ಜಮಖಂಡಿ

ಮೂರನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಾಹಾಪೂಜೆ

ಮೂರನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಾಹಾಪೂಜೆ
ತಾಲ್ಲೂಕಿನ ಆಲಬಾಳ ಗ್ರಾಮದಲ್ಲಿ ಮಣಕಂಠನ ಸ್ವಾಮಿಯ ಸನನಿಧ್ಯಾನದಲ್ಲಿ ಮೂರನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಾಹಾಪೂಜೆಯಲ್ಲಿ ಅ

ಜಮಖಂಡಿ 25: ತಾಲೂಕಿನ ಆಲಬಾಳ ಗ್ರಾಮದಲ್ಲಿ ಮಣಕಂಠನ ಸ್ವಾಮಿಯ ಸನನಿಧ್ಯಾನದಲ್ಲಿ ಮೂರನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಾಹಾಪೂಜೆಯಲ್ಲಿ ಅಯ್ಯಪ್ಪನ ಮಾಲಾಧಾರಿಗಳು ಭಕ್ತಿಯಿಂದ ಎಣ್ಣಿ ಸೇವೆಯನ್ನು ಸಲಿಸಿದ್ದರು.

ಅಯ್ಯಪ್ಪ ಸ್ವಾಮಿಯ ಆಭರಣಗಳ ಪಟ್ಟಿಗೆಯನ್ನು ಅಯ್ಯಪ್ಪನ ಹಾಡಿನೊಂದಿಗೆ ಕುಣಿಯುತ್ತಾ ಎಲ್ಲ ಮಾಲಾಧಾರಿಗಳು ಸನ್ನಿಧಾನಕ್ಕೆ ತಂದರು. ಹಾಲು,ತುಪ್ಪ, ಜೇನು ತುಪ್ಪ, ಮೊಸರು, ಕುಂಕುಮ, ಭಸ್ಮ ಹೀಗೆ ಹಲವಾರು ತರಹದಿಂದ ಅಯ್ಯಪ್ಪನ ಮೂರ್ತಿಗೆ ಪೂಜೆಯನ್ನು ಸಲಿಸಿ. ವಿವಿಧ ಬಗ್ಗೆಯ ಹೂಗಳಿಂದ ಅಲಂಕರಿಸಿದರು. ಅಯ್ಯಪ್ಪ ಸ್ವಾಮಿಯ ಸನನಿಧ್ಯಾನದಲ್ಲಿ ಕುದಿಯುತ್ತಿರುವ ಎಣ್ಣೆಯಲ್ಲಿ ಬಜ್ಜಿಗಳನ್ನು ತೆಗೆಯುವ ಮೂಲಕ ಮಾಲಾಧಾರಿಗಳು ಭಕ್ತಿ, ಭಾವದಿಂದ ಎಣ್ಣಿ ಸೇವೆಯನ್ನು ಸಲಿಸಿದರು.

ಸದಾನಂದ ಗುರುಸ್ವಾಮಿ ಮಾತನಾಡಿ, 48 ದಿನಗಳವರೆಗೆ ಕಠಿಣ ವೃತ್ತವನ್ನು ಭಕ್ತಯಿಂದ ಅಯ್ಯಪ್ಪ ಸ್ವಾಮಿಗೆ ಪೂಜೆಯನ್ನು ಸಲಿಸುತ್ತೇವೆ. ಹುಬ್ಬಳಿಯ ಮೋಹನ ಗುರು ಸ್ವಾಮಿಯ ಶಿಷ್ಯರಾಗಿದ್ದು. ಪ್ರತಿ ವರ್ಷವು ಕೂಡ ಕೇವಲ ಅಯ್ಯಪ್ಪನ ಭಜನೆ, ಹಾಡುಗಳಿಂದ ಮಾತ್ರ ಈ ಸನ್ನಿಧಾನದಲ್ಲಿ ನಡೆತಯತ್ತಿತ್ತು. ಇದು ಮೂರನೇ ವರ್ಷದ ಮಹಾ ಪೂಜೆ ಆಗಿರುವದಿಂದ ಎಣ್ಣೆ ಸೇವೆಯನ್ನು ಮಾಡಲಾಗಿದೆ. ಇದೊಂದು ಪುಟ್ಟ ಗ್ರಾಮವಾಗಿದರು ಸಹ ಅಯ್ಯಪ್ಪನ ಭಕ್ತಿಯ ನಾಮಸ್ಮರಣೆ ನಡೆಯುತ್ತಿದೆ. ಹುಬ್ಬಳ್ಳಿ, ಮುಧೋಳ ಹಾಗೂ ಬೇರೆ ಜಿಲ್ಲೆಯಿಂದ ಸಹ ಮಾಲಾಧಾರಿಗಳು ಆಗಮಿಸಿ ಪೂಜೆಯನ್ನು ಸಲಿಸಿದ್ದಾರೆ. ಪ್ರತಿ ವರ್ಷವು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಮಾಲಾಧಾರಿಗಳು ಭಾಗವಹಿಸಿ ಪೂಜೆಯನ್ನು ಸಲಿಸಬೇಕೆಂದರು. 

ಪತ್ರಕರ್ತರಾದ ಶಶಿಕಾಂತ ತೇರದಾಳ, ಪರುಶರಾಮ ಕಾಂಬಳೆ ಸಹ ಭಕ್ತಿ,ಭಾವದಿಂದ ಎಣ್ಣಿ ಸೇವೆಯನ್ನು ಸಲಿಸಿದರು. ಗುರುಸ್ವಾಮಿಗಳಾದ ಅಭಯ ಗುರುಸ್ವಾಮಿ, ಗೋಪಾಲ ಗುರುಸ್ವಾಮಿ, ಶಿವಲಿಂಗ ಗುರುಸ್ವಾಮಿ, ಅಜೇಯ ಗುರುಸ್ವಾಮಿ, ಸಿದ್ದು ಗುರುಸ್ವಾಮಿ, ಹನುಮಂತ ಗುರುಸ್ವಾಮಿ, ಮಾದೇವ ಗುರುಸ್ವಾಮಿ, ಮಾಲಾಧಾರಿಗಳಾದ ಚಿದಾನಂದ ಸ್ವಾಮಿ, ವಿಜಯ ಸ್ವಾಮಿ, ಮಲ್ಲು ಸ್ವಾಮಿ, ಪುಂಡಲಿಕ ಸ್ವಾಮಿ, ಸಿದ್ದು ಸ್ವಾಮಿ ಸೇರಿದಂತೆ ಅನೇಕ ಮಾಲಾಧಾರಿಗಳು ಮತ್ತು ಮಹಿಳೆಯರು, ಮಕ್ಕಳು, ಯುವಕರು  ಗ್ರಾಮಸ್ಥರು ಅಯ್ಯಪ್ಪ ಸ್ವಾಮಿಯ ಮಾಹಾ ಪೂಜೆಯಲ್ಲಿ ಭಾಗಿಯಾಗಿದ್ದರು. 


ಸುದ್ದಿ ಓದಿ