ಪಿಂಚಣಿ ಪಾವತಿ ಆದೇಶ ಪತ್ರ ವಿತರಣಾ ಕಾರ್ಯಕ್ರಮ

ಪಿಂಚಣಿ ಪಾವತಿ ಆದೇಶ ಪತ್ರ ವಿತರಣಾ ಕಾರ್ಯಕ್ರಮ

ಲೋಕದರ್ಶನ ವರದಿ

ಬಳ್ಳಾರಿ 01:ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಡಿಸೆಂಬರ್ ತಿಂಗಳಲ್ಲಿ ಸೇವೆಯಿಂದ ನಿವೃತ್ತಯಾದ ತನ್ನ ಸಿಬ್ಬಂದಿಗೆ ಪಿಂಚಣಿ ಪಾವತಿ ಆದೇಶ ಪತ್ರವನ್ನು ನೀಡಿತು. ಭಾರತ ಸಕಾರದ ಆಥರ್ಿಕ ಮಂತ್ರಾಲಯ, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಹಾಗೂ ಪ್ರವರ್ತಕ ಬ್ಯಾಂಕಾದ ಕೆನರಾ ಬ್ಯಾಂಕ್ನ ನಿದರ್ೆಶನದನುಸಾರ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದೆ. 

ಈ  ಮುಂಚೆ ಇಂತಹ ಪಿಂಚಣಿ ಯೋಜನೆ ಬ್ಯಾಂಕಿನಲ್ಲಿ ಜಾರಿಯಲ್ಲಿರಲಿಲ್ಲ. ಭಾರತ ಸಕರ್ಾರ ಹಾಗೂ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್ಗಳ ಸಿಬ್ಬಂದಿಗೆ ಜಾರಿಯಲ್ಲಿರುವಂತಹ ಪಿಂಚಣಿ ಯೋಜನೆಯನ್ನು ಪ್ರಾದೇಶಿಕ ಗ್ರಾಮೀಣ ಬ್ಯಾಂಕಿನ ಸಿಬ್ಬಂದಿಗೂ ವಿಸ್ತರಿಸುವ ನಿಧರ್ಾರವನ್ನು ಇತ್ತೀಚೆಗೆ ತೆಗೆದುಕೊಂಡಿದ್ದು, ಅದರನುಸಾರ ದಿ:01 ಏ 2018ರಿಂದ ಅನ್ವಯವಾಗುವಂತೆ ದಿ:01 ಜ 2019ರಂದು ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀನಾಥ್ ಜೋಷಿ ಪ್ರಧಾನ ಕಛೇರಿಯಲ್ಲಿ ದಿ:31 ಜ 2019ರಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅರ್ಹ ನಿವೃತ್ತ ಸಿಬ್ಬಂದಿಗೆ ಪಿಂಚಿಣಿ ಪಾವತಿ ಆದೇಶ ಪತ್ರಗಳನ್ನು ನಾಲ್ಕು ಜನ ಸಿಬ್ಬಂದಿಗೆ ಪತ್ರಗಳನ್ನು ಬ್ಯಾಂಕಿನ ಹಿರಿಯ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿ / ನಿವೃತ್ತ ಸಿಬ್ಬಂದಿಗಳ ಸಮಕ್ಷಮದಲ್ಲಿ ವಿತರಿಸಿದರು. ಪಿಂಚಣಿ ಯೋಜನೆ ಜಾರಿಯಾದ ನಂತರ ನಿವೃತ್ತ ಸಿಬ್ಬಂದಿಗೆ ತಕ್ಷಣದಲ್ಲಿ ಪಿಂಚಣಿ ವಿತರಿಸಿದ ರಾಜ್ಯದ ಪ್ರಥಮ ಪ್ರಾದೇಶಿಕ ಗ್ರಾಮೀಣ ಬ್ಯಾಂಕಾಗಿದೆ. ಸದರಿ ಪಿಂಚಿಣಿ ಯೋಜನೆ 31 ಜ 2010ರಂದು ಸೇವೆಯಲ್ಲಿದ್ದ ಈವರೆಗೆ ನಿವೃತ್ತಿಯಾದ ಹಾಗೂ ಅರ್ಹ ಮೃತ ಸಿಬ್ಬಂದಿಯ ಕುಟುಂಬದವರಿಗೆ ಅನ್ವಯವಾಗುತ್ತದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಮಹಾ ಪ್ರಬಂಧಕರು ಹಾಗೂ ಟ್ರಸ್ಟ್ನ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ (ಸಿಬ್ಬಂದಿ) ನಿಧಿ ಇವರಿಂದ ಎಸ್.ಜೆ.ಎಫ್.ರವೀಂದ್ರ ಮಾತನಾಡಿ ಪಿಂಚಣಿ ತರುವ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಸಿಬ್ಬಂದಿಗೆ ಹಾಗೂ ಅಧಿಕಾರಿಗಳಿಗೆ ಬ್ಯಾಂಕಿನ ನಿದರ್ೆಶಕರಿಗೆ ಧನ್ಯವಾದಗಳನ್ನು ತಿಳಿಸಿದರು. ನಳಿನಿ ರಾಜಶೇಖರ್, ಎ.ಜಿ.ಬಿ. ನಬಾಡರ್್, ಬೆಂಗಳೂರು, ಶ್ರೀಶೈಲ ಉಡುಪ, ಎನ್.ರವಿಕುಮಾರ್ ಮಹಾಪ್ರಬಂಧಕರು ಉಪಸ್ಥಿತರಿದ್ದರು. ಹಿರಿಯ ನಿವೃತ್ತ ವ್ಯವಸ್ಥಾಪಕರಾದ ಹೊಸೂರು ವಾದಿರಾಜ್, ನಾಗರಾಜರಾವ್, ಕೆ.ಬಿ.ಪ್ರಭಾಕರ್ ಹಾಗೂ ಯು.ರಾಜಶೇಖರ್ ಅವರಿಗೆ ನಿವೃತ್ತಿ ಪಿಂಚಿಣಿ ಪತ್ರಗಳನ್ನು ವಿತರಿಸಿದರು. ನಾಗರಾಜರಾವ್ ಮಾತನಾಡಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಮುಖ್ಯ ಪ್ರಬಂಧಕರಾದ ಎಂ.ಎ.ಅಲೀಮ್ ಸ್ವಾಗತಿಸಿದೆ, ಹಿರಿಯ ಪ್ರಬಂಧಕರಾದ ಎನ್.ಉಮೇಶ್ ಕೊನೆಯಲ್ಲಿ ವಂದಿಸಿದರು.


ಸುದ್ದಿ ಓದಿ