಹೊಣೆಗಾರನಲ್ಲ ಎಂದರೆ ಇದು ಶೋಭೆಯಲ್ಲ ಎಷ್ಟು ಜನರ ಮನಗಳನ್ನು ಗೆದ್ದು ಸಿಬ್ಬಂದಿ ವರ್ಗದವರು ಸೇವೆ ಸಲ್ಲಿಸುತ್ತಾರೋ ಅಷ್ಟು ದೇವರು ನಿಮಗೆ ಒಳ್ಳೆಯದನ್ನು ಮಾಡುತ್ತರೆ ಯಾವುದೇ ಕಚೇರಿಯಲ್ಲಿ ಕಾರ್ಯ ಎಸಗುವ ಸಿಬ್ಬಂದಿ ವರ್ಗದವರೆಲ್ಲ "ಜನಸೇವೆಯೇ ಜನಾರ್ಧನನ ಸೇವೆ" ಎಂಬ ಭಾವನೆಯಿಂದ ಗೈದರೆ ಒಳಿತು ಎಂಬುದೇ ನನ್ನ ಅಭಿಲಾಷೆ.