ವಿ.ಎಸ್.ಕೆ.ವಿ.ವಿಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮ

ವಿ.ಎಸ್.ಕೆ.ವಿ.ವಿಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮ

ಬಳ್ಳಾರಿ 22: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಶನಿವಾರದಂದು ಶ್ರೀನಿವಾಸ ರಾಮಾನುಜನ್ರವರ ಹುಟ್ಟ ಹಬ್ಬ ಮತ್ತು ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಆಚರಿಸಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಡಾ. ರಾಜನ್ರವರು ಆಗಮಿಸಿ ರಾಮಾನುಜನ್ರವರ ಪುಸ್ತಕಗಳನ್ನು ಪ್ರದಶರ್ಿಸಿ ಹಾಗೂ ಶ್ರೀನಿವಾಸ ರಾಮಾನುಜನ್ರವರ ಬೆಳೆದು ಬಂದ ಹಾದಿ ಹಾಗೂ ವಾಸ್ತವಿಕತೆಯ ಗಣಿತ ಲೋಕದ ಬೆಳವಣಿಗೆಯನ್ನು ಹಂಚಿಕೊಂಡರು ಹಾಗೂ ಕುಲಸಚಿವರು ಆಡಳಿತ ವಿಭಾಗ ಡಾ. ತುಳಸಿಮಾಲರವರು ಕಾರ್ಯಕ್ರಮವನ್ನು ಕುರಿತು ಮಾತಾಡಿದರು ಹಾಗೂ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ|| ಎಂ.ಎಸ್.ಸುಭಾಷ್ರವರು ಗಣಿತಶಾಸ್ತ್ರದ ಮಜಲುಗಳ ಬಗ್ಗೆ ಹಾಗೂ ಗಣಿತಶಾಸ್ತ್ರದ ಪ್ರಾಮುಖ್ಯತೆಯನ್ನು ಸಂಶೋಧನೆಯಲ್ಲಿ ಕಂಡುಕೊಳ್ಳಬೇಕು ಹಾಗೂ ಉತ್ತಮ ಸಂಶೋಧನೆಯನ್ನು ಮಾಡುವ ಸಂಶೋಧನಾ ವಿದ್ಯಾಥರ್ಿಗಳಿಗೆ ಪ್ರತಿವರ್ಷ "ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಶ್ರೀನಿವಾಸ ರಾಮಾನುಜನ್ ಅತ್ಯುತ್ತಮ ಸಂಶೋಧನ ವಿದ್ಯಾಥರ್ಿ ಎಂಬ ಪ್ರಶಸ್ತಿಯನ್ನು ಘೋಷಿಸಿದರು. ಗಣಿತ ವಿಭಾಗದ ಸಂಶೋಧನ ವಿದ್ಯಾಥರ್ಿನಿಯಾದ ಸುಷ್ಮಿತಾ ಜೈನ್ರವರಿಗೆ ಈ ಪ್ರಶಸ್ತಿಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ರಾಜನ್ರವರಿಗೆ ಸನ್ಮಾನಿಸಿದರು. ಪ್ರಾಸ್ತವಿಕ ನುಡಿ ಮತ್ತು ಸ್ವಾಗತ ಭಾಷಣವನ್ನು ಪ್ರೊ. ಕೆ.ವಿ. ಪ್ರಸಾದ್, ಮುಖ್ಯಸ್ಥರು, ಗಣಿತ ವಿಭಾಗ ನೇರವೇರಿಸಿದರು. ಸಂಶೋಧನ ವಿದ್ಯಾಥರ್ಿ ವಿಶ್ವನಾಥ ಯು.ಬಿ ಗಣಿತ ವಿಭಾಗ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಂಶೋಧನಾ ವಿದ್ಯಾಥರ್ಿನಿ ವಿಹಾರಿಕ ಜೆ.ಯು, ಪ್ರಾಥರ್ಿಸಿದರು ಕೊನೆಯದಾಗಿ ವಂದನಾರ್ಪಣೆಯನ್ನು ಡಾ. ಜಿತೇಂದ್ರಕುಮಾರ್ಸಿಂಗ್, ಸಹಾಯಕ ಪ್ರಾಧ್ಯಾಪಕರು ನೇರೆವೇರಿಸಿದರು. ವಿಶ್ವವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಎಲ್ಲ ಸಂಶೋಧನ ವಿದ್ಯಾಥರ್ಿಗಳು ಮತ್ತು ಸ್ನಾತಕೋತ್ತರ ಗಣಿತ ಶಾಸ್ತ್ರ ವಿಭಾಗದ ವಿದ್ಯಾಥರ್ಿಗಳು ಭಾಗವಹಿಸಿದ್ದರು. ಕಾರ್ಯಕ್ರಮ ಅತ್ಯುತ್ತಮ ರೀತಿಯಲ್ಲಿ ಮುಂದಿನ ಪೀಳಿಗೆಗೆ ಜವಾಬ್ದಾರಿಯನ್ನು ಸಾಕ್ಷಿಕರಿಸಿದಂತೆ ನಡೆಯಿತು. 

ಸುದ್ದಿ ಓದಿ