ಜಮಖಂಡಿ

ಬಿಜೆಪಿ ಪಕ್ಷದಿಂದ ಬೃಹತ್ ಪ್ರತಿಭಟನಾ ರ್ಯಾಲಿ

ಬಿಜೆಪಿ ಪಕ್ಷದಿಂದ ಬೃಹತ್ ಪ್ರತಿಭಟನಾ ರ್ಯಾಲಿ

ಲೋಕದರ್ಶನ ವರದಿ,

ಜಮಖಂಡಿ 18: ಸ್ಥಳೀಯ ಶಾಸಕ ಆನಂದ ನ್ಯಾಮಗೌಡ ಅವರು ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳಲು, ಮುಸ್ಲಿಂ ತುಷ್ಠೀಕರಣಗೊಳಸಲು ಮುಂದಾಗುತ್ತಿದ್ದು, ಸರ್ಕಾರಿ ಕರ್ತವ್ಯದಲ್ಲಿನ ಪಿಎಸ್ಐ ಅವರ ವಿರುದ್ಧ ಗುಂಡಾಗಿರಿ ನಡೆಸಿ ಅವರ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ್ದು, ಖಂಡನೀಯವಾಗಿದೆಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಆರೋಪಿಸಿದರು.

ದೇಸಾಯಿ ವೃತ್ತದಲ್ಲಿ ಶಾಸಕರ ರ್ದುನಡತೆ ವಿರುದ್ದ ಬಿಜೆಪಿ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ರ್ಯಾಲಿ ನಂತರ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯ ಹೆದ್ದಾರಿಯಲ್ಲಿ ಸರ್ಕಾರದ ಅನುಮತಿ ಇಲ್ಲದೇ ನಾಮಫಲಕ ನಿರ್ಮಾಣ ಮಾಡಿ ಮುಸ್ಲಿಂ ಸಮೂದಾಯವನ್ನು ಓಲೈಸಿಕೊಳ್ಳಲು ಕಾಂಗ್ರೆಸ ಪಕ್ಷವರು ಹುನ್ನಾರ ನಡೆಸುತ್ತಿದ್ದು, ಬೇಕಾಯ್ದೆಶೀರ ವೃತ್ತ ನಿರ್ಮಿ ಸಿ ಜಾತಿ-ಜಾತಿ ಮಧ್ಯ ಜಗಳ ಹಚ್ಚುವ ಕಾರ್ಯಕ್ಕೆ ಶಾಸಕರು ತೊಡಗಿದ್ದಾರೆಂದು ಆರೋಪಿಸಿದರು.

ಕೋಮು ದಳ್ಳೂರಿ ಹಚ್ಚಲು ಶಾಸಕರು ಮುಂದಾಗಿದ್ದು, ರಾಷ್ಟ್ರಭಕ್ತ ತತ್ವಜ್ಞಾನಿ ಗುರುದೇವ ರಾನಡೆ ಭವನ ನಿರ್ಮಿಸಲು ಇಂದಿನ ಶಾಸಕರು ಆಸಕ್ತಿ ತೋರಿಸದೇ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ವಹಿಸುವ ನೆಪ ಮಾಡುತ್ತಿದ್ದಾರೆ, ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲು ನಿರಾಸಕ್ತಿ ತೋರಿದಿದ್ದು, ಇಂತಹ ನಾಮಫಲಕಗಳನ್ನು ನಿಮರ್ಿಸಿ ಹೆಸರುವಾಸಿಯಾಗುವ ಚಿಲ್ಲರೆ ರಾಜಕೀಯ ಕೆಲಸ ಬಿಟ್ಟು ಜನಪರ ಕಾಮಗಾರಿ ಮಾಡಬೇಕೆಂದು ಕಿವಿ ಮಾತಿ ಹೇಳಿದರು.

