ಅಯ್ಯಪ್ಪ ದೇವಸ್ಥಾನದಲ್ಲಿ ಶ್ರದ್ಧಾಭಕ್ತಿಯಿಂದ ಮಂಡಲಪೂಜೆ

ಅಯ್ಯಪ್ಪ ದೇವಸ್ಥಾನದಲ್ಲಿ ಶ್ರದ್ಧಾಭಕ್ತಿಯಿಂದ ಮಂಡಲಪೂಜೆ

ಬಳ್ಳಾರಿ 27: ನಗರದ ರಾಘವೇಂದ್ರ ಕಾಲೊನಿಯಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ ಗುರುವಾರ ಮಂಡಲಪೂಜೆ  ಕಾರ್ಯಕ್ರಮ ನಡೆಯಿತು. ಶಬರಿಮಲೆ ದೇವಸ್ಥಾನದ ಪ್ರತಿರೂಪದಂತೆ ನಿಮರ್ಿಸಿರುವ ಈ ದೇವಸ್ಥಾನದಲ್ಲಿ 

ಇರಮೂಡಿ ಪಾಲಿಸಿದವರಿಗೆ ಮಾತ್ರ ಪವಿತ್ರ 18 ಮೆಟ್ಟಿಲುಗಳ ಪ್ರವೇಶಕ್ಕೆ ಅವಕಾಶ ದೊರಕಿಸಿದರು. ನಸುಕಿನಲ್ಲಿ ಅಯ್ಯಪ್ಪಸ್ವಾಮಿಗೆ ವಿಶೇಷ ಪೂಜೆ ನೆರೆವೇರಿತು. ದೇಶದ 18 ನದಿಗಳಿಂದ ತಂದ ಜಲದಿಂದ ಅರತ್ತುಪೂಜೆಯನ್ನು ನೆರೆವೇರಿಸಿದರು. ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ, ವಿಧಾನ ಪರಿಷತ್ ಸದಸ್ಯೆ ಕೆಸಿ ಕೊಂಡಯ್ಯ ಆಗಮಿಸಿ ಪೂಜಾಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಬರಿ ಅಯ್ಯಪ್ಪ ಟ್ರಷ್ಟ್ ನ ಅಧ್ಯಕ್ಷ ಜಯಪ್ರಕಾಶ.ಜೆ ಗುಪ್ತ ಅವರ ಸಾರಿತ್ಯದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಂತರ ಕಂಚಿಮೇಳ, ಚಂಡಿ ವಾದ್ಯಗಳೊಂದಿಗೆ ಆಕರ್ಷಕ ಮೆರವಣಿಗೆ ನಡೆಯಿತು. ನಗರದ ನೂರಾರು ಭಕ್ತಾಧಿಗಳು ಭಾಗವಹಿಸಿದ್ದರು. ಸಂಜೆ ಖ್ಯಾತ ಸಂಗೀತ ನಿಧರ್ೇಶಕ ಕೆ.ಕಲ್ಯಾಣ ಅವರಿಂದ ಗಾಯನ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಇದನ್ನು ವಿಕ್ಷಿಸಲು ನಗರ ಮತ್ತು ಸುತ್ತ-ಮುತ್ತಲಿನ ಪ್ರದೇಶದ ಸಾವಿರಾರು ಭಕ್ತಾಧಿಗಳು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ನಸುಕಿನಲ್ಲಿ ನಡೆದ 18 ನದಿಗಳಿಂದ ತಂದ ಜಲದಿಂದ ಅರತ್ತುಪೂಜೆಯನ್ನು ನೋಡಲು ಎರಡು ಕಣ್ಣು ಸಾಲದು ಎಂದು ಭಕ್ತಾಧಿಗಳು ಮಾತನಾಡಿಕೊಳ್ಳುತ್ತಿದ್ದರು. ಇದೆ ಮೊದಲನೇ ಬಾರಿಗೆ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಟ್ರಷ್ಟ್ ನ ಅಧ್ಯಕ್ಷರಿಗೆ ಶುಭಾಶಯ ಕೋರಿದರು. 

 

ಸುದ್ದಿ ಓದಿ