ಕಾಗವಾಡ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿಯಾಗಿದೆ : ರಾಜು ಕಾಗೆ
ಕಾಗವಾಡ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿಯಾಗಿದೆ : ರಾಜು ಕಾಗೆ
ಅಥಣಿ 20 ; ಅವರು ನವಲಿಹಾಳದಿಂದ ಮೋಳೆ ತೋಟದ, ಕೆಂಪವಾಡದಿಂದ ಬಾರ್ಡರ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಮತ್ತು ಬಸವ ವಸತಿ ಯೋಜನೆಯ ಮಂಜೂರಾತಿ ಪತ್ರ ವಿತರಿಸಿ ಮಾತನಾಡುತ್ತಿದ್ದರು. ಕಾಗವಾಡ ಮತಕ್ಷೇತ್ರದಲ್ಲಿ ಕುಡಿಯುವ ನೀರು, ನೀರಾವರಿ, ರಸ್ತೆ, ವಿದ್ಯುತ್ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತಿರುವೆ ಎಂದ ಅವರು ಸಿ.ಎಮ್.ಸಿದ್ಧರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ದಿಂದ ಮಹಿಳೆಯರಿಗೆ, ಬಡವರಿಗೆ, ನಿರುದ್ಯೋಗಿ ಯುವಕರಿಗೆ ಸಾಕಷ್ಟು ಅನಕೂಲವಾಗಿದೆ ಎಂದರು. ಜಿ.ಪಂ ಅಧಿಕಾರಿ ವೀರಣ್ಣಾ ವಾಲಿ, ಗುತ್ತಿಗೆದಾರರಾದ ಶಿವಾನಂದ ಗೊಲಭಾವಿ, ಬಸವರಾಜ ನಾವಿ, ಪಿಂಟು ಮಗದುಮ್ ಧುರೀಣರಾದ ವಿನಾಯಕ ಗಾಳಿ, ಸಾವಂತ ಖಾಂಡೇಕರ, ಶಿವಬಸು ಗಾಳಿ, ಶಂಕರ ಶೆಮಡೆ, ಶಿದರಾಯ ಗಾಳಿ, ಸಚೀನ ಹೆರವಾಡೆ, ವಿಕಾಸ ಮೋರೆ, ಪ್ರಕಾಶ ಗಾಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಫೋಟೊ ಶೀರ್ಷಿಕೆ-ಕೆಂಪವಾಡ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ರಾಜು ಕಾಗೆ ಚಾಲನೆ ನೀಡಿದರು. ಈ ಸಮಯದಲ್ಲಿ ವೀರಣ್ಣಾ ವಾಲಿ, ಚನ್ನಬಸು ಗಾಲಿ ಇತರರು ಉಪಸ್ಥಿತರಿದ್ದರು.