ಜಮಖಂಡಿ

ಸರ್ಕಾರಿ ಆಸ್ಪತ್ರೆಗೆ ಸಚಿವ ಗುಂಡುರಾವ ಭೇಟಿ: ವೈದ್ಯಾಧಿಕಾರಿಗಳಿಗೆ ತರಾಟೆ

ಸರ್ಕಾರಿ ಆಸ್ಪತ್ರೆಗೆ ಸಚಿವ ಗುಂಡುರಾವ ಭೇಟಿ: ವೈದ್ಯಾಧಿಕಾರಿಗಳಿಗೆ ತರಾಟೆ

ಜಮಖಂಡಿ 29: ಐಸಿಯೂ ಇತರಹ ಇದೆ ಎನ್ರಿ, ಜನರಲ್ ವಾರ್ಡ್‌ತರ ಇದೆಯಲ್ಲ, ಎಸಿ ಬಂದ್‌ಐತಿ, ಡ್ರೆಸ್ ಕೋಡ್ ಇಲ್ಲ ಹೇಂಗ್ರಿ ಇದು, ಇದನ್ನ ಸರಿ ಮಾಡಿಸಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡುರಾವ ಮುಖ್ಯ ವೈದ್ಯಾಧಿಕಾರಿ ಡಾ.ಕೃಷ್ಣಾ ಬಣ್ಣದ ಅವರಿಗೆ ಸೂಚಿಸಿದರು. 

ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ವಾರ್ಡ ಸೇರಿದಂತೆ ವಿವಿಧ ವಿಭಾಗಗಳನ್ನು ಪರಿಶಿಲಿಸಿದರು. 

ಜಮಖಂಡಿ ಸಾವರ್ಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ರೆಡಿಯಾಲಾಜಿಷ್ಟ, ಅರವಳಿಕೆ ತಜ್ಞ, ಸರ್ಜನ್ ತಜ್ಞರು ಸೇರಿ ಹೆಚ್ಚುವರಿಯಾಗಿ 61 ಜನ ಸಿಬ್ಬಂದಿ ಕೊರತೆ ಇದ್ದು ಸಿಬ್ಬಂದಿ ನೇಮಕಾತಿಗೆ ಒಪ್ಪಿಗೆ ನೀಡಲಾಗಿದೆ ಎಂದರು. 

ಬಿ.ಪಿ.ಎಚ್‌.ಯು ಯೂನಿಟಗೆ 1 ಕೋಟಿ 20 ಲಕ್ಷ ಹಣ ಮಂಜೂರಿ ಮಾಡಲಾಗಿದೆ, ಸಾವಳಗಿ ಪಿ.ಎಚ್‌.ಸಿಯನ್ನು ಸಿ.ಎಚ್‌.ಸಿಗೆ ಅಪಗ್ರೇಡ ಮಾಡಿ 15 ಸಿಬ್ಬಂದಿ ಜನರ ನೇಮಕ ಮಾಡಲಾಗಿದೆ, ತಜ್ಞ ವೈದ್ಯರಿಗೆ ಹೆಚ್ಚುವರಿ ತರಬೇತಿ ನೀಡಲಾಗುವುದು, ಎಲ್ಲ ಓಷದಿಗಳು ಆಸ್ಪತ್ರೆಯಲ್ಲಿಯೇ ದೊರೆಯಬೇಕು. ಹೊರಗಡೆ ಚೀಟಿ ಬರೆದು ಕೊಡಲು ಅವಕಾಶವಿರುವದಿಲ್ಲ, ಸರ್ಕಾರದಿಂದ ಎಲ್ಲ ಓಷದಿಗಳು ಕಾಲ ಕಾಲಕ್ಕೆ ಸರಿಯಾಗಿ ವಿತರಣೆ ಮಾಡಲಾಗುತ್ತಿದೆ ಎಂದರು. 

