ಅನುಭವಗಳಿಂದ ಮನುಷ್ಯ ತನ್ನ ಜೀವನದಲ್ಲಿ ಪಾಠ ಕಲಿಯುತ್ತಾನೆ
ಲೋಕದರ್ಶನ ವರದಿ,
ಜಮಖಂಡಿ: 25: ಅನುಭವ ಸಾಮಾನ್ಯವಾಗಿ ಇಂದ್ರೀಯಗಳ ಮೂಲಕವಾಗಿ ನಾವು ಪಡೆಯುವ ಸಂವೇದನೆಯಾಗಿದೆ. ಇಂದ್ರಿಯಾತೀತವಾಗಿ ಹೃದಯೆಂದ್ರಿಯವೇ ಸಾಧನವಾಗಿ ಪಡೆಯುವ ಅತೀಂದ್ರಿಯ ಆಧ್ಯಾತ್ಮಿಕ ಅನುಭವವೇ ಅನುಭಾವ ಎಂದು ಗದುಗಿನ ಶಿವಾನಂದ ಬೃಹನ್ಮಠದ ಸದಾಶಿವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ತಾಲ್ಲೂಕಿನ ಹುಲ್ಯಾಳ ಗ್ರಾಮದ ಶ್ರೀಗುರುದೇವಾಶ್ರಮದಲ್ಲಿ ನಡೆದ ಶ್ರೀಗುರುದೇವ ಸತ್ಸಂಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಅನುಭವ ಮತ್ತು ಅನುಭಾವ ಕುರಿತು ಚಿಂತನೆ ಮಾಡಿ ಮಾತನಾಡಿದರು,
ಅನುಭವಗಳಿಂದ ಮನುಷ್ಯ ತನ್ನ ಜೀವನದಲ್ಲಿ ಪಾಠ ಕಲಿಯುತ್ತಾನೆ. ಆದರೆ, ಆಧ್ಯಾತ್ಮಿಕ ಪ್ರತ್ಯಾಕ್ಷಾನುಭೂತಿಯೇ ಅನುಭಾವ ಎನಿಸಿದೆ. ಮನಸ್ಸುಗಳ ಮೇಲೆ ಉಂಟು ಮಾಡುವ ಪರಿಣಾಮವೇ ಅನುಭವದ ಅತ್ಯುನ್ನತ ಸ್ಥಿತಿಯೆ ಅನುಭಾವ. ಅನುಭಾವವಾಗಿ ಬದಲಾಗಲು ಶಿವಾನುಭವ ಮಾಡಬೇಕು. ಸತ್ಸಂಗದಲ್ಲಿದ್ದುಕೊಂಡು ಎಲ್ಲ ಭೇದಗಳನ್ನು ತೆಗೆದ ಮೇಲೆ ನೈವೇದ್ಯ ಪ್ರಸಾದವಾಗುತ್ತದೆ, ದೇವಸ್ಥಾನ ಅಧ್ಯಾತ್ಮ ಕೇಂದ್ರವಾಗುತ್ತದೆ ಎಂದು ನುಡಿದರು.
ಗುರುದೇವಾಶ್ರಮದ ಹಷರ್ಾನಂದ ಮಹಾಸ್ವಾಮಿಗಳು ಅನುಭಾವ ಹಂಚಿಕೊಂಡರು. ಅನ್ನ ಪ್ರಸಾದದ ವ್ಯವಸ್ಥೆ ಮಾಡಿದ್ದ ಪ್ರೊ.ಬಸವರಾಜ ಕಡ್ಡಿ ಹಾಗೂ ಶಕುಂತಲಾ ಕಡ್ಡಿ ದಂಪತಿಯನ್ನು ಸನ್ಮಾನಿಸಲಾಯಿತು.
ಬಿ.ಎನ್. ಅಸ್ಕಿ, ಚೈತ್ರಾ ಪಾಟೀಲ ಸಂಗೀತ ಸೇವೆ ಸಲ್ಲಿಸಿದರು. ಈಶ್ವರಿ ಮಲಕನ್ನವರ ಪ್ರಾರ್ಥನೆ ಗೀತೆ ಹಾಡಿದರು. ಮಲ್ಲೇಶ ಗೆದ್ದೆಪ್ಪನವರ ನಿರೂಪಿಸಿದರು.