ಜಮಖಂಡಿ

ಗುರುವಿನ ಉಪದೇಶದಿಂದ ಜೀವನದ ಬಂಧನಗಳಿಂದ ಮುಕ್ತರಾಗಲು ಸಾಧ್ಯ.: ಬಸವಲಿಂಗ ದೇವರು ಶ್ರೀ

ಗುರುವಿನ ಉಪದೇಶದಿಂದ ಜೀವನದ ಬಂಧನಗಳಿಂದ ಮುಕ್ತರಾಗಲು ಸಾಧ್ಯ.: ಬಸವಲಿಂಗ ದೇವರು ಶ್ರೀ

ಲೋಕದರ್ಶನ ವರದಿ,

ಜಮಖಂಡಿ: 26: ಗುರುವಿನ ಉಪದೇಶದಿಂದ ಜೀವನದ ಬಂಧನಗಳಿಂದ ಮುಕ್ತರಾಗಲು ಸಾಧ್ಯ. ಸತ್ಸಂಗದಲ್ಲಿ ಇರುವವರೆಲ್ಲರಲ್ಲೂ ಭೇದಭಾವ ಹೋಗಿ ದೇವಭಾವ ಮೂಡಬೇಕು ಎಂದು ಭಾಲ್ಕಿಯ ಹಿರೇಮಠ ಸಂಸ್ಥಾನದ ಬಸವಲಿಂಗ ದೇವರು ಮಹಾಸ್ವಾಮಿಗಳು ಹೇಳಿದರು.

ತಾಲ್ಲೂಕಿನ ಹುಲ್ಯಾಳ ಗುರುದೇವಾಶ್ರಮದಲ್ಲಿ ಶ್ರೀಗುರು ಸತ್ಸಂಗ ಬಳಗದ ಆಶ್ರಯದಲ್ಲಿ ಆಯೋಜಿಸಿದ್ದ ಶ್ರೀಗುರುದೇವ ಸತ್ಸಂಗದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳ ಬದುಕೇ ಒಂದು ಸಂದೇಶವಾಗಿತ್ತು. ಶ್ರೀಗಳ ಜೀವನ ನೋಡಿ ಕಲಿತವರ ಜೀವನ ಪಾವನ ಆಗುತ್ತಿತ್ತು. ಸಿದ್ಧೇಶ್ವರ ಶ್ರೀಗಳು ಉಪಮೆಯನ್ನು ಮೀರಿದವರಾಗಿದ್ದರು ಎಂದು ನುಡಿದರು.

ಮೈಗೂರಿನ ಶಿವಾನಂದ ಮಠದ ಗುರುಪ್ರಸಾದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಸ್ಥಿರವಲ್ಲದ ಧನ, ಜನ, ಯೌವನವನ್ನು ನಂಬಬಾರದು. ಆದ್ದರಿಂದ ಸತ್ಸಂಗ ಬಿಟ್ಟು ಅನ್ಯ ಮಾರ್ಗವಿಲ್ಲ. ಸತ್ಸಂಗದಲ್ಲಿದ್ದರೆ ಸಾಧನೆ ಸಾಧ್ಯವಾಗುತ್ತದೆ. ಸತ್ಸಂಗದಿಂದ ಮುಂದೆ ಸಾಗುವ ಮಾರ್ಗ ಗೋಚರಿಸುತ್ತದೆ ಎಂದರು.

ಹುಲ್ಯಾಳ ಗುರುದೇವಾಶ್ರಮದ ಹಷರ್ಾನಂದ ಮಹಾಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ಇನ್ನೊಬ್ಬರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಬಾರದು. ದುಡ್ಡಿಗೆ ಆಶೆ ಪಡಬಾರದು. ಯಾರಾದರೂ ಜಗಳ ತೆಗೆದರೆ ಮೌನವಾಗಿರಬೇಕು. ಅಹಂಕಾರ ಎಂದಿಗೂ ಬರಬಾರದು ಎಂಬುದು ಸಿದ್ಧೇಶ್ವರ ಶ್ರೀಗಳು ತಮಗೆ ನೀಡಿದ ಉಪದೇಶಗಳಾಗಿದ್ದವು ಎಂದು ಸ್ಮರಿಸಿಕೊಂಡರು.

ತುಮಕೂರಿನ ವಿವೇಕ ಸಿದ್ಧಾಶ್ರಮದ ದಯಾಶಂಕರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಅನ್ನಪ್ರಸಾದ ದಾಸೋಹ ಸೇವೆಗೈದ ಅಲ್ಕಾ ಮಾಳಗಿ ಅವರನ್ನು ಸನ್ಮಾನಿಸಲಾಯಿತು. ಹುನ್ನೂರಿನಲ್ಲಿ 52 ವರ್ಷಗಳಿಂದ ಸತ್ಸಂಗ ನಡೆಯಿಸಿಕೊಂಡು ಬಂದಿರುವ ದಯಾನಂದ ಶಾಸ್ತ್ರಿ ಹಾಗೂ ಶಿವಪುತ್ರ ಅವರನ್ನು ಸನ್ಮಾನಿಸಲಾಯಿತು.

ಪ್ರಗತಿ ಮಹಿಳಾ ಮಂಡಳದ ಸದಸ್ಯೆಯರು ಪ್ರಾರ್ಥನೆ ಗೀತೆ ಹಾಡಿದರು. ಗುರುಬಸಗೌಡ ಪಾಟೀಲ, ಶಿವಾನಂದ ಬಾಡನವರ(ಹಾಮರ್ೊನಿಯಂ), ರಾಮಚಂದ್ರ ಹೂಗಾರ(ತಬಲಾ) ಸಂಗೀತ ಸೇವೆ ಸಲ್ಲಿಸಿದರು. ಮಲ್ಲೇಶಪ್ಪ ಗೆದ್ದೆಪ್ಪನವರ ನಿರೂಪಿಸಿದರು. 



ಸುದ್ದಿ ಓದಿ