ಜಮಖಂಡಿ

ಶುಶ್ರೂಷಕರ ಸೇವೆ ಅನನ್ಯವಾದದ್ದು: ಬಣ್ಣದ

ಶುಶ್ರೂಷಕರ ಸೇವೆ ಅನನ್ಯವಾದದ್ದು: ಬಣ್ಣದ

ಲೋಕದರ್ಶನ ವರದಿ,

ಜಮಖಂಡಿ : 16:ಶುಶ್ರೂಷಕರು  ಆಸ್ಪತ್ರೆಯ ಬೆನ್ನಲುಬಾಗಿ ಸಾವು ನೋವಿನ ಮಧ್ಯೆ ಹೋರಾಟ ನಡೆಸುವ ರೋಗಿಗಳ ಶುಶ್ರೂಷೆಯಲ್ಲಿ ಸಂತೃಪ್ತಿಯನ್ನು ಕಾಣುತ್ತಾ ಸೇವೆ ಸಲ್ಲಿಸುವ ಶುಶ್ರೂಷಕರ ಸೇವೆ ಅನನ್ಯವಾದದ್ದು ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಕೃಷ್ಣಾ ಬಣ್ಣದ ಹೇಳಿದರು.

ನಗರದ ಬಿಎಲ್ಡಿಇ ಸಂಸ್ಥೆಯ ನರ್ಸಿಂಗ್  ಕಾಲೇಜಿನಲ್ಲಿ ವಿಶ್ವ ಶುಶ್ರೂಷಕರ ದಿನಾಚರಣೆಯಲ್ಲಿ ನಡೆದ  ಕಾರ್ಯಕಮದಲ್ಲಿ  ಪ್ಲಾರೆನ್ಸ ನೈಟಿಂಗೇಲ್ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಮಾತನಾಡಿದರು.

ಜೆ.ಡಿ.ಧನ್ನೂರ ಮಾತನಾಡಿ, ಸೈನಿಕರು ದೇಶ ರಕ್ಷಣೆಗಾಗಿ ಹಗಲುರಾತ್ರಿ ದೇಶವನ್ನು ಕಾಯುವಂತೆ ಶುಶ್ರೂಷಕರು ರೋಗಿಯ ಪ್ರಾಣವನ್ನು ಉಳಿಸಲು ಹಗಲು ರಾತ್ರಿ ರೋಗಿಗಳ ಸೇವೆಯಲ್ಲಿ ತೊಡಗಿರುತ್ತಾರೆ ಎಂದರು.

ಬಿ.ಎಲ್.ಡಿ.ಇ.ಸಂಸ್ಥೆಯ ಆಡಳಿತಾಧಿಕಾರಿ ಪ್ರೊ, ಶ್ರೀಕಾಂತ ಲಗಳಿ ಮಾತನಾಡಿ, ನರ್ಸಿಂಗ್  ವೃತಿಯು ವೃತ್ತಿಗಳಲ್ಲಿಯೇ ಶ್ರೇಷ್ಟತೆಯನ್ನು ಹೊಂದಿದೆ. ವಿದ್ಯಾಥಿಗಳು ಆರೋಗ್ಯ ಪ್ರಜ್ಞೆ ಮೂಡಿಸುವ ನಿರಂತರ ಕಾಯಕದಲ್ಲಿ ತೊಡಗಿ ಆರೋಗ್ಯಯುತ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು. 

ಉಷಾ ಪೂಜಾರಿ, ಕಾವೇರಿ ಪೂಜಾರಿ ಪ್ರಾರ್ಥನಿಸಿದರು, ನರ್ಸಿಂಗ್  ಕಾಲೇಜಿನ ಪ್ರಾಚಾರ್ಯ ಡಾ.ವೀರಭದ್ರಪ್ಪಾ ಜಿ.ಮೆಂಡಾಗುದ್ಲಿ ಸ್ವಾಗತಿಸಿದರು, ಉಪನ್ಯಾಸಕಿ ಶಿವಲೀಲಾ ಸಾರವಾಡ, ಉಪನ್ಯಾಸಕಿ ರಾಜೇಶ್ವರಿ ಕಂಬಿ ನಿರೂಪಿಸಿದರು, ಉಪನ್ಯಾಸಕಿ ಈರಣ್ಣಾ ನಿಪ್ಪಾಣಿ ವಂದಿಸಿದರು, 



ಸುದ್ದಿ ಓದಿ