ವಿಜಯನಗರ

ಪುರಾಣಗಳು ಮತ್ತು ಪವಾಡಗಳು ಸಾಂಸ್ಕೃತಿಕ ಶಿಕ್ಷಣದ ಪ್ರತಿಬಿಂಬ - ಡಾ. ವೀರೇಶ ಬಡಿಗೇರ

ಪುರಾಣಗಳು ಮತ್ತು ಪವಾಡಗಳು ಸಾಂಸ್ಕೃತಿಕ ಶಿಕ್ಷಣದ ಪ್ರತಿಬಿಂಬ - ಡಾ. ವೀರೇಶ ಬಡಿಗೇರ


ಪುರಾಣಗಳು ಮತ್ತು ಪವಾಡಗಳು ಸಾಂಸ್ಕೃತಿಕ ಶಿಕ್ಷಣದ ಪ್ರತಿಬಿಂಬ - ಡಾ. ವೀರೇಶ ಬಡಿಗೇರ  


ಹಂಪಿ 23: ತೀರ ಲೌಕಿಕನೂ ಅನಾಗರಿಕ ರೂಪದಲ್ಲಿದ್ದ ಮಾತಂಗತಮನು ಸುಜ್ಞಾನಿದೇವನ ಜ್ಞಾನಮಾರ್ಗದ ಸ್ಪರ್ಷದಿಂದ ನನ್ನಯ್ಯನೆಂಬ ಮಹಾಜ್ಞಾನಿ ಹಾಗೂ ಮಹಾಶಿವಭಕ್ತನಾಗಿ ಪರಿವರ್ತನೆಯಾಗುತ್ತಾನೆ. ಇದು ಜ್ಞಾನ ಸಂಪನ್ನನಾದ ಗುರುವಿನಿಂದ ಸಾಧ್ಯ ಎಂದು  ಸಂಶೋಧನ ವಿದ್ಯಾರ್ಥಿ ರಮೇಶ ಎಂ. ವಿವರಿಸಿದರು. 

ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿಶಾಸ್ತ್ರ ವಿಭಾಗದಿಂದ ದಿನಾಂಕ 22-10-2024ರಂದು ಹಳೆಯ ಹೊನ್ನು-102 (ಹಳಗನ್ನಡ ಸಾಹಿತ್ಯ ಚಿಂತನ ವೇದಿಕೆ) ಕಾರ್ಯಕ್ರಮದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ನನ್ನಯ್ಯ ಚರಿತೆ’್ರ ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಿತು.  

ನನ್ನಯ್ಯನ ಕುರಿತಾದ ಹಲವಾರು ಕೃತಿಗಳು, ಕಾವ್ಯಗಳು, ಪುರಾಣಗಳು ರಚನೆಯಾಗಿವೆ. ಪ್ರಮುಖವಾಗಿ ಪರ್ವತದೇವ ವಿರಚಿತ ನನ್ನಯ್ಯ ಚರಿತ್ರ, ಮಾದಣ್ಣ ಕವಿಯ ನನ್ನಯ್ಯಗಳ ಚಾರಿತ್ರ, ಉದ್ದಂಡ ಕವಿಯ ಸುಜ್ಞಾನಿದೇವರ ಕಾವ್ಯ, ಶ್ಯಾನುಬೋಗ ಗುರ​‍್ಪ ಅವರ ನನ್ನಯ್ಯ ಚಾರಿತ್ರ ಈ ಕೃತಿಗಳು ನನ್ನಯ್ಯನ ಕುರಿತಾದ ವಿಚಾರಗಳನ್ನು ಹೇಗೆ ನಿರೂಪಿಸಿವೆ ಎನ್ನುವುದರ ಅರ್ಥಪೂರ್ಣವಾದ ಉಪನ್ಯಾಸ ನೀಡಿದರು. 

ಹಸ್ತಪ್ರತಿಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ವೀರೇಶ ಬಡಿಗೇರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪವಾಡ ಮತ್ತು ಪುರಾಣಗಳ ನಡುವಿನ ಮನಸ್ಥಿತಿಗಳನ್ನು ಭಿನ್ನ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕಾಗಿದೆ ಎಂದು ಹೇಳಿದರು.  

ಸಂಶೋಧನಾ ವಿದ್ಯಾರ್ಥಿಗಳಾದ ಕಾವೇರಿ. ಆರ್ ಪ್ರಾರ್ಥಿಸಿದರು, ವೀಣಾ ಪಿ. ವಂದಿಸಿದರು, ಮೌನೇಶ್ ವೈ. ನಿರೂಪಿಸಿದರು. ಈ ಸಂದರ್ಭದಲ್ಲಿ ಪ್ರಾಧ್ಯಾಪಕರುಗಳಾದ ಡಾ. ಎಫ್‌.ಟಿ ಹಳ್ಳಿಕೇರಿ, ಡಾ.ಈ. ಯರಿ​‍್ರಸ್ವಾಮಿ, ಸಂಚಾಲಕ ಲಿಂಗರಾಜ ಯು., ಛಾಯಾಗ್ರಾಹಕರಾದ ಅಭಿರೂಪ್ ಎಂ.ಟಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