ತಾಲೂಕಿನ ಹಿರೇಪಡಸಲಗಿ ಗ್ರಾಮದಲ್ಲಿ ಸಕ್ಕರೆ ಕಾರ್ಖಾನೆಗೆ ರೈತರಿಂದ ಜಮೀನು ಪಡೆದು ಅವರಿಗೆ ನೀಡಬೇಕಾದ ಪರಿಹಾರ ಧನ ನೀಡದೆ ಸತಾಯಿಸುತ್ತಿದ್ದು, ಜಮಖಂಡಿ ರಾಮ ತೀರ್ಥದಲ್ಲಿ ಅರಣ್ಯ ಪ್ರದೇಶದಲ್ಲಿ ಜಾಗೆ ಕಬಳಿಸಕೊಂಡು ಶಾಲೆ ನಿರ್ಮಿಸಿದ್ದು, ಇಂತಹ ಅನೇಕ ಪ್ರಕರಣಗಳನ್ನು ಅವರು ಮಾಡಿದ್ದು, ಈಗ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಇಂತಹ ಜಾತಿ ದಳ್ಳುರಿ ಎಬ್ಬಿಸುವ ಕೆಲಸಕ್ಕೆ ಕೈ ಹಾಕಿರುವುದನ್ನು ಜನತೆ ತಪ್ಪಿಸಬೇಕಾಗಿದೆ ಎಂದರು.

ದೆಹಲಿಯ ಪಪ್ಪುಗೆ(ರಾಹುಲ್ ಗಾಂದಿ) ಕಲಿಸಿದ ಪಾಠವನ್ನು ಜಮಖಂಡಿಯ ಪಪ್ಪು (ಆನಂದ ನ್ಯಾಮಗೌಡ)ಗೆ ಜನತೆ ತಕ್ಕ ಪಾಠ ಕಲಿಸುವ ಕಾಲ ಸನಿಹ ಬಂದಿದೆಂದು ಲೇವಡಿ ಮಾಡಿದರು. ಜನತೆಗೆ ತಪ್ಪು ಸಂದೇಶ ನೀಡಿ,ಪಾದಯಾತ್ರೆ ನೆಪವೊಡ್ಡಿ ತಮ್ಮ ಕಡೆ ಗಮನ ಹರಿಸುವಂತೆ ಮಾಡುವ ನಾಟಕವನ್ನು ಬಿಡಬೇಕು. ಕಾನೂನು ಪಾಲನೆ ಮಾಡುವವರನ್ನು ರಕ್ಷಿಸುವ ಜನಪ್ರತಿನಿಧಿಗಳೆ ಅವರ ವಿರುದ್ದ ಹರಿಹಾಯ್ದರೆ ಅವರ ಪಾಡೇನು ಎಂದು ಪ್ರಶ್ನಿಸಿದರು. 

ನಂದು ಗಾಯಕವಾಡ, ಬಿಎಸ್.ಸಿಂಧೂರ, ಜಿ.ಎಸ್.ನ್ಯಾಮಗೌಡ, ಹಣಮಂತರಾಯ ಬಿರಾದಾರ, ಸಿ.ಟಿ.ಉಪಾಧ್ಯೆ, ಕುಶಾಲ ವಾಗಮೋರೆ, ಯಮನೂರ ಮೂಲಂಗಿ, ಗಾಯಕವಾಡ ಅನೇಕರು ಮಾತನಾಡಿದರು.

ಹಳೆ ತಹಸೀಲ್ದಾರ ಕಚೇರಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಗರದ ವಿವಿಧ ಬೀದಿಗಳಲ್ಲಿ ಹಾಯ್ದು ಎ..ಜಿ.ದೇಸಾಯಿ ವೃತ್ತದಲ್ಲಿ ಉಪವಿಭಾಗಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಡಾ,ವಿಜಯಲಕ್ಷ್ಮೀ ತುಂಗಳ, ವಿಜಯಲಕ್ಷ್ಮೀ ಉಕಮನಾಳ, ಯೋಗಪ್ಪ ಸವದಿ, ಮೋಹನ ಜಾಧವ, ಗೀತಾ ಸೂರ್ಯವಂಶಿ, ಸದಾಶಿವ ಕವಟಗಿ, ಮಲ್ಲು ದಾನಗೌಡ, ಶೈಲೇಶ ಅಪ್ಟೆ, ಬಸವರಾಜ ಕಲೂತಿ, ಡಾ.ರಾಕೇಶ ಲಾಡ, ಶ್ರೀಧರ ಕಂಬಿ, ರಮೇಶ ಆಲಬಾಳ, ಅಜೇಯ ಕಟಪಟ್ಟಿ,. ಮಹಾದೇವ ನ್ಯಾಮಗೌಡ, ಸುರೇಶಗೌಡ ಪಾಟೀಲ, ಉಮೇಶ ಆಲಮೇಲಕರ, ರಾಜೇಸಾಬ ಕಡಕೋಳ ಅನೇಕರು ಇದ್ದರು.


ಸುದ್ದಿ ಓದಿ