ಜಮಖಂಡಿ

ನರ್ಸಿಂಗ್ ವೃತ್ತಿಗೆ ಸಮರ್ಪಣಾ ಮನೋಭಾವ ಅಗತ್ಯ

ನರ್ಸಿಂಗ್  ವೃತ್ತಿಗೆ ಸಮರ್ಪಣಾ ಮನೋಭಾವ ಅಗತ್ಯ

ಲೋಕದರ್ಶನ ವರದಿ

ಜಮಖಂಡಿ 15: ಆರೋಗ್ಯ ಪ್ರಜ್ಞೆ ಮೂಡಿಸುವ ಮೂಲಕ ರೋಗಿಗಳ ಶುಶ್ರೂಷೆಯಲ್ಲಿ ಸಂತೃಪ್ತಿಯನ್ನು ಕಂಡಾಗಲೇ ನರ್ಸಿಂಗ್  ವೃತ್ತಿಯು ಸಾರ್ಥಕತೆಯನ್ನು ಪಡೆಯುತ್ತದೆ. ನರ್ಸಿಂಗ್ ವೃತ್ತಿಗೆ ಸಮರ್ಪಣಾ ಮನೋಭಾವ ಅಗತ್ಯ ಎಂದು  ಬೆಂಗಳೂರಿನ ಆರ್.ವಿ.ನಸರ್ಿಂಗ್ ಕಾಲೇಜಿನ ಪ್ರಾಚಾರ್ಯ  ಡಾ.ಎಸ್.ಆರ್.ಗಜೇಂದ್ರಸಿಂಗ್ ಕರೆ ನೀಡಿದರು.

ನಗರದ ಬಿ.ಎಲ್.ಡಿ.ಇ.ಸಂಸ್ಥೆಯ ನರ್ಸಿಂಗ್ ಕಾಲೇಜಿನಲ್ಲಿ ದೀಪದಾನ ಹಾಗೂ ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ ಮಾತನಾಡಿದರು,

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಎಲ್.ಡಿ.ಇ. ಸಂಸ್ಥೆಯ  ಆಡಳಿತಾಧಿಕಾರಿ ಡಾ.ಡಿ.ಬಿ. ಕೋಟ್ನಾಳ, ನರ್ಸಿಂಗ್ ವೃತಿಯು ವೃತ್ತಿಗಳಲ್ಲಿಯೇ ಶ್ರೇಷ್ಟತೆಯನ್ನು ಹೊಂದಿದೆ. ವಿದ್ಯಾಥಿಗಳು ಆರೋಗ್ಯ ಪ್ರಜ್ಞೆ ಮೂಡಿಸುವ ನಿರಂತರ ಕಾಯಕದಲ್ಲಿ ತೊಡಗಿ ಆರೋಗ್ಯಯುತ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.

ಕಾಲೇಜಿನ ಪ್ರಸಕ್ತ ಸಾಲಿನ ಸ್ಪೂರ್ತಿ ಸ್ಮರಣಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಉತ್ತಮ ಫಲಿತಾಂಶವನ್ನು ಪಡೆದ ರುಕ್ಮಾಬಾಯಿ ಪಟ್ಟಣಶೆಟ್ಟಿ, ರವಿ ಬೆಜ್ಜುಂದಗಿ, ಲಕ್ಮೀ ಕೊಕಟನೂರ ಅವರಿಗೆ ಗೌರವಿಸಲಾಯಿತು.

ಅರುಣಕುಮಾರ ಶಹಾ, ಪ್ರೊ ಎಸ್.ಎಚ್.ಲಗಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿ.ಎಮ್.ಪಾಟೀಲ್, ಪ್ರೊ.ಶಾಲಮೊನ್ ಚೋಪಡೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. 

ದಾನಮ್ಮಾ ಪವಲೆ ಭರತನಾಟ್ಯ ಮಾಡಿದರು, ಡಾ.ವೀರಭದ್ರಪ್ಪಾ ಜಿ.ಮೆಂಡಾಗುದ್ಲಿ ವಾರ್ಷಿಕ ವರದಿ ವಾಚಿಸಿದರು.ಶಿವಲೀಲಾ ಸಾರವಾಡ ಸ್ವಾಗತಿಸಿದರು, ರಾಜೇಶ್ವರಿ ಕಂಬಿ ನಿರೂಪಿಸಿದರು. ಸಮ್ರೈನ್ ಅವಟಿ ವಿಜೇತರಿಗೆ ಪಾರಿತೋಷಕ ನಿರೂಪಿಸಿದರು.  ಈರಣ್ಣಾ ನಿಪ್ಪಾಣಿ ವಂದಿಸಿದರು. 

ಪೋಟೋ : ನಗರದ ಬಿ.ಎಲ್.ಡಿ.ಇ.ಸಂಸ್ಥೆಯ ನರ್ಸಿಂಗ್ ಕಾಲೇಜಿನಲ್ಲಿ ನಡೆದ ದೀಪದಾನ ಹಾಗೂ ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ ಡಾ.ಎಸ್.ಆರ್.ಗಜೇಂದ್ರಸಿಂಗ್ ಉದ್ಘಾಟಿಸಿದರು 

ಸುದ್ದಿ ಓದಿ