ಸ್ಥಳಿಯ ಗಾಯಕರಿಂದ ರಾಘವ ಕಲಾಮಂದಿರದಲ್ಲಿ ಹೊಸವರ್ಷ ಆಚರಣೆ
ಬಳ್ಳಾರಿ 02:ರಾಘವ ಮೆಮೋರಿಯಲ್ ಅಸೋಸಿಯೇಷನ್ ಅವರು ಇದೇ ಮೊದಲ ಬಾರಿಗೆ ಹಳೆಯ ಚಿತ್ರಗೀತೆಗಳ ರಸಮಂಜರಿ ಕಾರ್ಯಕ್ರಮವನ್ನು ಸ್ಥಳಿಯ ಗಾಯಕರಿಂದ ಆಯೋಜನೆ ಮಾಡಿರುವುದು ಸಾರ್ವಜನಿಕರಲ್ಲಿ ಹೆಚ್ಚಿನ ಪ್ರೋತ್ಸಾಹ ತೋರಿ ಬಂದಿದೆ. ನಾವು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಸ್ಥಳಿಯ ಕಲಾವಿದರು ಹಳೆಯ ಚಿತ್ರಗೀತೆಗಳನ್ನು ಹಾಡುವ ಮೂಲಕ ಜನರ ಮನಸ್ಸನ್ನು ಗೆದ್ದರು.
ಈ ಸಂದರ್ಭದಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್ನ ಅಧ್ಯಕ್ಷ ಕೆ.ಕೋಟೆಶ್ವರರಾವ್, ಗೌರವಾಧ್ಯಕ್ಷ ಕೆ.ಚನ್ನಪ್ಪ ಮಾತನಾಡಿ ನಮ್ಮ ಸಂಸ್ಥೆಯಿಂದ ಹೊಸ ವರ್ಷದ ಅಂಗವಾಗಿ ಪ್ರತೀ ವರ್ಷ ಹೊಸ-ಹೊಸ ವಿನೂತನ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿದ್ದೇವೆ. ಈ ಬಾರಿ ಸ್ಥಳಿಯ ಕಲಾವಿದರನ್ನು ಗುರುತಿಸಿ ಅವರಿಂದ ಕಾರ್ಯಕ್ರಮ ನೀಡುತ್ತಿರುವುದು ಒಂದು ಹೊಸ ಪ್ರಯೋಗ ಈ ಕಾರ್ಯಕ್ರಮಕ್ಕೆ ಶುಭವಾಗಲಿ ಎಂದು ಕೋರಿದರು.
ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ರಮೇಶಗೌಡ ಪಾಟಿಲ್, ಖಜಾಂಚಿ ಧನಂಜಯ, ಎನ್.ಬಸವರಾಜ, ಕೆ.ರುದ್ರಪ್ಪ, ಶ್ಯಾಮಸುಂದರ್, ಶ್ರೀನಿವಾಸುಲು, ನರಸೆಪಲ್ಲಿ ನಾಗರಾಜ, ಎಸ್.ರಮೇಶಬಾಬು, ಕೆ.ಕೃಷ್ಣ, ಯು.ರಾಮಾಂಜೀನಯಲು, ಸೇರಿದಂತೆ ಅಸೋಸಿಯೇಷನ್ನ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ವೆಂಕಟೇಶಲು ಮತ್ತು ಚಂದ್ರಶೇಖರ್, ಕಾರ್ಯಕ್ರಮದ ನಿರ್ವಹಣೆಯನ್ನು ವಹಿಸಿಕೊಂಡಿದ್ದರು.