ಎನ್.ಸಿ.ಸಿ ಶಿಬಿರಾಥರ್ಿಗಳಿಗೆ ವಿಪತ್ತು ಕುರಿತು ಅಣಕು ಪ್ರದರ್ಶನ

ಎನ್.ಸಿ.ಸಿ ಶಿಬಿರಾಥರ್ಿಗಳಿಗೆ ವಿಪತ್ತು ಕುರಿತು ಅಣಕು ಪ್ರದರ್ಶನ

ಲೋಕದರ್ಶನ ವರದಿ

ಬಳ್ಳಾರಿ 25:ಜಿಲ್ಲಾ ಗೃಹರಕ್ಷಕದಳ, ಎನ್.ಸಿ.ಸಿ ಗ್ರುಪ್ ಹೆಡ್ಕ್ವಾಟರ್ಸ್, ಅಗ್ನಿಶಾಮಕ ಇಲಾಖೆ, ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ: 25 ರಂದು ಬೆಳಿಗ್ಗೆ 10.00 ಗಂಟೆಗೆ ಎನ್.ಸಿ.ಸಿ, ವತಿಯಿಂದ ನಡೆಯುತ್ತಿರುವ "ನ್ಯಾಶನಲ್ ಇಂಟಿಗ್ರೇಶನ್ ಕ್ಯಾಂಪ್, ಕ್ಯಾಂಪ್ ಅಟ್ ತೋರಣಗಲ್ಲು ಗ್ರಾಮ ಬಳ್ಳಾರಿ ಜಿಲ್ಲೆಯಲ್ಲಿ ವಿಪತ್ತುಗಳ ಕುರಿತು ಅಣಕು ಪ್ರದರ್ಶನವನ್ನು ನಡೆಸಲಾಯಿತು. 

ಈ ಕಾರ್ಯಗಾರದಲ್ಲಿ ಕನರ್ಾಟಕ, ಗೋವಾ ಮತ್ತು ಉತ್ತರಾಖಂಡ್ ರಾಜ್ಯಗಳಿಂದ ಸುಮಾರು 600 ಜನ ಎನ್.ಸಿ.ಸಿ. ಕೆಡೆಟ್ಸ್ಗಳು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು. ಶ್ರೀ.ಎಂ.ಎ.ಷಕೀಬ್, ಜಿಲ್ಲಾ ಸಮಾದೇಷ್ಟರು, ಗೃಹರಕ್ಷಕದಳ ಬಳ್ಳಾರಿ ಇವರು ಪ್ರಕೃತಿ ವಿಕೋಪದ ಬಗ್ಗೆ ಕಾರ್ಯಗಾರವನ್ನು ನಡೆಸಿದರು. ಇವರು ಸುಮಾರು 600 ಎನ್.ಸಿ.ಸಿ. ಕೆಡೆಟ್ಸ್ಗಳಿಗೆ ಪ್ರಕೃತಿ ವಿಕೋಪದಿಂದ ಉಂಟಾದ ಸಂದರ್ಭಗಳಲ್ಲಿ ಜನರ ಪ್ರಾಣ, ಆಸ್ತಿ ಪಾಸ್ತಿ ರಕ್ಷಣೆ ಮಾಡಲು ಕೈಗೊಳ್ಳಬೇಕಾದ ರಕ್ಷಣ ಕಾರ್ಯಚರಣೆ ಬಗ್ಗೆ ವಿವರವಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಕರ್ನಲ್ ಸತೀಶ್ ಮತ್ತು ಶ್ರೀ.ಅಜಯ, ಸಿ.ಈ 34 ಬೆಟಾಲಿಯನ್, ಎನ್.ಸಿ.ಸಿ ಗ್ರೂಪ್, ಬಳ್ಳಾರಿ ಇವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಡೂರು ಅಗ್ನಿಶಾಮಕ ಠಾಣೆಯ ಎಫ್.ಎಸ್.ಓ ಅಧಿಕಾರಿ ಮತ್ತು ಇವರ ತಂಡದವರು ಅಗ್ನಿಶಾಮನ ಮತ್ತು ಅಗ್ನಿಯಿಂದ ಉಂಟಾಗುವ ಅವಘಡಗಳನ್ನು ತಡೆಗಟ್ಟುವ ವಿಧಾನಗಳನ್ನು ವಿವರವಾಗಿ ತಿಳಿಸಿದ್ದರು.

       ಶ್ರೀ.ಜಿ.ಬಸವರಾಜ್, ಘಟಕಾಧಿಕಾರಿಗಳು, ಶ್ರೀ.ಬಿ.ಕೆ.ಬಸವಲಿಂಗ, ಪ್ಲಟೂನ್ ಕಮಾಂಡರ್, ಇವರ ನೇತೃತ್ವದಲ್ಲಿನ ಗೃಹರಕ್ಷಕದಳ ರಕ್ಷಣಾ ತಂಡದ ಶ್ರೀ.ಹೆಚ್.ಲಕ್ಷ್ಮೀನಾರಾಯಣ, ಶ್ರೀ.ಕೆ.ನರಸಿಂಹ ರೆಡ್ಡಿ ಮತ್ತು ತಂಡದವರು ಅಣಕು ಪ್ರದರ್ಶನವನ್ನು ನಡೆಸಿದರು. 


ಸುದ್ದಿ ಓದಿ