ಕನ್ನಡಪರ ಸಂಘಟನೆಗಳ ಮುಖಂಡರ ಶಾಂತಿ ಸಭೆ
ಲೋಕದರ್ಶನ ವರದಿ
ಘಟಪ್ರಭಾ 08: ಕನ್ನಡಪರ ಸಂಘಟನೆಗಳ ಮುಖಂಡರ ಶಾಂತಿ ಸಭೆಯು ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ಮಂಗಳವಾರ ಸಂಜೆ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ಘಟಪ್ರಭಾ ಠಾಣೆಯ ಪಿ.ಐ ಶ್ರೀಶೈಲ ಬ್ಯಾಕೋಡ ರವರು, ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಯ ಮುಖಂಡರು ಪ್ರತಿಭಟನೆಗಳು, ಹೋರಾಟಗಳು ಶಾಂತಿಯುತವಾಗಿ ನಡೆಯಬೇಕು.
ಟಯರ್ಗೆ ಬೆಂಕಿ ಹಚ್ಚುವುದು, ವಾಹನಗಳಿಗೆ ಮಸಿ ಬಳಿಯುವುದು, ಸರ್ಕಾರಿ ಆಸ್ತಿ ಪಾಸ್ತಿ ನಷ್ಟು ಮಾಡುವುದು ಕಾನೂನು ಬಾಹಿರ ವಾಗಿರುತ್ತದೆ, ಒಂದು ವೇಳೆ ಪ್ರತಿಭಟನೆ ಮಾಡುವುದಾದರೆ ಪೋಲಿಸ್ ಠಾಣೆಯಲ್ಲಿ ಒಂದು ದಿನ ಮುಂಚಿತವಾಗಿ ತಿಳಿಸಬೇಕು, ಕಾನೂನು ವಿರುದ್ಧವಾಗಿ ಯಾರೇ ಹೋದರೆ ಅವರ ಮೇಲೆ ಕ್ರಮ ಆಗುತ್ತದೆ. ಹಾಗೂ ಶಾಂತಿಗೆ ಭಂಗ ಉಂಟು ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರಾದ ರೆಹಮಾನ್ ಮೊಕಾಶಿ, ರಾಜು ದೊಡಮನಿ, ಅಪ್ಪಾಸಾಬ ಮುಲ್ಲಾ, ಪ್ರಶಾಂತ ಅರಳಿಕಟ್ಟಿ, ಕೆಂಪಯ್ಯಾ ಪುರಾಣಿಕ, ಮಾರುತಿ ಚೌಕಶಿ, ಬಸವರಾಜ ಹುಬ್ಬಳ್ಳಿ, ಕೊಟ್ರೇಶ ಪಟ್ಟಣಶೆಟ್ಟಿ, ಕುಮಾರ ಇಂಡಿಗೇರ, ಸಲೀಮ ಮುಲ್ಲಾ, ಹಾಗೂ ಇನ್ನೂ ಅನೇಕ ಸಂಘಟನೆಯ ಮುಖಂಡರು ಮತ್ತು ಪೋಲಿಸ್ ಸಿಬ್ಬಂದಿ ವರ್ಗದವರು ಇದ್ದರು