ಎಸ್ಎಸ್ಎಲ್ಸಿ ಮಕ್ಕಳಿಗಾಗಿ ಗಣಿತ ನೇರ ಫೋನ್ ಇನ್ ಕಾರ್ಯಕ್ರಮ ಯಶಸ್ವಿ
ಗಂಗಾವತಿ : ನಗರದ ವಿವೇಕಾನಂದ ಕಾಲೋನಿಯಲ್ಲಿನ ಗ್ರಾಮೀಣ ಭಾರತಿ ರೇಡಿಯೋ ನಿಲಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗಂಗಾವತಿ ಇವರ ಸಂಯುಕ್ತ ಆಶ್ರಯದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಗಣಿತ ವಿಷಯದ ರೇಡಿಯೋ ಪಾಠಗಳು ಯಶಸ್ವಿಯಾಗಿ ಪ್ರಸಾರಗೊಂಡಿತು.
ಗಂಗಾವತಿ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 10ನೇ ತರಗತಿಯ ಫಲಿತಾಂಶ ಸುಧಾರಣೆ ಸರಣಿ ಕಾರ್ಯಕ್ರಮದಲ್ಲಿ ಇಂದು ಗಣಿತ ವಿಷಯ ಸಂಪನ್ಮೂಲ ಶಿಕ್ಷಕರು ಅನ್ಮೋಲ್ ಪ್ರಶಸ್ತಿ ಪಡೆದ ಸಿದ್ಧಲಿಂಗೇಶ್ ಪೂಲಭಾವಿ, ಕೆ.ರಮೇಶ, ಹೇಮಂತ್ ಕುಮಾರ್ ರವವರು ಭಾಗವಹಿಸಿ ಅತ್ಯತ್ತಮವಾಗಿ ಮಕ್ಕಳಿಗೆ ರೇಡಿಯೋ ಪಾಠವನ್ನು ಬೋಧಿಸಿದರು.
ಈ ವೇಳೆ ಶಿಕ್ಷಕ ಸಿದ್ಧಲಿಂಗೇಶ್ ಪೂಲಭಾವಿ ಮಾತನಾಡಿ, ಗಣಿತ ಕಬ್ಬಿಣದ ಕಡಲೆಯಲ್ಲ, ಅದನ್ನ ಸರಳವಾಗಿ ಅರ್ಥೈಸಿಕೊಂಡು ರೂಢಿ ಮಾಡಿಕೊಂಡರೆ ಗಣಿತವನ್ನು ಸಹ ಮಿಠಾಯಿ ರೀತಿ ಚಪ್ಪರಿಸಬಹುದು ಎಂದರು.ಗಣಿತದ ಮೂಲ ಕ್ರಿಯೆಗಳಾದ ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರ ಲೆಕ್ಕಗಳನ್ನು ಕ್ರಮಬದ್ಧವಾಗಿ ಕಲಿತರೆ ಗಣಿತ ಎಂದಿಗೂ ಕಷ್ಟವಾಗಲ್ಲ. ಉರ್ದು ವಿನ ಒಂದು ಮಾತಿನಂತೆ "ಸೌ ಬಕನಾ ಎಕ್ ಲಿಖನಾ" ಎನ್ನುವಂತೆ ಮಕ್ಕಳಿಗೆ ಲೆಕ್ಕಗಳನ್ನ ಬರೆದು ಅಭ್ಯಾಸ ಮಾಡಲು ತಿಳಿಸಿದರು. ಅಲ್ಲದೆ ಗಂಗಾವತಿ ತಾಲೂಕು ಗಣಿತ ಶಿಕ್ಷಕರ ವೇದಿಕೆಯಿಂದ ಇ0ದಿನ ಸಂಚಿಕೆಯಲ್ಲಿ ನೀಡಿದ ಚಟುವಟಿಕೆಗೆ ಮೊದಲು ಉತ್ತಲು ವಾಟ್ಸಪ್ ಮೂಲಕ ಮೊದಲು ಉತ್ತರಿಸಿದ ಒಬ್ಬ ವಿದ್ಯಾರ್ಥಿಗೆ ಬಹುಮಾನ ಘೋಷಿಸಿದರು.
ಇದೇ ವೇಳೆ ಕೆ.ರಮೇಶರವರು ಮಾತನಾಡಿ ವಿಶೇಷವಾಗಿ ಗಣಿತ ಶಿಕ್ಷಕರು ಮಕ್ಕಳೊಂದಿಗೆ ಪಾಠ ಬೋಧನೆ ಮಾಡುವಾಗ ಸಮ,ಸಹಜ ಸ್ಥಿತಿಯ ಮನೋಭಾವವನ್ನು ಹೊಂದಿರಬೇಕು. ಮಕ್ಕಳಿಗೆ ಚಟುವಟಿಕೆಯ ಮೂಲಕ ಲೆಕ್ಕಗಳನ್ನು ತಿಳಿಸಲು ಶಿಕ್ಷಕರಿಗೆ ಕರೆ ನೀಡಿದರು.
ಜೊತೆಗೆ ಸಂಪನ್ಮೂಲ ಶಿಕ್ಷಕ ಹೇಮಂತ ಕುಮಾರ್ ರವರು ಮಕ್ಕಳಿಗೆ ಪಾಠಗಳಿಗೆ ಸಂಬಂಧಪಟ್ಟ ಪರೀಕ್ಷೆಗೆ ಬರಬಹುದಾದ ಲೆಕ್ಕಗಳ ಮಾಹಿತಿಯನ್ನು ನೀಡಿದರು ಹಾಗೂ ಪರೀಕ್ಷೆಗೆ ಇರುವ ಒಟ್ಟು ಅಂಕಗಳ ಮತ್ತು ಪ್ರಶ್ನೆಗಳ ವಿವರವನ್ನ ಸೊಗಸಾಗಿ ನೀಡಿದರು.
ಈ ವೇಳೆ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ರಾಘವೇಂದ್ರ ಪಿ.ಸಿ. ಗ್ರಾಮೀಣ ಭಾರತಿ 90.4ಎಫ್ಎಂ.ನ ನಿಲಯ ನಿದರ್ೇಶಕರಾದ ರಾಘವೇಂದ್ರ ತೂನ ಮತ್ತು ನಿಲಯ ವ್ಯವಸ್ಥಾಪಕ ಲಾವಣ್ಯ ಅಂಚಕಟ್ಲು ಉಪಸ್ಥಿತರಿದ್ದರು.
ನ.08 ರಂದು ಮಧ್ಯಾಹ್ನ 3.30 ನಿಮಿಷಕ್ಕೆ ಇಂಗ್ಲಿಷ್ ವಿಷಯದ ರೇಡಿಯೋ ಪಾಠಗಳು ಪ್ರಸಾರವಾಗುತ್ತೆ.
ಸಂಪನ್ಮೂಲ ಶಿಕ್ಷಕರೊಂದಿಗೆ ರೇಡಿಯೋ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಾತನಾಡಲು ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಿ ಹೆಸರು ನೋಂದಾಯಿಸಲು ಕೋರಲಾಗಿದೆ. ಮೊ.ಸಂ: 9449015757, 951332666