ಸಿಂಧಗಿ

ಜನ ಸಾಧಕರ ಸಾಧನೆಯ ಹಾದಿಯನ್ನು ಪರಿಚಯಿಸಿದ ನೆನಹು ಮಂದಾರ: ಹಿರೇಮಠ

ಜನ ಸಾಧಕರ ಸಾಧನೆಯ ಹಾದಿಯನ್ನು ಪರಿಚಯಿಸಿದ ನೆನಹು ಮಂದಾರ: ಹಿರೇಮಠ
ನೆನಹು ಮಂದಾರ ಕೃತಿಯನ್ನು ಹಿರಿಯ ಪತ್ರಕರ್ತ ಶಾಂತೂ ಹಿರೇಮಠ ಬಿಡುಗಡೆಗೊಳಿಸಿ ಮಾತನಾಡಿದರು

ಸಿಂದಗಿ 30: ಜನ ಸಾಧಕರ ಸಾಧನೆಯ ಹಾದಿಯನ್ನು ಪರಿಚಯಿಸಿದ ನೆನಹು ಮಂದಾರ ಎಂದು ಹಿರಿಯ ಪರ್ತಕರ್ತ ಪ್ರೊ. ಶಾಂತೂ ಹಿರೇಮಠ ಹೇಳಿದರು.

ಪಟ್ಟಣದ ಸಂಗಮೇಶ್ವರ ವಿದ್ಯಾಲಯದ ಸಭಾ ಭವನದಲ್ಲಿ ನೆನಹು ಮಂದಾರ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ನೆಲೆ ಪ್ರಕಾಶನ ಸಂಸ್ಥೆಯು ಕಳೆದ ನಾಲ್ಕು ದಶಕಗಳಿಂದ ಸಿಂದಗಿ ನಗರ ಸೇರಿ ಗ್ರಾಮೀಣ ಪ್ರದೇಶದಲ್ಲಿ ತಲೆ ಎತ್ತಿ ಸಾಹಿತ್ಯದ ಕೃಷಿ ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಡಾ. ಎಂ.ಎಂ.ಕಲಬುರ್ಗಿ, ರೇ.ಚ.ರೇವಡಿಗಾರ, ಚನ್ನವೀರ ಸ್ವಾಮೀಜಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ತಮ್ಮದೇಯಾದ ಕೊಡುಗೆ ನೀಡಿದ ಸಾಧಕರ ಜೀವನ ಚರಿತೆಯ ಬಗ್ಗೆ ತಮ್ಮದೆಯಾದ ಶೈಲಿಯಲ್ಲಿ ಪರಿಚಯಿಸಿದ್ದಾರೆ. ಇಂತಹ ಹಿರಿಯ ಸಾಹಿತಿಯ ಕೃತಿ ಬಿಡುಗಡೆಗೊಳಿಸುವ ಸುಯೋಗ ನನ್ನದಾಗಿದೆ ಎಂದು ಹೇಳಿದರು. 

ಕೃತಿಯ ಸಾರಂಶದ ಕುರಿತು ಮಾತನಾಡಿದ ಶಿಕ್ಷಕ ಯಶವಂತರಾಯಗೌಡ ಬಿರಾದಾರ ಡಾ.ಚನ್ನಪ್ಪ ಕಟ್ಟಿ ಸಾಹಿತ್ಯದ ದೊಡ್ಡ ಮರ ಕಟ್ಟಿಯವರ ದೃಷ್ಠಿಯಲ್ಲಿ ಸೃಷ್ಠಿಯಾದ ನೆನಹು ಮಂದಾರ ಎಂಬ ಕೃತಿ 14 ಜನ ಮಹಾನ್ ಸಾಧಕರ ಯಶೋಗಾಥೆಯನ್ನು ಸಾರುತ್ತದೆ ಎಂದರು. 

ಮಾತನಾಡಿದ ಎಂ.ಎಂ.ಪಡಶೆಟ್ಟಿ ಕಟ್ಟಿ ಎಂದರೆ ಸಾಹಿತ್ಯದ ಕಟ್ಟೆ 1982ರಲ್ಲಿ ಮಹಿಳೆಯರ ಸಮ್ಮುಖದಲ್ಲಿ ಕಟ್ಟಿಯವರ ಮನೆಯ ಮಾಳಿಗೆಯಲ್ಲಿ ಜನ್ಮ ತಾಳಿದ ನೆಲೆ ಸಂಸ್ಥೆಯು ಇಲ್ಲಿಯವರೆಗೆ 40 ವರ್ಷದಲ್ಲಿ 60 ಕೃತಿಗಳನ್ನು ಪ್ರಕಾಶನ ಮಾಡಿರುತ್ತದೆ. ಅಂದಿನಿಂದ ಇಂದಿನವರೆಗೂ ಕಟ್ಟಿಯವರ ಸಹಯೋಗದಲ್ಲಿ ಸಾಹಿತ್ಯದ ಕೃಷಿ ನಡೆಸುತ್ತಾ ಬಂದಿರುತ್ತೇವೆ ಎಂದರು. 

ಹಿರಿಯ ಸಂಶೋಧಕ ಡಾ.ಎಸ್.ಕೆ ಕೊಪ್ಪ ಅಧ್ಯಕ್ಷೀಯ ಮಾತಗಳನ್ನಾಡಿದರು. 

ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನನೀಡಿದರು. 

ಶಿಕ್ಷಕ ಗುರುನಾಥ ಅರಳಗುಂಡಗಿ ಸ್ವಾಗತಿಸಿದರು ಶಿಕ್ಷಕ ಪವನ ಕುಲಕರ್ಣಿ  ನಿರೂಪಿಸಿದರು.   

ನಂತರ ನಡೆದ ಕವಿಗೋಷ್ಠಿಯನ್ನು ಹಿರಿಯ ಸಂಶೋಧಕ ಡಿ.ಎನ್.ಅಕ್ಕಿ ಉದ್ಘಾಟಿಸಿದರು. ತಾ.ಪಂ ಕೆಡಿಪಿ ಸದಸ್ಯ ಶಿವಕುಮಾರ ಬಿರಾದಾರ, ನಾಗೇಶ ತಳವಾರ, ದೇವು ಮಾಕೊಂಡ, ಅಶೋಕ ಬಿರಾದಾರ, ಕೆ.ಹೆಚ್.ಸೋಮಾಪೂರ ಶಿವಕುಮಾರ ಶಿವಶಿಂಪಿಗೇರ ಸಿದ್ರಾಮ ಬ್ಯಾಕೋಡ, ಶೈಲಶ್ರೀ ನ್ಯಾಮಣ್ಣನವರ ಬೀರಪ್ಪ ಪೂಜಾರಿ, ಚಿದಾನಂದ ಬಂಡಗಾರ, ಚಂದ್ರಶೇಖರ ಚೌರ, ವೆಂಕಟೇಶ ಕುಲಕರ್ಣಿ , ಶಿಲ್ಪಾ ಪತ್ತಾರ, ಎಸ್.ಎಸ್.ಸಾತಿಹಾಳ, ಕವಿತಾ ಪಾಟೀಲ, ರಾಚೂ ಕೊಪ್ಪ, ನಟರಾಜ ಕುಂಬಾರ, ಪರ್ತಕರ್ತರಾದ ನಾಗೇಶ ತಳವಾರ, ಸಂಗಮೇಶ ಡಿಗ್ಗಿ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