ಆಸ್ಪತ್ರೆಯಲ್ಲಿ ಗಂಭೀರ ಪ್ರಕರಣಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆಯಾ ಎಂದು ವೈದ್ಯರನ್ನು ಪ್ರಶ್ನಿಸಿದರು, ಇದಕ್ಕೆ ಇಲ್ಲಿನ ವೈದ್ಯರು ಸರಿಯಾದ ಉಪಕರಣಗಳು ಇರದೆ ಇರುವದರಿಂದ ಬೇರೆಡೆ ಕಳುಹಿಸಲಾಗುತ್ತಿದೆ ಎಂದರು. ಇದಕ್ಕೆ ಆಸ್ಪತ್ರೆಗೆ ಉಪಕರಣಗಳನ್ನು ನೀಡಿದರೆ ಶಸ್ತ್ರ ಚಿಕಿತ್ಸೆ ಮಾಡುತ್ತಿರಾ ಎಂದಿದ್ದಕ್ಕೆ ಮಾಡುವದಾಗಿ ತಿಳಿಸಿದರು. ವಾರದಲ್ಲಿ ಒಂದು ದಿನ ಗಂಭೀರ ಪ್ರಕರಣಗಳಿಗೆ ಶಸ್ತ್ರ ಚಿಕಿತ್ಸೆಗಳನ್ನು ಮಾಡಬೇಕು ಎಂದು ವೈದ್ಯರಿಗೆ ಸೂಚನೆ ನೀಡಿದರು. 

ಒಂದು ತಿಂಗಳಲ್ಲಿನಲ್ಲಿ ಆಸ್ಪತ್ರೆಯ ಚಿಕಿತ್ಸಾ ಕಾರ್ಯದಲ್ಲಿ ಪ್ರಗತಿಯಾಗಬೇಕು ಅದರ ವರದಿ ನನಗೆ ನೀಡಬೇಕು ಎಂದು ವೈದ್ಯಾಧಿಕಾರಿಗೆ ಸೂಚನೆ ನೀಡಿದರು. ಅವಶ್ಯವಿರುವ ಬಟ್ಟೆ ತೊಳೆಯುವ ಯಂತ್ರ ಮತ್ತು ಡ್ರಾಯರ್‌ನ್ನು ನೀಡಲಾಗುವುದು ಎಂದರು. 

ಆಸ್ಪತ್ರೆಯಲ್ಲಿ ಎಂ.ಆರ್‌.ಐ ಸ್ಕ್ಯಾನಿಂಗ್ ಮತ್ತು ಸಿಟಿ ಸ್ಕ್ಯಾನಿಂಗ್ ಇರುವದಿಲ್ಲ ಎಂದು ಸುದ್ದಿಗಾರರು ಸಚಿವರ ಗಮನ ಸೆಳೆದಾಗ. ಇದಕ್ಕೆ ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಮಾತ್ರ ಅವಕಾಶವಿದ್ದು ಹಂತ ಹಂತವಾಗಿ ಎಲ್ಲ ಆಸ್ಪತ್ರೆಗಳಲ್ಲಿ ಎಂ.ಆರ್‌.ಐ ಸ್ಕ್ಯಾನಿಂಗ್ ಅಳವಡಿಸುವ ಕ್ರಮ ಜರುಗಿಸಲಾಗುವುದು. ನುರಿತ ವೈದ್ಯರು ಮತ್ತು ಟೆಕ್ನಿಷನ್ ಸಿಬ್ಬಂದಿಗಳ ಕೊರತೆ ಇದ್ದು ಆದಷ್ಟು ಬೇಗನೆ ನೇಮಕಾತಿ ಮಾಡಿಕೊಂಡು. ಮುಂಬರುವ ದಿನಗಳಲ್ಲಿ ನಿಗಾ ಘಟಕ ತೆರೆಯಲಾಗುವುದು ಎಂದರು.  

ಆಸ್ಪತ್ರೆಯಲ್ಲಿರುವ ರೋಗಿಗಳ ಹಾಗೂ ಪೊಷಕರ ಬಳಿ ತೆರಳಿ ಯೋಗ ಕ್ಷೇಮದ ಬಗ್ಗೆ ವಿಚಾರಿಸುವುದರ ಜೊತೆಗೆ ಆಸ್ಪತ್ರೆಯಲ್ಲಿನ ವ್ಯವಸ್ಥೆ ಬಗ್ಗೆ ವಿಚಾರಿಸಿದರು. 



ಸುದ್ದಿ ಓದಿ