ವಿವಿಯಲ್ಲಿ ಹೊಸ ಕೋಸರ್್ಗಳು ಆರಂಭ: ಪ್ರೋ ಸುಭಾಷ್
ಬಳ್ಳಾರಿ 28: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ 2019-2020ರಲ್ಲಿ ಹೊಸಕೋಸರ್್ ಮತ್ತು ಹೊಸ ಕಾಲೇಜ್ ಗಳು ಪ್ರಾರಂಭಿಸಲಾಗುತ್ತದೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಎಂ.ಎಸ್ ಸುಭಾಷ್ ತಿಳಿಸಿದರು. ನಗರದ ಹೊರವಲಯದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಗೇಸ್ಟ್ ಹೌಸ್ನಲ್ಲಿ ಸುದ್ದಿಗಾರರೊಂದಿಗೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಎಂ.ಎಸ್ ಸುಭಾಷ್ ಮಾತನಾಡಿದ ಅವರು ಸಹಾಯಕ ಪ್ರಾಧ್ಯಾಪಕರನ್ನು ನೇಮಕ ಮಾಡಿಕೊಂಡಿದ್ದೆ ಹಾಗೇ ಐದು ಜನ ನಿವೃತ್ತಿಯನ್ನು ಹೊಂದಿದ ಪ್ರಾಧ್ಯಾಪಕರನ್ನು ನೇಮಕಾತಿ ಮಾಡಿಕೊಂಡಿದ್ದೇವೆ ಎಂದು ಹೇಳಿದರು. ಮಾಚರ್್ ಅಥವಾ ಏಪ್ರಿಲ್ ತಿಂಗಳಲ್ಲಿ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯವು 12ಬಿಗೆ ಸೇರುತ್ತದೆ ಎಂದರು.
ರೂಸಾದಲ್ಲಿ ನಮ್ಮ ವಿವಿಯು 12ಬಿ ಸಿಗದೇ ಇಲ್ಲದ ಕಾರಣ ಒಂದು ರೂಪಾಯಿ ಸಿಗಲಿಲ್ಲ ಎಂದರು. ಸಕರ್ಾರಕ್ಕೆ ಕೇಳುವುದೆಂದರೇ ನೇಮಕಾರಿ ಪ್ರಕ್ರಿಯೆ ನಿಲ್ಲಿಸಬೇಡಿ. ಹೈದಾರಬಾದ್ ಕನರ್ಾಟಕದಲ್ಲಿ ಸಮಸ್ಯೆ ಇದೆ. ಸಾಕಷ್ಟು ಪ್ರಯತ್ನ ಮಾಡಿದ್ದೇವೆ ಇದಕ್ಕೆ ಸಂಭಂಧಿಸಿದಂತೆ ವಿವಿಯಲ್ಲಿ ಅಭಿವೃದ್ಧಿ ಹೊಂದಬೇಕಾದರೇ ಆರಂಭದಲ್ಲಿ 11 ವಿಭಾಗಗಳು ಇದ್ದವು, ಈಗ 27 ವಿಭಾಗಗಳಾಗಿವೆ, ಇಲ್ಲಿಯವರೆಗೆ 38 ಕಾರ್ಯಕ್ರಮಗಳನ್ನು ಮಾಡಿದ್ದೆವೆ ಎಂದರು.
ಗುಲ್ಬರ್ಗ ಬಿಟ್ಟರೇ ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಎರಡನೇ ಸ್ಥಾನದಲ್ಲಿ ಇದೆ ಎಂದರು. ಉನ್ನತ ಶಿಕ್ಷಣದಲ್ಲಿ 12ಬಿ ಅಗತ್ಯ, 2019-2020ರಲ್ಲಿ ವಿಶ್ವವಿದ್ಯಾಲಯಕ್ಕೆ 12ಬಿ ಹೊಂದಿದೆ ಅನುದಾನ ಸಾಕಷ್ಟು ದೊರೆಯುತ್ತದೆ. 2019-2020ರಲ್ಲಿ 20 ಕೋಟಿ ಅನುದಾನ ದೊರೆಯುತ್ತದೆ. ಸಕರ್ಾರಕ್ಕೆ 43 ಕೋಟಿ ಕೇಳಿದರೇ, ಸಕರ್ಾರವು ಬರೀ 2 ಕೋಟಿ ಅನುದಾನ ನೀಡುತ್ತದೆ. ಇದರಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು. 2018-2019ರಲ್ಲಿ ಹೊಸ ಶೈಕ್ಷಣಿಕ ವಿಭಾಗಗಳು: ಮಹಿಳಾ ಅಧ್ಯಯನ ವಿಭಾಗ, ಸೂಕ್ಷ್ಮಜೀವ ವಿಜ್ಞಾನ, ಜೈವಿಕ ತಂತ್ರಜ್ಞಾನ ಪ್ರಾರಂಭಿಸಲಾಗುತ್ತದೆ. ಸ್ನಾತಕೋತ್ತರ ಶಿಕ್ಷಣ, ಪಿ.ಜಿ, ಡಿಪ್ಲೋಮ ಕೋಸರ್್ ಕಾಲೇಜ್, ಯು.ಜಿ.ಸಿ ಡಿಪ್ಲೋಮಕೋಸರ್್ ಕಾಲೇಜ್, ಹೊಸ ಕಾಲೇಜ್, ಹೊಸ ಕೋಸರ್್, ಹೊಸ ಕಾಂಬಿನೇಷನ್, ಪ್ರವೇಶ ಮಿತಿ ಹೆಚ್ಚಳ, ಬಿ.ಇಡಿ ಕೋಸರ್್ ಪ್ರಾರಂಭಿಸಲಾಗುತ್ತದೆ ಎಂದರು. ಈ ಸುದ್ದಿಗೋಷ್ಠಿಯಲ್ಲಿ ವಿವಿಯ ಕುಲಸಚಿವೆ ಪ್ರೋ|| ತುಳಸಿಮಾಲಾ ಮತ್ತು ಎಲ್ಲಾ ವಿದ್ಯಾವಿಷಯಕ ಪರಿಷತ್ ಸದಸ್ಯರು ಕೆ.ಸಿ.ಕೊಂಡಯ್ಯ ಭಾಗವಹಿಸಿದ್ದರು.